ಮೂಡುಬಿದಿರೆ-ಪುತ್ತಿಗೆ ವ್ಯ. ಸೇ. ಸಹಕಾರಿ ಸಂಘದಿಂದ ಪ್ರತಿಭಾ ಪುರಸ್ಕಾರ ಗೌರವ

Date:

ಮೂಡುಬಿದಿರೆ: ಇಲ್ಲಿನ ಮೂಡುಬಿದಿರೆ-ಪುತ್ತಿಗೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯು ತಮ್ಮ ಮಾಸಿಕ ಸಭೆಯ ಗೌರವಧನವನ್ನು ೧೪ ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡಿ, ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಿದರು.

ಸಹಕಾರಿಯ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಅವರು ಮಾತನಾಡಿ, ಪಾಲಡ್ಕ ಹಾಗೂ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಒಳಗೊಂಡಿರುವ ಈ ಸಹಕಾರಿಯು ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಸುಧಾರಣೆಗೆ ಹಲವಾರು ರೀತಿಯಲ್ಲಿ ಶ್ರಮಿಸಿದೆ. ಸಹಕಾರಿ ವ್ಯಾಪ್ತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತಿಭಾ ಪುರಸ್ಕಾರ ಯೋಜನೆಯನ್ನು ಆಯೋಜಿಸಿದ್ದೇವೆ. ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಉತ್ತಮ ಸ್ಥಾನಮಾನ ಗಳಿಸಿ, ಸಹಕಾರಿಯ ಸದಸ್ಯರಾಗಿ, ಗ್ರಾಹಕರಾಗಿ ಅಥವಾ ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾಗುವಂತಹ ಯೋಗ ಒದಗಿ ಬರಲಿ ಎಂದು ಹಾರೈಸಿದರು.


ಕಾರ್ಯನಿರ್ವಹಣಾಧಿಕಾರಿ ತೃಪ್ತಿ ಆನಂದ ಆಚಾರ್ಯ ಉಪಸ್ಥಿತರಿದ್ದರು.
ಉಪಾಧ್ಯಕ್ಷರಾದ ಶಶಿಧರ್ ಪಿ. ನಾಯಕ್, ನಿರ್ದೇಶಕರುಗಳಾದ ನಾರಾಯಣ ಮಡಿವಾಳ, ಪಿ. ವಿಶ್ವನಾಥ ನಾಯ್ಕ್, ನಾಗರಾಜ ಹೆಗಡೆ, ನೀರಜಾಕ್ಷಿ ಎಸ್. ಶೆಟ್ಟಿ, ವಿನುತಾ ಹೆಗ್ಡೆ, ಸುಕೇಶ್ ಪೂಜಾರಿ, ಸತೀಶ್ ಕಾವ, ಪೌಲ್ ಡಿಸೋಜ, ರಮೇಶ್, ಕಿಶೋರ್ ಕುಮಾರ್ ಹಾಗೂ ಸಹಕಾರಿ ಸಂಘಗಳ ವಲಯ ಮೇಲ್ವಿಚಾರಕರು (ಮೂಡುಬಿದಿರೆ ೨ನೇ ವಲಯ), ಮತ್ತು ಬ್ಯಾಂಕ್ ಪ್ರತಿನಿಧಿಗಳು ತಮ್ಮ ಸಿಟ್ಟಿಂಗ್ ಫೀಸ್‌ನ್ನು ಈ ಪ್ರತಿಭಾ ಪುರಸ್ಕಾರಕ್ಕಾಗಿ ನೀಡಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದಕ್ಕೆಯಲ್ಲಿ ಲೈಟ್ ಕಂಬ ಬಿದ್ದು ಕಾರ್ಮಿಕ ಮೃತ್ಯು: ಸೂಕ್ತ ಪರಿಹಾರಕ್ಕೆ ಎಸ್.ಡಿ.ಟಿ.ಯು ಆಗ್ರಹ.

ಮಂಗಳೂರು:ಪೆ22: ಮಂಗಳೂರಿನ ದಕ್ಕೆಯಲ್ಲಿ ಲೈಟ್ ಕಂಬ ಬಿದ್ದು ತಮಿಳುನಾಡಿನ ಮೀನು ಕಾರ್ಮಿಕ...

‘ನಮ್ಮ ನಡಿಗೆ ಮುಡಿಪು ಪುಣ್ಯ ಕ್ಷೇತ್ರದ ಕಡೆಗೆ’ ಆದ್ಯಾತ್ಮಿಕ ಜಾಥಾ

ಉಳ್ಳಾಲ‌: ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ ವತಿಯಿಂದ ಭಾನುವಾರ ನಡೆದ 'ನಮ್ಮ...

ಮಸ್ಜಿದ್ ಬಿಲಾಲ್ ಸಜಿಪನಡು ಇದರ ನೂತನ ಅಧ್ಯಕ್ಷರಾಗಿ ಜಾಬಿರ್ ಮತ್ತು ಕಾರ್ಯದರ್ಶಿಯಾಗಿ ಇರ್ಶಾದ್

ಉಳ್ಳಾಲ: ಮಸ್ಜಿದ್ ಬಿಲಾಲ್ ಸಲಫಿ ಜುಮಾ ಮಸೀದಿ ಸಜಿಪನಡು ಇದರ ವಾರ್ಷಿಕ...

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...