
ಮಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಸೆಪ್ಟೆಂಬರ್ ತಿಂಗಳ 22ನೇ ತಾರೀಕಿನಿಂದ ಪ್ರಾರಂಭವಾಗಲಿದ್ದು ಈ ಕಾರ್ಯಕ್ಕೆ ಹೆಚ್ಚಿನ ಪ್ರಾಥಮಿಕ ಶಾಲಾ ಶಿಕ್ಷಕರನ್ನೇ ನೇಮಿಸಲಾಗಿದ್ದು ಶಿಕ್ಷಕರು ಪ್ರತಿ ಮನೆಮನೆಗೆ ತೆರಳಿ ಸಮೀಕ್ಷೆ ಮಾಡಬೇಕಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕವಾಗಿ ಸಮೀಕ್ಷೆ ಮಾಡುವ ಸಿಬ್ಬಂದಿಗಳನ್ನು ಕೆಲವೊಂದು ಸಂದರ್ಭದಲ್ಲಿ ಅಮಾನುಷವಾಗಿ ಕಾಣುವುದು, ಮಾಹಿತಿಗಳನ್ನು ಒದಗಿಸದೆ ವಿಳಂಬ ಮಾಡುವುದು ಕಂಡುಬರುತ್ತಿದೆ. ಈ ಬಗ್ಗೆ ಸಾರ್ವಜನಿಕವಾಗಿ ಒಂದು ಮಾಹಿತಿಯನ್ನು ಜಿಲ್ಲಾಧಿಕಾರಿಗಳು ನೀಡಬೇಕು ಎಂದು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಮನವಿ ಮಾಡಿಕೊಂಡಿದೆ. ಸಂಘದ ಅಧ್ಯಕ್ಷರಾದ ಶ್ರೀಯುತ ಕೆ ಎಂ ಕೆ ಮಂಜುನಾಡಿ ಅವರ ನೇತೃತ್ವದಲ್ಲಿ ಉಳ್ಳಾಲ ತಾಲೂಕಿನ ಉಪ ತಹಶೀಲ್ದಾರರ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಸಮೀಕ್ಷೆಯ ಸಮಯದಲ್ಲಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿರುವ ಶಾಲಾ ಗ್ರಾಮ ವ್ಯಾಪ್ತಿಯ ಪ್ರದೇಶಗಳನ್ನೇ ಸಮೀಕ್ಷೆಗೆ ನೀಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರ ಗಣತಿದಾರರಿಗೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರನೇ ಮೇಲ್ವಿಚಾರಕರಾಗಿ ನೇಮಿಸುವುದು. ಸಾಧ್ಯವಾದರೆ ಆಯಾ ಶಾಲಾ ಮುಖ್ಯ ಶಿಕ್ಷಕರಿಗೆ ಆಯಾ ಶಾಲಾ ಶಿಕ್ಷಕರನ್ನೇ ಗಣತಿದಾರರನ್ನಾಗಿ ನೀಡುವುದು. ನಿವೃತ್ತಿ ಹಂಚಿನಲ್ಲಿರುವ ಶಿಕ್ಷಕರಿಗೆ ಗಣತಿಯಿಂದ ವಿನಾಯಿತಿ ನೀಡುವುದು. ನವರಾತ್ರಿ ಹಬ್ಬ ಆಚರಣೆಗೆ ಶಿಕ್ಷಕರಿಗೆ ಅವಕಾಶ ಮಾಡಿಕೊಟ್ಟು ನವರಾತ್ರಿಯ ನಂತರ ಸಮೀಕ್ಷೆಗೆ ಅವಕಾಶ ಮಾಡಿಕೊಡುವುದು. ಗಣತಿ ಕಾರ್ಯದಲ್ಲಿ ನೇಮಕ ಆಗಿರುವ ಶಿಕ್ಷಕರನ್ನು ಗಣತಿ ಸಂದರ್ಭದಲ್ಲಿ ಉತ್ತಮ ಗೌರವ ರೀತಿಯಲ್ಲಿ ನಡೆಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವುದು. ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರಿಗೆ ಮನೆ ಗುರುತಿಸಲು ಸಹಕಾರ ಆಗುವಂತೆ ಆಶಾ ಕಾರ್ಯಕರ್ತರು ಅಥವಾ ಇತರೆ ಸಿಬ್ಬಂದಿಗಳನ್ನು ನೇಮಿಸುವುದು. ಬೇಸಿಗೆ ಬೇಸಿಗೆ ರಜೆಯಲ್ಲಿ ಜಾತಿ ಗಣತಿ ಕರ್ತವ ನಿರ್ವಹಿಸಿದ ಶಿಕ್ಷಕರಿಗೆ ಕರ್ತವ್ಯ ಪ್ರಮಾಣ ಪತ್ರ ಹಾಗೂ ಸಂಭಾವನೆ ಅತಿ ಶೀಘ್ರದಲ್ಲಿ ಒದಗಿಸುವುದು , ಮೊದಲಾದ ಬೇಡಿಕೆಗಳನ್ನು ನೀಡಲಾಯಿತು. ಸರಕಾರದ ಎಲ್ಲಾ ಕಾರ್ಯಕರ್ತರನ್ನು ಪ್ರಾಥಮಿಕ ಶಾಲಾ ಶಿಕ್ಷಕರು ಯಾವುದೇ ಆಕ್ಷೇಪಣೆ ಇಲ್ಲದೆ ನಿರ್ವಹಿಸುತ್ತಾ ಬಂದಿರೋದು ಇತಿಹಾಸ. ಆದರೆ ಅವರ ಕರ್ತವ್ಯಕ್ಕೆ ತಕ್ಕಂತೆ ಸಂಭಾವನೆಗಳನ್ನು ನೀಡದೇ ಇರುವುದು ವಿಪರ್ಯಾಸ ಎಂದು ಅವರು ಹೇಳಿದರು. ಮನವಿ ಅರ್ಪಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಂಗಳೂರುತಾಲೂಕಿನ ಕಾರ್ಯರ್ಶಿ ಟಿಪ್ಪು ಜಿ ರಾವ್, ಸದಸ್ಯರುಗಳಾದ ಸುನಿತಾ ಬಬಿತ ಸೆಲಿನ್ ಡಿ ಸೋ,ಜಾ, ಶ್ರೀಕಾಮರಾಜ್, ಶ್ರೀಮತಿ ಸಪ್ನ, ಶ್ರೀಮತಿ ಹಸಿನ್ ನ್ತಾಜ್ ಉಪಸ್ಥಿತರಿದ್ದರು


