ದೇರಳಕಟ್ಟೆ: ಬದ್ರಿಯಾ ಜುಮಾ ಮಸ್ಜಿದ್ , ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ಹಜ್ ಯಾತ್ರಿಕರಿಗೆ ತರಬೇತಿ, ಬೀಳ್ಕೊಡುಗೆ ಸಮಾರಂಭ

Date:

ದೇರಳಕಟ್ಟೆ: ಬದ್ರಿಯಾ ಜುಮಾ ಮಸ್ಜಿದ್ ಮತ್ತು ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ (ರಿ.) ದೇರಳಕಟ್ಟೆ ಇವುಗಳ ಜಂಟಿ ಆಶ್ರಯದಲ್ಲಿ 2026ನೇ ಸಾಲಿನ ಹಜ್ ಯಾತ್ರಿಕರಿಗಾಗಿ ವಿಶೇಷ ತರಬೇತಿ ಶಿಬಿರ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವು ದೇರಳಕಟ್ಟೆಯ ಬಿ.ಜೆ.ಎಂ ಆಡಿಟೋರಿಯಂನಲ್ಲಿ ನಡೆಯಿತು.


​ಕಾರ್ಯಕ್ರಮವು ಬದ್ರಿಯಾ ಜುಮಾ ಮಸ್ಜಿದ್‌ನ ಖತೀಬರಾದ ತಾಜ್ಜುದ್ದೀನ್ ರಹ್ಮಾನಿ ಅವರ ದುವಾ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಬದ್ರಿಯಾ ಜುಮಾ ಮಸ್ಜಿದ್‌ನ ಅಧ್ಯಕ್ಷರಾದ ಅಬ್ದುಲ್ ಆರ್. ಅಹಮದ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


​ ಹಜ್ ಯಾತ್ರೆಯ ಪವಿತ್ರ ವಿಧಿವಿಧಾನಗಳ ಬಗ್ಗೆ ತರಬೇತುದಾರರಾದ ಸಿರಾಜುದ್ದೀನ್ ಫೈಝಿ ಬಪ್ಪಲಿಗೆ ಅವರು ಯಾತ್ರಿಕರಿಗೆ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು.


​ವೇದಿಕೆಯಲ್ಲಿ ಅನ್ಸಾರುಲ್ ಮುಸ್ಲಿಮ್ ಅಸೋಸಿಯೇಷನ್ (ರಿ.) ದೇರಳಕಟ್ಟೆಯ ಅಧ್ಯಕ್ಷ ಅಬ್ದುಲ್ ಲತೀಫ್ ಯಾಸೀನ್, ಬದ್ರಿಯಾ ಜುಮಾ ಮಸ್ಜಿದ್‌ನ ಗೌರವ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಬದ್ರಿಯಾ ಜುಮಾ ಮಸ್ಜಿದ್ ಉಪಾಧ್ಯಕ್ಷರಾದ ಅಬುಸ್ವಾಲಿ ,ದೇರಳಕಟ್ಟೆ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಸಿದ್ದೀಕ್ ಡಿ ಎಂ , ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಪ್ರದಾನ ಕಾರ್ಯದರ್ಶಿ ಅಬ್ದುಲ್ ಮುತಾಲಿಬ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಬದ್ರಿಯಾ ಜುಮಾ ಮಸ್ಜಿದ್ ಹಾಗೂ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್‌ನ ಸರ್ವ ಆಡಳಿತ ಮಂಡಳಿ ಸದಸ್ಯರು ಮತ್ತು ಜಮಾತಿನ 23 ಹಜ್ ಯಾತ್ರಿಕರು ಭಾಗವಹಿಸಿದ್ದರು. ಯಾತ್ರಿಕರಿಗೆ ಈ ಸಂದರ್ಭದಲ್ಲಿ ಶುಭ ಹಾರೈಸಿ ಬೀಳ್ಕೊಡಲಾಯಿತು.
ಬದ್ರಿಯಾ ಜುಮಾ ಮಸ್ಜಿದ್‌ನ ಪ್ರಧಾನ ಕಾರ್ಯದರ್ಶಿ ರಶೀದ್ ಡಿ. ಎಮ್. ಸ್ವಾಗತಿಸಿದರು. ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್‌ನ ಜೊತೆ ಕಾರ್ಯದರ್ಶಿ ಶಿಹಾಬುದ್ದೀನ್ ದೇರಳಕಟ್ಟೆ ವಂದಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆ

ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ...

ಆಗಸ್ಟ್ 26 ರಂದು ಅಬುದಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ಧತೆ

ಅಬುದಾಬಿ: ಪ್ರವಾದಿ ಮುಹಮ್ಮದ್ ﷺ ರವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಕಲ್ಚರಲ್...

ಗ್ರೀನ್ ವೀವ್ ಶಾಲೆಯಲ್ಲಿ ನವೋದ್ಯಮ ಮತ್ತು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಕೊಣಾಜೆ, ಆ.18: ಗ್ರೀನ್ ವೀವ್ ಪ್ರೌಢಶಾಲೆ,ಅಡ್ಕರೆಪಡ್ಪು, ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್...

ಈದ್ ಮಿಲಾದ್ ಸಾರ್ವತ್ರಿಕ ರಜೆ ಆಗಸ್ಟ್ 25ಕ್ಕೆ ಬದಲಾವಣೆ: ಉಸ್ತುವಾರಿ ಸಚಿವ, ಡಿಸಿ ಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಮೀಲಾದ್ ಸರಕಾರಿ...