ಗಾಂಧಿ ವಿಚಾರಧಾರೆ : ಅಂತರ್ ಕಾಲೇಜು ಭಾಷಣ ಸ್ಪರ್ಧೆ: ಭುವನೇಂದ್ರ ಕಾಲೇಜಿನ ಸಿಂಚನ ಕೆ.ಎಸ್. ಪ್ರಥಮ, ಬೆಳ್ತಂಗಡಿಯ ಹೆಚ್. ವಷಾ೯ ದ್ವಿತೀಯ

Date:

ಮೂಡುಬಿದಿರೆ : ಇಲ್ಲಿನ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆದ ಗಾಂಧಿ ವಿಚಾರಧಾರೆ ಕುರಿತು ಎಸ್ ಡಿ ಸಾಮ್ರಾಜ್ಯ ಸ್ಮಾರಕ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಭಾಷಣ ಸ್ಪರ್ಧೆಯಲ್ಲಿ ಕಾರ್ಕಳ ಭುವನೇಂದ್ರ ಕಾಲೇಜಿನ ಸಿಂಚನ ಕೆ.ಎಸ್. ಪ್ರಥಮ, ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್. ವರ್ಷ ದ್ವಿತೀಯ ಮತ್ತು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಶ್ರೀವಿದ್ಯಾ.ಎನ್ ತೃತೀಯ ಬಹುಮಾನ ಪಡೆದುಕೊಂಡರು.

ಸುರತ್ಕಲ್ ಗೋವಿಂದ ದಾಸ ಕಾಲೇಜಿನ ತೇಜಸ್ವಿನಿ ಕರ್ಕೇರ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯ ರಕ್ಷಿತಾ ಹಾಗೂ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭಾಗ್ಯ ಸಮಾಧಾನಕರ ಬಹುಮಾನವನ್ನು ಗಳಿಸಿದರು.

ಸಮಾರೋಪ ಸಮಾರಂಭದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಮೂಡುಬಿದಿರೆ ಶಾಖೆಯ ಮುಖ್ಯ ಪ್ರಬಂಧಕರಾದ ತುಳಸಿ ಹಾಗೂ ಕಾಲೇಜಿನ ಹೆಮ್ಮೆಯ ಹಳೆ ವಿದ್ಯಾರ್ಥಿ ವಿವೇಕಾನಂದ ಪದವಿಪೂರ್ವ ಕಾಲೇಜು ಎಡಪದವು ಇಲ್ಲಿಯ ದೈಹಿಕ ಶಿಕ್ಷಕ ಪ್ರೇಮನಾಥ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬಹುಮಾನ ವಿತರಿಸಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷ್ಮಿ, ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಹರೀಶ್, ಮಾನವಿಕ ಸಂಘದ ಸಂಯೋಜಕಿ ಗೀತಾರಾಮಕೃಷ್ಣ. ವಿದ್ಯಾರ್ಥಿ ಸಂಘದ ನಾಯಕಿ ಸಾಕ್ಷಿ ಶೆಟ್ಟಿ. ಸಾಕ್ಷಿ ಉಪಸ್ಥಿತರಿದ್ದರು.

ನಿಟ್ಟೆ ವೃತ್ತಿಪರ ಶಿಕ್ಷಣ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಪ್ರದೀಪ್ ಕೆ ಎಸ್. ಸಂತ ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅವಿನಾಶ್ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಮುನಿಯಲು ಹೆಬ್ರಿಯ ಉಪನ್ಯಾಸಕಿ ಜಯಶ್ರೀ ತೀರ್ಪುಗಾರರಾಗಿ ಸಹಕರಿಸಿದರು.

ವಿದ್ಯಾರ್ಥಿಗಳಾದ ಫ್ಲೋರಿನ್ ಸ್ವಾಗತಿಸಿದರು. ಮಾನವಿಕ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ಸಾಕ್ಷಿ ಕಾರ್ಯಕ್ರಮ ನಿರೂಪಿಸಿದರು.ರಂಜಿತ್ ವಂದಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...