ಕತಾರ್: ಅಪಘಾತದಲ್ಲಿ ತೂಮಿನಾಡು ನಿವಾಸಿ ಹಾರೀಸ್ ಮೃತ್ಯು

Date:

ದೋಹಾ: ಖತಾರಿನಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ತೂಮಿನಾಡು ನಿವಾಸಿಯಾಗಿರುವ ಯುವಕನೊಬ್ಬ ದಾರುಣವಾಗಿ ಮೃತ ಪಟ್ಟಿದ್ದಾನೆ.

ತೂಮಿನಾಡು ಹಿಲ್ ಟಾಪ್ ನಗರ ನಿವಾಸಿ ಅಬೂಬಕ್ಕರ್ (ಅಬ್ಬುಚ್ಚ) ಎಂಬವರ ಪುತ್ರ ಹಾರಿಸ್ (39) ಮೃತ ದುರ್ದೈವಿ.

ದೋಹಾ ಖತಾರಿನಲ್ಲಿ ಟ್ಯಾಕ್ಸಿ ಚಲಾಯಿಸಿ ಜೀವನ ಸಾಗಿಸುತಿದ್ದ ಹಾರಿಸ್ ಕೆಲವು ದಿನಗಳ ಹಿಂದೆ ಊರಿಗೆ ಬಂದು ಮರಳಿದ್ದರು. ಬಾನುವಾರದಂದು ಟ್ಯಾಕ್ಸಿ ಚಕ್ರ ಪಂಕ್ಚರ್ ಆಗಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬಂಗಾಳಿ ಪ್ರಜೆಯೊಬ್ಬನ ಸಹಾಯದಿಂದ ಪಂಕ್ಚರ್ ಸರಿ ಮಾಡಿಸುವ ಮಧ್ಯೆ ಆ ದಾರಿಯಾಗಿ ಬಂದ ಆಂಬ್ಯುಲೆನ್ಯೊಂದು ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ  ಹಾರಿಸ್ ಹಾಗೂ ಜೊತೆಗಿದ್ದ ಬಂಗಾಳಿ ಪ್ರಜೆ ಗಂಭೀರ ಗಾಯಗೊಂಡು ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಎರಡೂ ಜೀವಗಳು ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ. ಖತಾರ್ ಸಮಯ ಮಧ್ಯಾಹ್ನ 12.30 ಗಂಟೆ ಹಾಗೂ (ಭಾರತೀಯ ಕಾಲಮಾನ 3 ಗಂಟೆಯ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ).
ಮೃತ ಶರೀರವನ್ನು ಊರಿಗೆ ತರಲು ಸಿದ್ಧತೆಗಳು ನಡೆಸುತ್ತಿರುವುದಾಗಿ ಕುಟುಂಬ ತಿಳಿಸಿದೆ.

ಒಂದು ಕೈಯಲ್ಲಿ ಮಾಡಿದ ದಾನ ಇನ್ನೊಂದು ಕೈಗೆ ತಿಳಿಯಬಾರದು ಎಂಬ ಮಾತನ್ನು ಜೀವಂತವಾಗಿಟ್ಟುಕೊಂಡಿದ್ದ ಹಾರಿಸ್ ಅಲ್ಪವಯಸ್ಸಲ್ಲಿಯೇ ದುರ್ಮರಣಕ್ಕೀಡಾಗಿರುವುದು ನಾಡಿನ ಜನತೆಯನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ತನ್ನ ಆದಾಯದ ಒಂದು ಭಾಗವನ್ನು ಅನಾಥಾಶ್ರಮ, ವೃದ್ಧಾಶ್ರಮ ಮತ್ತು ಅನಾಥ ಮಕ್ಕಳ ಶಿಕ್ಷಣಕ್ಕೆ, ರೋಗಿಗಳಿಗೆ, ನಿರ್ಗತಿಕ ಕುಟುಂಬಗಳಿಗೆ ನಿಶಬ್ದವಾಗಿ ನೀಡುತ್ತಿದ್ದ ಹಾರಿಸ್ ತಾನು ಮಾಡಿದ ದಾನ ಧರ್ಮವನ್ನು ಯಾವೊಬ್ಬರಿಗೂ ಬಿಚ್ಚಿಡದೆ, ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರವಿಲ್ಲದೆ, ಬಲಹೀನರಿಗೆ ನೆರವಾಗುತ್ತಿದ್ದನೆಂದು ಊರವರು ಹೇಳುತಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...