ಮಕ್ಕಳ ಭವಿಷ್ಯದ ಕನಸಿಗೆ ಶಕ್ತಿ ತುಂಬುವ ಕಾರ್ಯ ವಾಗಲಿ: ಬೃಜೇಶ್ ಚೌಟ

Date:

ಕೊಣಾಜೆ: ಮಕ್ಕಳಿಗೆ ಜೀವನದ ಆಯಾಮಗಳನ್ನು ತಿಳಿಸಿಕೊಟ್ಟು ಅವರ ಆಸಕ್ತಿಯ ಕ್ಷೇತ್ರ ಹಾಗೂ ಭವಿಷ್ಯದ ಕನಸಿಗೆ ಶಕ್ತಿಯನ್ನು ತುಂಬುವ ಕೆಲಸ ಪಾಲಕರದ್ದು. ನವೋದಯ ವಿದ್ಯಾಲಯ ದೇಶದ ಶ್ರೇಷ್ಠ ವಿದ್ಯಾಲಯವಾಗಿದ್ದು, ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಪುಣ್ಯವಂತರು ಎಂದು ಸಂಸದರಾದ ಕ್ಯಾಪ್ಟನ್ ಬೃಜೇಶ್ ಚೌಟ ಅವರು ಹೇಳಿದರು.ಅವರು ಮುಡಿಪುವಿನ ಪಿಎಂ ಶ್ರೀ ಜವಾಹರ ನವೋದಯ ವಿದ್ಯಾಲಯದ ವಾರ್ಷಿಕ ಕಾರ್ಯಕ್ರಮ ಹಾಗೂ ಪಿಟಿಸಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ದ.ಕ.ಜಿಲ್ಲಾಧಿಕಾರಿ ದರ್ಶನ್ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪಿ.ರಾಜೇಶ್, ಉಪ ಪ್ರಾಂಶುಪಾಲರಾದ ಲಾಲಿ.ಕೆ.ಯಸ್, ಕುರ್ನಾಡು ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯರಾದ ಅನೀಷ ಪಿ.ವಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲ ನಾಯಕ್, ಕುರ್ನಾಡು ಸರಕಾರಿ ಕಾಲೇಜು ಪ್ರಾಂಶುಪಾಲೆ ಸುಮನ, ಶಿಕ್ಷಕ ರಕ್ಷಕ ಸಮಿತಿಯ ವಿ.ಯಂ.ಸಿ. ಸದಸ್ಯ ಕೃಷ್ಣ ಕುಮಾರ್ ಬಾಲ್ ಗೋಡು , ಕೋಶಾಧಿಕಾರಿ ಮೋಹನ್ ದಾಸ್ ಅಮ್ಮೆಂಬಳ, ಶಿಕ್ಷಕ ರಕ್ಷಕ ಸಮಿತಿ ಸದಸ್ಯರಾದ ಪ್ರೊ. ಜಗದೀಶ್ ಪ್ರಸಾದ್, ಶ್ಯಾಮ್ ಸೂರ್ಯ ಬಾಯಾರು, ರಾಜೇಂದ್ರ ಪ್ರಸಾದ್ ಶೆಟ್ಟಿ, ಪ್ರವೀಣ್ ಮುಂಡೋಡಿ, ಪಾರ್ವತಿ, ಗೋಪಾಲಕೃಷ್ಣ ಕುತ್ಯಾಳ,‌ ಕೃಷ್ಣಪ್ಪ ಕೊಣಾಜೆ, ಮೋಹನ್ ಕೆ.ಯಚ್ , ಕವಿತ, ಕೊರಗಪ್ಪ ಕೊಯಿಲ, ಉಷಾ, ಸುದಾ.ಪಿ.,ವಿನಯ ಕುಮಾರಿ, ಬಾಸ್ಕರ್, ಶಿಕ್ಷಕರಾದ ಯೋಗಿಶ್ , ದೇವಿಕೃಷ್ಣ, ಜೊಸ್ ಮೊದಲಾದವರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿಯಲ್ಲಿ ಶ್ರಮಿಸಿದ ಪ್ರಾಂಶುಪಾಲರಾದ ರಾಜೇಶ್ ಅವರನ್ನು ಗೌರವಿಸಲಾಯಿತು.ಮತ್ತು ಶಾಲೆಯಲ್ಲಿ ಹಲವು ಕಲಾಕೃತಿಗಳನ್ನು ರಚಿಸಿದ ಕಿರಣ್ ಕುಮಾರ್ ಒಡಿಯೂರು ಇವರನ್ನು ಶಿಕ್ಷಕ ರಕ್ಷಕ ಸಮಿತಿಯಿಂದ ಸಂಸದರು ಸನ್ಮಾನಿಸಿದರು.ಶಿಕ್ಷಕರಾದ ಸುರೇಂದ್ರನ್ ಅವರು‌ ವಂದಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...