ಆಳ್ವಾಸ್‌ನಲ್ಲಿ ನಡೆದ 10 ದಿನಗಳ ಎನ್‌ಸಿಸಿ ಶಿಬಿರ ಸಂಪನ್ನ

Date:

ಮೂಡುಬಿದಿರೆ: ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ನ (ಎನ್‌ಸಿಸಿ) 18 ಕರ್ನಾಟಕ ಬೆಟಾಲಿಯಾನ್‌ನಿಂದ ಆಳ್ವಾಸ್‌ನ ವಿದ್ಯಾಗಿರಿಯ ಆವರಣದಲ್ಲಿ 10 ದಿನಗಳ ಸಂಯೋಜಿತ ವಾರ್ಷಿಕ ತರಬೇತಿ ಶಿಬಿರ ನಡೆಯಿತು. ಮಂಗಳೂರಿನ ಎನ್‌ಸಿಸಿ ಸಮೂಹದ ಮುಖ್ಯ ಕಛೇರಿಯ ವ್ಯಾಪ್ತಿಗೊಳಪಟ್ಟ ವಿವಿಧ ಬ್ಯಾಟಾಲಿಯನ್‌ಗಳಿಂದ 600 ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು.

ಕೆಡೆಟ್‌ಗಳಿಗೆ ಫೈರಿಂಗ್, ಬ್ಯಾಟಲ್ ಕ್ರಾಫ್ಟ್, ಡ್ರಿಲ್, ನಕ್ಷೆ ಓದುವಿಕೆ, ರೈಫಲ್‌ನ ನಿರ್ವಹಣೆ, ಫೀಲ್ಡ್ ಕ್ರಾಫ್ಟ್, ಮತ್ತು ಮಿಲಿಟರಿ ವಿಷಯಗಳಲ್ಲಿ ತರಬೇತಿ ನೀಡಲಾಯಿತು, ಮಂಗಳೂರಿನ ಎನ್‌ಸಿಸಿ ಸಮೂಹದ ಮುಖ್ಯ ಕಛೇರಿಯಿಂದ ಒಟ್ಟು 80 ಕೆಡೆಟ್‌ಗಳು ಬೆಂಗಳೂರಿನಲ್ಲಿ ನಡೆಯುವ ಐಜಿಸಿ- ಆರ್‌ಡಿಸಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಕಮಾಂಡಿAಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ರೋಹಿತ್ ರೈ ಮಾತನಾಡಿ, ಇಷ್ಟು ದೊಡ್ಡ ಸಂಖ್ಯೆಯ ಕ್ಯಾಂಪ್ ಒಂದೇ ಆವರಣದಲ್ಲಿ ಬಹಳ ವ್ಯವಸ್ಥಿತವಾಗಿ ನೆರವೇರಲು ಸಹಾಯ ಮಾಡಿದ ಆಳ್ವಾಸ್ ಸಂಸ್ಥೆಯ ಅಧ್ಯಕ್ಷರು, ಟ್ರಸ್ಟಿ ಹಾಗೂ ಸಹಕರಿಸಿದ ಸರ್ವರನ್ನು ಸ್ಮರಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ, ವಿವೇಕ್ ಆಳ್ವ ಮಾತನಾಡಿ, ಇಂತಹ ಶಿಬಿರಗಳು ಯುವಕರಲ್ಲಿ ದೇಶಭಕ್ತಿ, ಶಿಸ್ತು ಮತ್ತು ಸೇವಾಭಾವವನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದೆ. ಇಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಕ್ಯಾಡೆಟ್‌ನಲ್ಲೂ ದೇಶಸೇವೆಯ ಕನಸು ಮೂಡಬೇಕು. ಕನಿಷ್ಠ ಒಬ್ಬರಾದರೂ ಈ ಶಿಬಿರದಿಂದ ಸೈನಿಕನಾಗಬೇಕು ಎಂಬುದು ನಮ್ಮೆಲ್ಲರ ಆಶಯ ಎಂದರು. ಪ್ರಮುಖವಾಗಿ ಇಂತಹ ಶಿಬಿರಗಳಲ್ಲಿ ಪಿಐ ಸಿಬ್ಬಂದಿಯ ಪಾತ್ರ ಅತ್ಯಂತ ಪ್ರಮುಖ. ಇವರ ಸೇವೆ ಮತ್ತು ಮಾರ್ಗದರ್ಶನ ಎನ್‌ಸಿಸಿ ಶಿಬಿರದ ಯಶಸ್ಸಿಗೆ ಅತಿ ಅಗತ್ಯ. ಇವರ ಗಡಿ ಕಾಯುವ ಸೇವೆಯ ಜೊತೆಗೆ ಇಂತಹ ಸೇವೆಗಳನ್ನು ನಾವೆಲ್ಲರೂ ಗೌರವಿಸಬೇಕು ಎಂದರು.
ಕರ‍್ಯಕ್ರಮದಲ್ಲಿ ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ನಿತಿನ್ ನಾರಾಯಣ್, ಸುಬೇದಾರ್ ಮೇಜರ್ ಯಾಮ್ ಬಹುದ್ದೂರ್ ರಾಣಾ, ಕ್ಯಾಂಪ್ ಕ್ವಾರ್ಟರ್ ಮಾಸ್ಟರ್ ಧನಂಜಯ ಆಚರ‍್ಯ, ಲೆಫ್ಟಿನೆಂಟ್ ಮಹೇಂದ್ರ ಜೈನ್ ಹಾಗೂ ಇನ್ನಿತರ ಎನ್‌ಸಿಸಿ ಅಧಿಕಾರಗಳು, ಮಾರ್ಗದರ್ಶಕರು ಇದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...