
ವಿಟ್ಲ: ಎಸ್ ಎಂ ಎ ಸೌತ್ ಜಿಲ್ಲಾ ಸಮಿತಿ ಇದರ ವಾರ್ಷಿಕ ಕೌನ್ಸಿಲ್ ಬಗ್ಗೆ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ಜಿಲ್ಲಾಧ್ಯಕ್ಷರಾದ ಯೂಸುಫ್ ಸಾಜ ಅಧ್ಯಕ್ಷತೆಯಲ್ಲಿ ದಾರುನ್ನ ಜಾತ್ ಟಿಪ್ಪುನಗರ ಸ್ಮಾರಕ ಭವನದಲ್ಲಿ ಜರುಗಿತು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಬ್ಬಾಸ್ ಸೆರ್ಕಳ ಸ್ವಾಗತಿಸಿದರು, ಸಭೆ ಉದ್ಘಾಟಿಸಿ ಮಾತನಾಡಿದ ಎಸ್ ಎಂ ಎ ರಾಜ್ಯ ಉಪಾಧ್ಯಕ್ಷರಾದ ಹಾಜಿ ಅಬ್ದುಲ್ ಹಮೀದ್ ಕೊಡುಗಾಯಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಬಿ ಆರ್ ಗವಾಯಿಯವರ ಮೇಲೆ ಶೂ ಎಸದು ಇಡೀ ಭಾರತದ ನ್ಯಾಯಾಂಗ ವ್ಯವಸ್ಥೆಗೆ ಕಳಂಕ ತಂದು ಅಗೌರವ ತೋರಿದ ಅನಾಗರಿಕ ವಕೀಲನ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಇಂತಹ ಘಟನೆ ಇಡೀ ಭಾರತದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಇಷ್ಟು ಬಲಿಷ್ಟವಾಗಿರುವಾಗ ವಕೀಲನೊಬ್ಬ ಕಾನೂನು ಹೇಳಬೇಕಾದವನು ಈ ರೀತಿ ಮಾಡಿರುವುದು ನ್ಯಾಯಾಂಗ ವ್ಯವಸ್ಥೆಯ ಗೌರವ ಕುಗ್ಗುವಂತೆ ಮಾಡಿದೆ. ಆದ್ದರಿಂದ ಅಂತ ನೀಚ ಕೆಲಸ ಮಾಡಿದ ವಕೀಲನನ್ನು ಕಠಿಣ ಶಿಕ್ಷೆಗೆ ಒಳಪಡಿಸಿ ಭಾರತದ ನ್ಯಾಯಾಂಗ ವ್ಯವಸ್ಥೆಯ ಗೌರವವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ನುಡಿದರು ನಂತರ ಸಭೆಯಲ್ಲಿ ಒಕ್ಕರಳಿನಿಂದ ನ್ಯಾಯಾಧೀಶರ ವಿರುದ್ಧ ನಡೆದ ಕ್ರಮವನ್ನುಸಭೆ ಖಂಡಿಸಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ ವರದಿ ಹಾಗೂ ನಡೆದ ಕಾರ್ಯಕ್ರಮದ ವಿವರ ಮಂಡಿಸಿ ಸಭೆ ಅನುಮೋದಿಸಿತ್ತು ಸಭೆಯಲ್ಲಿ ಜಿಲ್ಲಾವಾರ್ಷಿಕ ಕೌನ್ಸಿಲ್25 ತಾರೀಕಿನಂದು ಮಂಗಳವಾರ ದಾರುನ್ನ ಜಾತ್ ಟಿಪ್ಪು ನಗರ ಸ್ಮಾರಕ ಭವನದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಅದರಿಂದ ಮುಂಚಿತವಾಗಿ ರೀಜನಲ್ ಝೋನಲ್ ಸಮಿತಿಗಳ ವಾರ್ಷಿಕ ಕೌನ್ಸಿಲ್ ಬಹಳ ಯಶಸ್ವಿಯಾಗಿ ನಡೆಯಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು ನಂತರ ಜಿಲ್ಲಾ ಉಪಾಧ್ಯಕ್ಷರಾದ ಅಬ್ದುಲ್ ಲತೀಫ್ ಸಖಾಫಿ ಪ್ರಾರ್ಥನೆ ನಡೆಸಿ ಸಭೆ ಮುಕ್ತಾಯಗೊಂಡಿತು.


