“ಡಿಕೆಯಸ್ಸಿಯ ಉನ್ನತಿಗಾಗಿ ಆತ್ಮವಿಶ್ವಾಸದೊಂದಿಗೆ ಶ್ರಮಿಸಿ ವಿಜಯಗೊಳಿಸಿರಿ”

Date:

ಡಿಕೆಯಸ್ಸಿ ಫ್ಯಾಮಿಲಿ ಮುಲಾಖಾತ್ ಜಿದ್ದಾ ಸಮಾರಂಭದಲ್ಲಿ ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ಅಲ್ ಹೈದ್ರೋಸಿ, ಕುಂಬೋಲ್

ಜಿದ್ದಾ: ಡಿಕೆಯಸ್ಸಿ ಮಕ್ಕಃ ಅಲ್ ಮುಕರ್ರಮ ವಲಯ ಸಮಿತಿ ಅಧೀನದ ಗ್ರಾಂಡ್ ಫ್ಯಾಮಿಲಿ ಮುಲಾಖಾತ್ 2025 ಕಾರ್ಯಕ್ರಮವು ದಿನಾಂಕ 16/10/2025 ರ ಗುರುವಾರ ಸಂಜೆ ಜಿದ್ದಾದ ಅಲ್ ಜವಾದ್ ನ ರೋಯಲ್ ಸಭಾಂಗಣದಲ್ಲಿ ಫ್ಯಾಮಿಲಿ ಮುಲಾಖಾತ್ ಚೆಯರ್ಮ್ಯಾನ್ ಇಸ್ಮಾಯೀಲ್ ಹೈದ್ರೋಸ್ ಮೂಡಿಗೆರೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮರ್ಹೂಂ ಉಮರ್ ಕುಂತೂರು ವೇದಿಕೆಯಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿದ ಡಿಕೆಯಸ್ಸಿ ಜಿಲ್ಲಾ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಬಹುಮಾನ್ಯ ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ಅಲ್ ಹೈದ್ರೋಸಿ, ಕುಂಬೋಲ್ ರವರು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಕಳೆದ 30 ವರ್ಷಗಳಿಂದ ಸಮುದಾಯದ ಬಡ, ಹಿಂದುಳಿದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಿ ಸಮಾಜಕ್ಕೆ ಅರ್ಪಿಸುತ್ತಿದ್ದು ಇದೀಗ 31 ನೇ ವರ್ಷಕ್ಕೆ ಪಾದಾರ್ಪಣೆಗೈಯ್ಯುತ್ತಿರುವ ಈ ಶುಭ ಸಂದರ್ಭ ಡಿಕೆಯಸ್ಸಿ ವಿಷನ್ 30 ಸಮಿತಿಯು ಹಲವಾರು ಕಾರ್ಯಕ್ರಮ ಗಳೊಂದಿಗೆ ಮುನ್ನುಗ್ಗುತ್ತಿದೆ. ಡಿಕೆಯಸ್ಸಿಯ ಉನ್ನತಿಗಾಗಿ ಆತ್ಮ ವಿಶ್ವಾಸದೊಂದಿಗೆ ಶ್ರಮಿಸಿ ವಿಜಯಗೊಳಿಸಿರಿ ಮತ್ತು ಸಂಘಟಣೆ ಹಮ್ಮಿಕೊಂಡ ಬೃಹತ್ ಯೋಜನೆಯಾದ 30 ಎಕ್ರೆ ಸ್ಥಳ ಖರೀದಿಸಿ ಯೂನಿವರ್ಸಿಟಿ ನಿರ್ಮಿಸುವ ಮುಖ್ಯ ಉದ್ದೇಶವಾಗಿದ್ದು ತಾವುಗಳೆಲ್ಲರೂ ಕೈ ಜೋಡಿಸಿ ಯಶಸ್ವಿಗೊಳಿಸಿರಿ ಎಂದು ಮನವಿ ಮಾಡಿ ದುಆ ಗೈದರು.

ಸಭಾ ಕಾರ್ಯಕ್ರಮ ಮುಂಚಿತವಾಗಿಮಕ್ಕಳಿಗೆ ಖಿರಾಅತ್ ಸ್ಫರ್ಧೆ ಏರ್ಪಡಿಸಲಾಗಿ ವಿಜೇತರಿಗೆ ಸರ್ಟಿಫಿಕೇಟ್ ಮತ್ತು ಬಹುಮಾನಗಳನ್ನು ವಿತರಿಸಲಾಯಿತು. ತೀರ್ಪುದಾರರಾಗಿ ಮುಝಮ್ಮಿಲ್ ಮದನಿ ಹಾಗೂ ಉಮರುಲ್ ಫಾರೂಖ್ ಸಅದಿ ಕಾರ್ಯ ನಿರ್ವಹಿಸಿದರು, ಉಚಿತ ವೈದಕೀಯ ಶಿಬಿರವನ್ನು ಅಲ್ ಅಬೀರ್ ಮೆಡಿಕಲ್ ಗ್ರೂಪ್ ತಂಡದವರು ನೆರವೇರಿಸಿ ಕೊಟ್ಟರು.

ಡಿಕೆಯಸ್ಸಿ ಕೇಂದ್ರ ಸಮಿತಿ ಮೀಡಿಯಾ ವಿಂಗ್ ಮುಖ್ಯಸ್ಥ ಇಸ್ಮಾಯೀಲ್ ಕಾಟಿಪಳ್ಳ ಪವಿತ್ರ ಖುರ್ ಆನ್ ನ ಸೂರತುಲ್ ಬಖರಾದ ಆಯತ್ ಗಳನ್ನು ವ್ಯಾಖ್ಯಾನ ದೊಂದಿಗೆ ವಾಚಿಸಿದರು. ಮಕ್ಕಃ ವಲಯ ಸಮಿತಿ ಅಧ್ಯಕ್ಷರಾದ ಅಝರ್ ಕೃಷ್ಣಾಪುರ ರವರು ನಮ್ಮ ಸಂಘಟನೆ ಮತ್ತು ಸ್ಥಾಪನೆಯ ಕಿರು ಪರಿಚಯ ನೀಡುವುದರ ಮುಖಾಂತರ ಸಭೆಗೆ ಆಗಮಿಸಿದ್ದ ಅತಿಥಿಗಳನ್ನು ಮತ್ತು ಸಭಿಕರನ್ನು ಸ್ವಾಗತಿಸಿದರು.

ಕೇಂದ್ರ ಸಮಿತಿ ಮಾಜಿ ಕಾರ್ಯಾಧ್ಯಕ್ಷರು ಬಹು॥ ಸಯ್ಯಿದ್ ಮುಹಮ್ಮದ್ ತಂಙಳ್ ಉಚ್ಚಿಲ ರವರು ಮಕ್ಕಃ ವಲಯ ಸಮಿತಿ ವತಿಯಿಂದ ಸ್ಥಾಪನೆಗೆ ಸೋಲಾರ್ ಅಳವಡಿಸಿ ಅದರಿಂದ ವಿದ್ಯುತ್ ಬಿಲ್ಲಿನಲ್ಲಿ ಪ್ರತೀ ತಿಂಗಳ ಸರಾಸರಿ 60 ಸಾವಿರ ರೂಪಾಯಿ ಉಳಿತಾಯವಾಗುತ್ತಿರುವ ಬಗ್ಗೆ ಸಭೆಗೆ ವಿವರಿಸುತ್ತಾ ಅಲ್ಲಾಹನ ನಾಮದೊಂದಿಗೆ ಉದ್ಘಾಟನೆ ಗೈದರು,

ವಲಯ ಸಮಿತಿ ಮುಖ್ಯ ಸಲಹೆಗಾರರಾದ ಬಹು॥ ಉಮರುಲ್ ಫಾರೂಖ್ ಸಅದಿಯವರು ನೆರೆದಿದ್ದ ಸಭಿಕರನ್ನು ಹುರಿದುಂಬಿಸುವ ಸಂಘಟನಾ ಭಾಷಣ ಗೈದರು.ನಂತರ ಡಿಕೆಯಸ್ಸಿ ಅಧೀನದ ಸಂಸ್ಥೆ ಮರ್ಕಝ್ ತಅಲೀಮಿಲ್ ಇಹ್ಸಾನ್ ಮೂಳೂರು ಸಂಸ್ಥೆಯ ಸಂಪೂರ್ಣ ಚಿತ್ರಣದ ಡಾಕ್ಯುಮೆಂಟರಿ ಬಿತ್ತರಿಸಲಾಯಿತು, ಅಥಿತಿಗಳಾಗಿ ಗ್ರೇ ಲೈನ್ ಗ್ರೂಪ್ ಚೆಯರ್ಮ್ಯಾನ್ ಹಾಗೂ ಮ್ಯಾನೇಜಿಂಗ್ ಡೈರಕ್ಟರ್ ಝೈನುದ್ದೀನ್ ಮುನ್ನೂರು, ಸಾಂಪ್ಕೊ ಮ್ಯಾನೇಜಿಂಗ್ ಡೈರಕ್ಟರ್ ಪ್ರವೀನ್ ಕುಮಾರ್ , ಜಝಾ ಕೋ CEO ಹಾಗೂ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಜಾವಿದ್ ಕಲ್ಲಡ್ಕ , ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಕೆ.ಎಚ್. ರಫೀಖ್ ಸೂರಿಂಜೆ ಶುಭ ಹಾರೈಸಿ ಮಾತನಾಡಿದರು.

ಡಿಕೆಯಸ್ಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕಣ್ಣಂಗಾರ್ , ಸಾಂಪ್ಕೊ ಚಯರ್ಮೆನ್ ಅಬ್ದುಲ್ ರಹೀಂ , MGT ಅಧ್ಯಕ್ಷರಾದ ಜಲಾಲ್ ಬೇಗ್,,ಕರ್ನಾಟಕ ಕಲ್ಚರಲ್ ಫೌಂಡೇಶನ್ ಜಿದ್ದಾ ಇದರ ಮನ್ಸೂರ್ ಕಾಟಿಪಳ್ಳ , ಪಿ.ಎಚ್. ಇಸ್ಮಾಯೀಲ್ ಉಸ್ತಾದ್ ಜುಬೈಲ್ , ಕೇಂದ್ರ ಸಮಿತಿ ಸದಸ್ಯರಾದ ಸಯ್ಯಿದ್ ಅಬ್ದುರ್ರಹ್ಮಾನ್ ತಂಙಳ್ ಉಚ್ಚಿಲ ,ಅಬೂಬಕರ್ ಬರ್ವ , ವಲಯ ಅಧ್ಯಕ್ಷ ಅಝರ್ ಕೃಷ್ಣಾಪುರ, ವಲಯ ಸದಸ್ಯರಾದ ಸಯ್ಯದ್ ನಾಫೀ ತಂಙಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು,

ಬಹು॥ ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ಅಲ್ ಹೈದ್ರೋಸಿ ಕುಂಬೋಲ್ ರವರನ್ನು ಈ ಸಂಧರ್ಭ ಆತ್ಮೀಯವಾಗಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಕೇಂದ್ರ ಸಮಿತಿ ಸದಸ್ಯರಾದ ಶರೀಫ್ ಮರವೂರು, ಯಾಂಬು ಘಟಕದ ಅಧ್ಯಕ್ಷ ರಝಾಕ್ ಉಸ್ತಾದ್ ಮದ್ದಡ್ಕ, ವಲಯ ಸಮಿತಿ ಹಣಕಾಸು ಕಾರ್ಯದರ್ಶಿ ಇಕ್ಬಾಲ್ ಅರಳ, ವಲಯ ಸಂವಹನ ಕಾರ್ಯದರ್ಶಿ ಇಕ್ಬಾಲ್ ಅಲ್ ಫಲಾಹ್, ಯಾಂಬು ಘಟಕದ ಹಣಕಾಸು ಕಾರ್ಯದರ್ಶಿ ಹೈದರ್ ಮೂಡಿಗೆರೆ, ಮದೀನಾ ಮುನವ್ವರದ ಖುಬಾ ಘಟಕದ ಅಧ್ಯಕ್ಷ ಬದ್ರುದ್ದೀನ್ ಕಬಕ, ಹರಮ್ ಘಟಕದ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕುಪ್ಪೆಪದವು ಮತ್ತು ಹಣಕಾಸು ಕಾರ್ಯದರ್ಶಿ ಮನ್ಸೂರ್ ಉಚ್ಚಿಲ, ತಾಯಿಫ್ ಘಟಕದ ಅಧ್ಯಕ್ಷ ಬಷೀರ್ ಉಸ್ತಾದ್, ಹಣಕಾಸು ಕಾರ್ಯದರ್ಶಿ ಸುಲೈಮಾನ್ ತೋಡಾರ್, ಮಕ್ಕಃ ಘಟಕದ ಅಧ್ಯಕ್ಷ ಮೂಸಾ ಹಾಜಿ, ಜೆದ್ದ ಸೌತ್ ಅಧ್ಯಕ್ಷ ಇಬ್ರಾಹಿಂ ಬಂಡಾಡಿ, ಹಣಕಾಸು ಕಾರ್ಯದರ್ಶಿ ಫಝಲ್ ಸೂರಿಂಜೆ, ಜೆದ್ದ ನಾರ್ತ್ ಪ್ರ.ಕಾರ್ಯದರ್ಶಿ ಶಮೀಮ್, ಹಣಕಾಸು ಕಾರ್ಯದರ್ಶಿ ಯಾಸೀನ್ , ಸ್ವಯಂ ಸೇವಕರ ನಾಯಕರಾದ ಆಸಿಫ್ ಕೋಟ ಉಪಸ್ಥಿತರಿದ್ದರು.

ಮದೀನಾ ಯಾಂಬು, ತಾಯಿಫ್, ಮಕ್ಕಾ ಯನಿಟ್ ಗಳಿಂದ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮ ಯಶಸ್ಸು ಗೊಳ್ಳುವಲ್ಲಿ ಸಹಕರಿಸಿದರು. ಮಕ್ಕಾಃ ವಲಯ ಸಮಿತಿ ಪ್ರ.ಕಾರ್ಯದರ್ಶಿ ರಫೀಕ್ ಎರ್ಮಾಳ್ ಕಾರ್ಯಕ್ರಮ ನಿರೂಪಿಸಿದರು. ಮುಲಾಖಾತ್ ವೈಸ್ ಚೆಯರ್ಮ್ಯಾನ್ ಹಸನ್ ರಜಬ್ ಯಡೂರು ಧನ್ಯವಾದಗೈದರು, ಮಕ್ಕಳಿಗೆ ಮತ್ತು ಮಹಿಳೆಯರ ವಿವಿಧ ರೀತಿಯ ಕ್ರೀಡೆ, ಕ್ವಿಝ್, ಮತ್ತು ಪುರುಷರಿಗೆ ವಾಲಿಬಾಲ್, ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು. ವಿಜೇತರಿಗೆ ಟ್ರೋಫಿಯೊಂದಿಗೆ ಆಕರ್ಷಕ ಬಹುಮಾನ ನೀಡಲಾಯಿತು. ಮಂಗಳೂರು ಸ್ಪೆಶಲ್ ದಮ್ ಬಿರಿಯಾನಿಯು ಕಾರ್ಯಕ್ರಮದಲ್ಲಿ ವಿಷೇಶವೆನಿಸಿತ್ತು, ಒಟ್ಟಿನಲ್ಲಿ ಡಿಕೆಯಸ್ಸಿ ಮಕ್ಕಃ ಅಲ್ ಮುಕರ್ರಮ ವಲಯ ಸಮಿತಿ ಆಯೋಜಿಸಿದ್ದ ಫ್ಯಾಮಿಲಿ ಮುಲಾಖಾತ್ 2025 ಗ್ರಾಂಡ್ ಸೆಕ್ಸಸ್ ಆಗಿ ಮೂಡಿ ಬಂತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...