ತೆಂಕಮಿಜಾರಿನಲ್ಲಿ ಅಭ್ಯಾಸ ವಗ೯ ಮೂಡುಬಿದಿರೆ : ಭಾರತೀಯ ಜನತಾ ಪಾರ್ಟಿ ಮೂಲ್ಕಿ – ಮೂಡುಬಿದಿರೆ ಮಂಡಲದ ತೆಂಕಮಿಜಾರು ಗ್ರಾ.ಪಂಚಾಯತ್ ವ್ಯಾಪ್ತಿಯ ತೆಂಕಮಿಜಾರು ಮತ್ತು ಬಡಗಮಿಜಾರು ಸಹ ಅಭ್ಯಾಸವರ್ಗವನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ಉದ್ಘಾಟಿಸಿದರು. ಪುತ್ತಿಗೆ ಮಹಾಶಕ್ತಿ ಕೇಂದ್ರದ ಪ್ರ. ಕಾಯ೯ದಶಿ೯ ಶಿವಕುಮಾರ್, ಹಿರಿಯ ಕಾಯ೯ಕತ೯ರು ಈ ಸಂದಭ೯ದಲ್ಲಿದ್ದರು. ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಭಾಗವಹಿಸಿ ಮಾತನಾಡಿದರು. ಗ್ರಾ. ಪಂ ಅಧ್ಯಕ್ಷೆ ಶಾಲಿನಿ ಸಾಲ್ಯಾನ್, ಸದಸ್ಯರಾದ ರುಕ್ಮಿಣಿ, ಸಮಿತಾ ಶೆಟ್ಟಿ, ದಿನೇಶ್ ಬಿ. ಎಲ್., ಮಹೇಶ್, ಜಯಲಕ್ಷ್ಮೀ ಶೆಟ್ಟಿಗಾರ್ ನಿಶಾ ಶೆಟ್ಟಿ ಈ ಸಂದಭ೯ದಲ್ಲಿದ್ದರು.




