ಐಎಂಎ ರಾಜ್ಯ ಘಟಕದ ಚುನಾವಣೆ ಡಾ ಕುಲಾಲ್ ಅವಿರೋಧ ಆಯ್ಕೆ

Date:

ನೂರು ವರ್ಷಗಳ ಸಂಭ್ರಮದಲ್ಲಿ ಇರುವ ಭಾರತೀಯ ವೈದ್ಯಕೀಯ ಸಂಘಟನೆ ವಿಶ್ವದಲ್ಲಿಯೇ ಅತಿ ದೊಡ್ಡ ಹಾಗು ಅತೀ ಪ್ರಭಾವಶಾಲಿ ಸರಕಾರೇತರ ಸಂಸ್ಥೆ. ಇದು ಭಾರತದ ಪ್ರತೀ ರಾಜ್ಯ, ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಶಾಖೆಗಳನ್ನ ಹೊಂದಿರುವುದಲ್ಲದೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ತನ್ನ ಸುಮಾರು 2500 ರಷ್ಟು ಶಾಖೆಯನ್ನ ಹೊಂದಿದ್ದು, ಅದರ ಕರ್ನಾಟಕ ರಾಜ್ಯ ಶಾಖೆಗೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ರಾಜ್ಯ ಉಪಾಧ್ಯಕ್ಷರಾಗಿ ಮಂಗಳೂರು ಭಾರತೀಯ ಸಂಘದ ಮಾಜಿ ಅಧ್ಯಕ್ಷ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ ಅಂತ ರಾಜ್ಯ ಸಂಘಟನೆಯ ಪ್ರಕಟಣೆ ತಿಳಿಸಿದೆ.
ಕಳೆದ 2 ಎರಡು ದಶಕಗಳಿಂದ ಐಎಂಎ ಯ ಜೊತೆ ಸಂಘಟನಾತ್ಮಕವಾಗಿ ಜೋಡಿಸಿಕೊಂಡು ದುಡಿಯುತ್ತಿರುವ ಡಾ ಕುಲಾಲ್
ದ ಕ ಜಿಲ್ಲೆ, ಕರಾವಳಿ ಮಲೆನಾಡು ಹಾಗು ಮೈಸೂರು ವಿಭಾಗ ಗಳಲ್ಲಿ ಪರಿಣಾಮಕಾರಿ ನಾಯಕತ್ವ ನೀಡಿ, ಸ್ಥಳೀಯ ಶಾಖಾ ಅಧ್ಯಕ್ಷ, ಪ್ರಾದೇಶಿಕ ಅಧ್ಯಕ್ಷ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಸಂಚಾಲಕ, ಸಂಯೋಜಕ , ರಾಜ್ಯ ಕೇಂದ್ರ ಹಾಗೂ ರಾಷ್ಟ್ರ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ದುಡಿದು ಸಾಕಷ್ಟು ಜನಾನುರಾಗಿ ಆಗಿರುವ ಇವರು ರಾಜ್ಯದ ಕನ್ನಡ ವೈದ್ಯ ಬರಹಗಾರರ ಬಳಗವನ್ನ ಹುಟ್ಟು ಹಾಕಿ, ವೈದ್ಯ ಸಾಹಿತಿಗಳನ್ನ ಸಂಘಟಿಸಿ 2020 ರಲ್ಲಿ ಮಂಗಳೂರಲ್ಲಿ ಪ್ರಥಮ ವೈದ್ಯರ ಸಾಹಿತ್ಯ ಸಮ್ಮೇಳನ ಆಯೋಜಿಸಿ ಚಾಲನೆ ಕೊಟ್ಟವರು. ಹಲವಾರು ವೈದ್ಯ ಹಾಗು ಕುಟುಂಬ ವೈದ್ಯರ ಸಮ್ಮೇಳನ ನಡೆಯಿಸಿದವರು. ಸಂಘಟನೆ, ವೈದ್ಯಕೀಯ ಸೇವೆ, ಬರಹ, ಭಾಷಣ ,ಸಾಮಾಜಿಕ ಹೋರಾಟ ಗಳಿಂದ ಚಿರಪರಿಚಿತರಾಗಿರುವ ಇವರಿಗೆ ಐಎಂಎ ಜೀವಮಾನದ ಸಾಧನೆಗೆ ಕೊಡುವ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಡಾ ಬಿ ಸಿ ರಾಯ್ ಗೌರವ ಪುರಸ್ಕಾರ ಪಡೆದ ಅತಿ ಕಿರಿಯ ವಯಸ್ಸಿನ ವೈದ್ಯರು ಎಂಬ ಖ್ಯಾತಿ ಇದೆ. ಕೆಎಂಸಿ ಯ ಹಳೆ ವಿದ್ಯಾರ್ಥಿ ಆಗಿರುವ ಶ್ರೀಯುತರು ಶ್ರೀನಿವಾಸ್ ಸಂಸ್ಥೆಯಲ್ಲಿ ದುಡಿದು ಈಗ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಅಕ್ಟೋಬರ್ 25 ರಂದು ಗಂಗಾವತಿಯಲ್ಲಿ ಜರುಗುವ 81 ನೇ ಐಎಂಎ ರಾಜ್ಯ ಸಮ್ಮೇಳನದಲ್ಲಿ ಅವರು ಅಧಿಕಾರ ಸ್ವೀಕರಿಸಲಿದ್ದು, ಹಿರಿಯ ನಾಯಕರಾದ ಅವರಿಗೆ ಬೆಳಗಾವಿ ವಿಭಾಗದ ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ವೈದ್ಯರನ್ನ ಸಂಘಟಿಸಿ ಸಂಘಟನೆಯನ್ನ ಮತ್ತಷ್ಟು ಬಲಪಡಿಸುವ ಜವಾಬ್ದಾರಿ ಹಾಗೂ ಉಸ್ತುವಾರಿಗಳನ್ನ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...