ಚಂದ್ರಕಲಾ ನಂದಾವರ ರಚಿತ ಡಿಮೆನ್ಶಿಯಾ ಕಾಯಿಲೆಯ ಬಗೆಗಿನ ಅನುಭವ ಕಥನ ಬಿಡುಗಡೆ.

Date:

ರೋಗ,ರೋಗಿ,ರೋಗಿಯ ಆತ್ಮೀಯರ ಅನುಭವದ ಕಥನಗಳು ಕನ್ನಡದಲ್ಲಿ ವಿರಳ.

ಉಳ್ಳಾಲ: ಅ-08
ಇಂಗ್ಲೀಷಲ್ಲಿ ಬೇರೆ ,ಬೇರೆ ಕಾಯಿಲೆಯ ಚಿತ್ರಣ ಕಟ್ಟಿ ಕೊಡುವ ಸಾಕಷ್ಟು ಕೃತಿಗಳು ಬಂದಿವೆ.ಆದರೆ ರೋಗ,ರೋಗಿ,ರೋಗಿಯ ಆತ್ಮೀಯರ ಅನುಭವದ ಕಥನಗಳು ಕನ್ನಡದಲ್ಲಿ ಬಂದಿರುವುದು ಬಹಳ ವಿರಳ.ಚಂದ್ರಕಲಾ ಅವರು ಬರೆದಿರುವುದು ಕೇವಲ ಅನುಭವ ಕಥನ ಮಾತ್ರವಲ್ಲದೆ,ಅದೊಂದು ಸಾಹಿತ್ಯಿಕ ಕೃತಿಯಾಗಿದೆ ಎಂದು ಚಿತ್ರದುರ್ಗ ಬಿಎಂಸಿಎಚ್ ಮನೋವೈದ್ಯಕೀಯ ವಿಭಾಗದ ಪ್ರೊ.ಡಾ.ಕೆ.ಎಸ್.ಪವಿತ್ರಾ ಅಭಿಪ್ರಾಯಪಟ್ಟರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಅಧೀನದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ವತಿಯಿಂದ ಬುಧವಾರದಂದು ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಚಿಂತನ ಸಭಾಂಗಣದಲ್ಲಿ ಹಿರಿಯ ಚಿಂತಕಿ,ಖ್ಯಾತ ಲೇಖಕಿ ಚಂದ್ರಕಲಾ ನಂದಾವರ ಅವರು ತಮ್ಮ ಪತಿ ಪ್ರೊ.ವಾಮನ ನಂದಾವರರ ಡಿಮೆನ್ಶಿಯಾ ಅಲ್ಝೈಮರ್ಸ್ ಕಾಯಿಲೆಯ-ಅನುಭವ ಯಾನದ ಬಗ್ಗೆ ರಚಿಸಿದ “ಕಾಲ ಕಟ್ಟಿದ ಕನಸು”ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು ಸಭೆಗೆ ಪುಸ್ತಕದ ಬಗ್ಗೆ ಪರಿಚಯಿಸಿ ಮಾತನಾಡಿದರು.ಕಲೆ,ಸಾಹಿತ್ಯ ಮತ್ತು ಆರೋಗ್ಯದ ಜಗತ್ತು ಪರಸ್ಪರ ಕೊಡುಕೊಳ್ಳುವಿಕೆಯನ್ನ ನಡೆಸಬೇಕೆಂಬುದಕ್ಕೆ ಈ ಪುಸ್ತಕವು ನಿದರ್ಶನವಾಗಿದೆ.ಬಿ.ವಿ ಭಾರತಿ ಅವರ “ಸಾಸಿವೆ ತಂದವಳು”ಎಂಬ ಕ್ಯಾನ್ಸರ್ ಗೆದ್ದ ಕಥಾನಕ ಕನ್ನಡದಲ್ಲಿ ಗುರುತಿಸವುವಂತದ್ದಾಗಿದೆ.ಚಂದ್ರಕಲಾ ಅವರ ಈ ಕೃತಿಯು ಗಮನಾರ್ಹ ಸ್ಥಾನ ಪಡೆಯುತ್ತದೆ.ಸೃಜನ‌ಶೀಲ ಕಥೆ,ಕೃತಿ ನಿರ್ಮಾಣ ಮಾಡಲು ತೀವ್ರವಾದ ಅನುಭವ ಇರಬೇಕು.ಅದರಲ್ಲಿರುವ ಸಂದೇಶವು ಬೇರೆಯವರಿಗೆ ತಲುಪುವ ಹಾಗೆ ಉತ್ಪನ್ನವನ್ನ ನಾವು ಮಾಡಬೇಕು.ಅವರ ಸೃಜನಶೀಲ ಮನಸು ಇಲ್ಲಿ ಕೆಲಸ ಮಾಡಿದೆ.ಅನುಭವವನ್ನು ಕೇವಲ ವೈಯಕ್ತಿಕ ಘಟನೆಯಾಗಿರಿಸದೆ ಸಮಷ್ಟಿ ಪ್ರಜ್ನೆ ತಲುಪುವ ಕೆಲಸವನ್ನು ಕೃತಿ ಮಾಡಿದೆ.
ಚಂದ್ರಕಲಾ ಅವರು ಡಿಮೆನ್ಶಿಯಾ (ಮರೆಗುಳಿತನ‌)ಕಾಯಿಲೆಯ ಬಗೆಗಿನ‌ ಸಾಕಷ್ಟು ಮಾಹಿತಿಯನ್ನು ಮೊದಲ ಪುಟದಲ್ಲೇ ನೀಡಿದ್ದಾರೆ.ಸಾವನ್ನ ಎದುರು ನೋಡಬೇಕಾದರೆ ಮನಸಿನ ನೋವಿನ ಭಿನ್ನ ಮುಖಗಳನ್ನ ,ಯೋಚನೆಗಳನ್ನ ,ಭವಿಷ್ಯ,ಜಾತಕನೋಡಿದನ್ನೂ ಕೃತಿಯಲ್ಲಿ ದಾಖಲಿಸಿದ್ದಾರೆ.ಹಾಗಾಗಿ ಈ ಪುಸ್ತಕವನ್ನ ವೈದ್ಯರೂ ಓದಲೇ ಬೇಕಿದೆ.ಈ ಅನುಭವ ಕಥನವು ಬರೆದ ಲೇಖಕಿ ಮತ್ತು ಓದುಗನಿಗೆ ಏಕಕಾಲದ ಚಿಕಿತ್ಸಕವಾಗಿ ಕಾಣುತ್ತದೆ ಎಂದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಡಾ.ಎಂ.ಎಸ್.ಮೂಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು.ದೇರಳಕಟ್ಟೆ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಪ್ರೊ.ಡಾ.ಸುಮಲತಾ ಆರ್.ಶೆಟ್ಟಿ,ಯೆನೆಪೋಯ ವಿವಿಯ ಹಿರಿಯ ನಾಗರಿಕರ ವಿಭಾಗದ ಮುಖ್ಯಸ್ಥರು ಹಾಗೂ ಸಂಶೋಧಕರಾದ ಡಾ.ಪ್ರಭಾ ಅಧಿಕಾರಿ ಉಪಸ್ಥಿತರಿದ್ದರು.
ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಡಾ.ಶಿಶಿರ್ ಕುಮಾರ್ ಸ್ವಾಗತಿಸಿದರು.ಡಾ.ಉಂಡಾರು ಶ್ರೀನಿವಾಸ್ ಭಟ್ ಲೇಖಕಿಯನ್ನು ಪರಿಚಯಿಸಿದರು.ಶೃತಿ ಅಮೀನ್ ಮುಖ್ಯ ಅತಿಥಿಯನ್ನ ಪರಿಚಯಿಸಿದರು.ಡಾ.ಕೆ.ಆರ್.ಶೆಟ್ಟಿ ತುಳು ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಸಾಯಿಗೀತ ನಿರೂಪಿಸಿದರು.ಪ್ರೊ.ಆಗ್ನಿತ ಐಮನ್ ವಂದಿಸಿದರು.

***ಕಾಯಿಲೆಯ ಬಗ್ಗೆ ನನ್ನ ಅನುಭವಗಳನ್ನ ಬರೆಯಬಹುದು.ಆದರೆ ವೈದ್ಯಕೀಯ ಕ್ಷೇತ್ರದ ವಿಚಾರಗಳನ್ನ ಹೇಗೆ ಬರೆಯಬಹುದೆಂಬ ಪ್ರಶ್ನೆ ಎದುರಾಗಿತ್ತು.ಎಷ್ಟೋ ರೋಗಿಗಳನ್ನ ಕಂಡಾಗ ಅವರಿಗೆ ಅಂಟಿಕೊಂಡಿರುವುದು ಡಿಮೆನ್ಶಿಯಾ ಕಾಯಿಲೆ ಎಂಬುದು ಗೊತ್ತಿರಲಿಲ್ಲ.ಆದರೆ ನನ್ನ ಪತಿಗೆ ಡಿಮೆನ್ಶಿಯ ಕಾಯಿಲೆ ಅಂಟಿಕೊಂಡಾಗ ಇದರ ಬಗ್ಗೆ ಬರೆಯಬೇಕೆಂಬ ಛಲದಿಂದ ಬರೆದೆ.ಬರವಣಿಗೆ ಸ್ವಾರ್ಥ ಸುಖಾಯ ಆದರೂ ಬಳಿಕ ಅದು ಸಮಾಜಮುಖಿಯಾಗಿರುತ್ತದೆ.ಪತಿಯ ಶುಶ್ರೂಷೆ ಮಾಡಿದಕ್ಕಿಂತಲೂ ಹೆಚ್ಚು ಪುಸ್ತಕ ಬರೆಯಲು ಕಷ್ಟ ಪಟ್ಟಿದ್ದೇನೆ.ಪತಿಯ ಅಗಲಿಕೆಯಿಂದ ದೈಹಿಕ ಬಿಡುಗಡೆ ಸಿಕ್ಕಿತ್ತು.ಪುಸ್ತಕ ಬರೆದ ನಂತರ ಮಾನಸಿಕವಾಗಿ ನಿರಾಳನಾಗಿದ್ದೇನೆ.ಪುಸ್ತಕ ಬರೆಯಲು ವೈದ್ಯರಾದ ಡಾ.ಕಕ್ಕಿಲ್ಲಾಯರು ನನಗೆ ತುಂಬಾ ಸಹಕಾರ ನೀಡಿದರು.
-ಚಂದ್ರಕಲಾ ನಂದಾವರ,ಖ್ಯಾತ ಲೇಖಕರು
.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...