ಸುರತ್ಕಲ್: ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ; ಓರ್ವ ಮೃತ್ಯು, ಮೂವರಿಗೆ ಗಾಯ

Date:

ಸುರತ್ಕಲ್: ರಾಷ್ಟ್ರೀಯ ಹೆದ್ದಾರಿಯ ತಡಂಬೈಲು ಸುಪ್ರೀಮ್ ಹಾಲ್ ಎದುರು ದ್ಚಿಚಕ್ರ ವಾಹನಗಳ‌ ನಡುವೆ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ಮೃತರನ್ನು ಚೊಕ್ಕಬೆಟ್ಟು 8ನೇ ಬ್ಲಾಕ್ ನಿವಾಸಿ ಮುಹಮ್ಮದ್ ಅಖ್ತರ್ ಹುಸೈನ್( 25) ಗುರುತಿಸಲಾಗಿದೆ.

ಇವರು ಗಲ್ಪ್ ಉದ್ಯೋಗಿಯಾಗಿದ್ದು, ಶುಕ್ರವಾರ ಊರಿಗೆ ಮರಳಿದ್ದರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಎರಡೂ ಬೈಕ್ ಗಳಲ್ಲಿದ್ದ ಮೂವರು ಗಾಯಗೊಂಡಿದ್ದು, ಎಲ್ಲರನ್ನೂ‌ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಅಖ್ತರ್ ಹುಸೈನ್ ಮತ್ತು ಆತನ ಸ್ನೇಹಿತ ಮುಕ್ಕದಿಂದ ಚೊಕ್ಲಬೆಟ್ಟುಗೆ ರಾಷ್ಟ್ರೀಯ ಹೆದ್ದಾರಿಯಾಗಿ ತೆರಳುತ್ತಿದ್ದ ವೇಳೆ ಸುರತ್ಕಲ್ ನಿಂದ ಮುಂಚೂರು ಕಡೆಗೆ ತೆರಳುತ್ತಿದ್ದ ಇನ್ನೊಂದು ದ್ವಿಚಕ್ರ ವಾಹನದಲ್ಲಿದ್ದ ಸವಾರರು ಒಮ್ಮೆಲೇ ಮುಂಚೂರು ರಸ್ತೆಗೆ ತಿರುಗಿಸಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌ ಎಂದು ತಿಳಿದು ಬಂದಿದೆ. ಈ ಕುರಿತು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದೇರಳಕಟ್ಟೆ: ಬದ್ರಿಯಾ ಜುಮಾ ಮಸ್ಜಿದ್ , ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ಹಜ್ ಯಾತ್ರಿಕರಿಗೆ ತರಬೇತಿ, ಬೀಳ್ಕೊಡುಗೆ ಸಮಾರಂಭ

ದೇರಳಕಟ್ಟೆ: ಬದ್ರಿಯಾ ಜುಮಾ ಮಸ್ಜಿದ್ ಮತ್ತು ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ (ರಿ.)...

ಕರಾವಳಿಯಲ್ಲಿ ಮಾದಕ ವಸ್ತುಗಳ ಅಲ್ಪ ಮಟ್ಟದ ನಿಯಂತ್ರಣಕ್ಕೆ ಒಕ್ಕೂಟದ ಪ್ರಯತ್ನ ಫಲಕಾರಿ:ಶರೀಫ್ ಹಾಜಿ ವೈಟ್‌ಸ್ಟೋನ್.

ಮಂಗಳೂರು ನಗರದಲ್ಲಿ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟದ ವಿರುದ್ಧ ನಡೆಯುತ್ತಿರುವ...

ದೇರಳಕಟ್ಟೆಯಲ್ಲಿ ಮೋರ್ ಸೂಪರ್‌ಮಾರ್ಕೆಟ್‌ನ ವಿಸ್ತರಿತ ಮಳಿಗೆ ಉದ್ಘಾಟನೆ

ದೇರಳಕಟ್ಟೆ: ಮಂಗಳೂರಿನ ಶೈಕ್ಷಣಿಕ ಮತ್ತು ವೈದ್ಯಕೀಯ ಹಬ್ ಎಂದೇ ಖ್ಯಾತಿಯಾಗಿರುವ ದೇರಳಕಟ್ಟೆಯ...

ಕನ್ನಡ ಮಾಧ್ಯಮ ಸರಕಾರಿ ಶಾಲೆಯ ಶಹಝಾದ್ ಗುರುವಾಯನಕೆರೆ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಪ್ರಥಮ

ಬೆಳ್ತಂಗಡಿ; ನಮ್ಮೂರ ಪ್ರೌಢ ಶಾಲೆ ಗುರುವಾಯನಕೆರೆ ಇಲ್ಲಿನ ವಿದ್ಯಾರ್ಥಿ ಮಹಮ್ಮದ್ ಶಹಝಾದ್...