ಬಸ್ ಚಾಲಕನ ನಿರ್ಲಕ್ಷ್ಯತನದಿಂದ ಅಪಘಾತ, ಬಾಲಕ ಮೃತ ಪ್ರಕರಣದ ಆರೋಪಿ ಖುಲಾಸೆ

Date:

ಮಂಗಳೂರು 16/10/2022 ರಂದು ಮಂಗಳೂರಿನ ಲಾಲ್ ಬಾಗ್ ಜಂಕ್ಷನ್ ಬಳಿ ಬಸ್ ಮತ್ತು ಸ್ಕೂಟರ್ ಮಧ್ಯೆ ಅಪಘಾತ ಸಂಭವಿಸಿ 13 ವರ್ಷ ಪ್ರಾಯದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು ಈ ಬಗ್ಗೆ ಮಂಗಳೂರು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕನ ನಿರ್ಲಕ್ಷ್ಯ ಹಾಗೂ ಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಮತ್ತು ಚಾಲಕನಿಗೆ ಆ ಸಂದರ್ಭದಲ್ಲಿ ಬಸ್ ಚಾಲನೆ ಪರವಾನಿಗೆ ಇರಲಿಲ್ಲ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಐ.ಪಿ.ಸಿ ಕಾಲಂ 227, 338 ಮತ್ತು 304A ಹಾಗೂ 15(a) r/w 180 ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ದೋಷಾರೋಪಣ ಪಟ್ಟಿಯನ್ನು ಮಾನ್ಯ ಜೆಎಂಎಫ್.ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಪ್ರಕರಣವನ್ನು ಕೈಗೆತ್ತಿಕೊಂಡಾ ನ್ಯಾಯಾಲಯವು ಸಾಕ್ಷಿ ವಿಚಾರಣೆಯನ್ನು ನಡೆಸಿ ಸರ್ಕಾರಿ ಅಭಿಯೋಜಕರು ಹಾಗೂ ಆರೋಪಿ ಪರ ವಕೀಲರ ವಾದ ವಿವಾದಗಳನ್ನು ಆಲಿಸಿ ಈ ಪ್ರಕರಣದಲ್ಲಿ ಬಸ್ ಚಾಲಕನ ಯಾವುದೇ ತಪ್ಪು ಇಲ್ಲ ಎಂದು
ಮಂಗಳೂರಿನ 8ನೇ ಜೆಎಂಎಫ್.ಸಿ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಶ್ರೀ ಪವಾಜ್ ಪಿ. ಎ ಅವರು ಈ ತೀರ್ಪು ನೀಡಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ಈ ಪ್ರಕರಣದ ಆರೋಪದಿಂದ ದಿನಾಂಕ 17.10.2025 ರಂದು ಖುಲಾಸೆಗೊಳಿಸಿ ಆದೇಶ ನೀಡಿದೆ.

ಆರೋಪಿ ಪರವಾಗಿ ಮಂಗಳೂರಿನ ಲೆಕ್ಸ್ ಜೂರಿಸ್ ಲಾ ಚೇಂಬರ್ ವಕೀಲರಾದ ಓಮರ್ ಫಾರೂಕ್ ಮುಲ್ಕಿ, ಮಹಮ್ಮದ್ ಅಸ್ಗರ್ ಮುಡಿಪು, ಹೈದರ್ ಅಲಿ ಕಿನ್ನಿಗೋಳಿ ಹಾಗೂ ಮಹಮ್ಮದ್ ಆದಿಲ್, ಅಯಾಜ್ ಚಾರ್ಮಾಡಿ, ನಿಶಾನ್ ಎಂ.ಕೆ. ಅವರು ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...