ಅದ್ದೂರಿಯಾಗಿ ನಡೆದ “ದುಬೈ ಗಡಿನಾಡ ಉತ್ಸವ-2025”

Date:

ದುಬೈ : ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಜಂಟಿಯಾಗಿ ಆಯೋಜಿಸಿದ್ದ ನಾಲ್ಕನೇ ವರ್ಷದ “ದುಬೈ ಗಡಿನಾಡ ಉತ್ಸವ-2025” ಕಾರ್ಯಕ್ರಮವು ಇತ್ತೀಚೆಗೆ ನಗರದ ಊದು ಮೇಥಾದ ಗ್ಲೆಂಡೇಲ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ಸಂಜೆ ನಾಲ್ಕರಿಂದ ರಾತ್ರಿ ಹನ್ನೊಂದರ ವರೆಗೆ ಅದ್ದೂರಿಯಾಗಿ ನಡೆಯಿತು.


ಕರ್ನಾಟಕ ಜಾನಪದ ಪರಿಷತ್ ಮಂಗಳೂರಿನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೋಡಿಯಲ್ ಬೈಲ್ ರವರು ಯಕ್ಷಗಾನದ ಚೆಂಡೆ ಬಾರಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಉದ್ಘಾಟನಾ ಕಾರ್ಯಕ್ರಮದಲ್ಲಿ ವಾಸು ಶೆಟ್ಟಿ ದುಬೈ,ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಗಲ್ಫ್ ಘಟಕಗಳ ಮುಖ್ಯ ಸಂಚಾಲಕರಾದ ಅಶ್ರಫ್ ಶಾ ಮಾಂತುರು,ದುಬೈ ಘಟಕದ ಗೌರವಾಧ್ಯಕ್ಷರಾದ ನ್ಯಾ.ಇಬ್ರಾಹಿಂ ಖಲೀಲ್, ಅಧ್ಯಕ್ಷರಾದ ಅಮರ್ ದೀಪ ಕಲ್ಲುರಾಯ ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳ‌ ಅಂಗವಾಗಿ ಗಡಿನಾಡ ಗಾಯಕ ಗಾಯಕಿಯರಿಂದ ಸಂಗೀತ ಸುಧೆ, ಯುಎಇಯ ಪ್ರಸಿದ್ಧ ನೃತ್ಯ ತಂಡದವರಿಂದ ನೃತ್ಯ ವೈಭವ ಮತ್ತು ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ತಂಡದವರಿಂದ ಶ್ರೀ ಕೃಷ್ಣ ಬಾಲಲೀಲೆ ಯಕ್ಷಗಾನ,ದಫ್ ಮುಟ್ ಕಾರ್ಯಕ್ರಮಗಳು ಮೆರುಗು ನೀಡಿತು.
ರಾತ್ರಿ ನಡೆದ ಸಮಾರೋಪ ಸಮಾರಂಭ ಕರ್ನಾಟಕ ಹೆಲ್ತ್ ಕೇರ್ ಕೌನ್ಸಿಲ್ ನ ಅಧ್ಯಕ್ಷರಾದ ಯು.ಟಿ.ಇಫ್ತಿಕಾರ್ ಮುಖ್ಯ ಅತಿಥಿಯ ಉಪಸ್ಥಿತಿಯಲ್ಲಿ ನಡೆಯಿತು.ಕಾಸರಗೋಡಿನ ಶಾಸಕರಾದ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರ ಶಾಸಕರಾದ ಎ.ಕೆ.ಎಂ.ಅಶ್ರಫ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಶಿವರಡ್ಡಿ ಕ್ಯಾಡೆಡ್ ರವರು ಸಾಧಕರಾದ ಮಂಗಳೂರಿನ ಉದ್ಯಮಿ ಪ್ರಕಾಶ್ ಕುಂಪಲ,ಬಿ.ಎಂ.ಗ್ರೂಪ್ ನಾ ಆಡಳಿತ ನಿರ್ದೇಶಕರಾದ ಡಾ.ವಿ.ಕನಕರಾಜ್, ಮ್ಯಾಕ್ ಕ್ಯಾರ್ ಕ್ಲಿನಿಕ್ ದುಬೈ ಆಡಳಿತ ನಿರ್ದೇಶಕರಾದ ಬಶೀರ್ ಕಿನ್ನಿಂಗಾರ್, ಉದ್ಯಮಿ ಸಂದೀಪ್ ಶೆಟ್ಟಿಯವರನ್ನು ಗಡಿನಾಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮಂಗಳೂರಿನ ಉದ್ಯಮಿ ಕಟಪಾಡಿ ಸತ್ಯೆಂದ್ರ ಪೈ, ಕ್ರಿಯೆಟಿವ್ ಕ್ಯಾಟರ್ ಹಾಸ್ಪಿಟಲಿಟಿನ ಆಡಳಿತ ನಿರ್ದೇಶಕರಾದ ಮಂಜುನಾಥ ರಾಜನ್, ಕರ್ನಾಟಕ ಜಾನಪದ ಪರಿಷತ್ ಒಮಾನ್ ಘಟಕದ ಅಧ್ಯಕ್ಷರಾದ ಶಿವಾನಂದ ಕೋಟ್ಯಾನ್ ಕಟಪಾಡಿಯವರ ಸಾಧನೆಯನ್ನು ಗುರುತಿಸಿ ಸಾಧಕ ಸನ್ಮಾನ ಮಾಡಿ ಗೌರವಿಸಲಾಯಿತು ಮತ್ತು ದುಬೈಯ ಕನ್ನಡಿಗರಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಕನ್ನಡ ಪಾಠ ಶಾಲೆಯನ್ನು ಸಾಧಕ ಸಂಸ್ಥೆ ಎಂದು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಮಾಹಿನ್ ಕೆಲೋಟ್,ಉದ್ಯಮಿ ರೊನಾಲ್ಡೋ ಮಾರ್ಟಿಸ್, ಯುಎಇ ಪದ್ಮಶಾಲಿ ಸಮಾಜದ ಅಧ್ಯಕ್ಷರಾದ ರಘುರಾಮ ಶೆಟ್ಟಿಗಾರ್,ಅಬುಬಕ್ಕಾರ್ ರೋಯಲ್ ಬೊಳ್ಳಾರ್,ಮಸ್ಕತ್ ನ ಉದ್ಯಮಿ ಯುವರಾಜ್ ಸಾಲಿಯಾನ್,ಅಶ್ರಫ್ ಶಾ ಮಾಂತುರು,ಎ.ಆರ್ ಸುಬ್ಬಯ್ಯಕಟ್ಟೆ,ಝಡ್ ಎ ಕಯ್ಯಾರ್,ಉದ್ಯಮಿ ಯುಸುಫ್ ಪೈವಳಿಕೆ,ನಿವೃತ್ತ ಪ್ರಾಂಶುಪಾಲರಾದ ವಿ.ಎಚ್.ಅಬ್ದುಲ್ ಹಮೀದ್
ಹನೀಫ್ ಗೋಲ್ಡ್ ಕಿಂಗ್,ಅನ್ಸಾರ್ ಪೈವಳಿಕೆ ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಅಮರ್ ದೀಪ ಕಲ್ಲುರಾಯರವರು ವಹಿಸಿದ್ದರು.ಅಶ್ರಪ್ ಶಾ ಮಾಂತುರು ರವರು ಸ್ವಾಗತಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಆರತಿ ಅಡಿಗ ಮತ್ತು ವಿಘ್ನೇಶ್ ಕುಂದಾಪುರ ಅಚ್ಚುಕಟ್ಟಾಗಿ ನಿರೂಪಿಸಿದರು.
ಕಾರ್ಯಕ್ರಮದ ಯಶಸ್ವಿಗೆ ಸಾಥ್ ನೀಡಿದ ಘಟಕದ ಪದಾಧಿಕಾರಿಗಳಾದ ಇಬ್ರಾಹಿಂ
ಬಾಜೂರಿ,ವಿಜಯಕುಮಾರ್ ಶೆಟ್ಟಿ ಗಾಣದಮೂಲೆ, ಅನೀಶ್ ಅಡಪ ಮಡಂದೂರು,ಸುಗಂದರಾಜ್ ಬೇಕಲ್,ಅಶ್ರಫ್ ಪಿ.ಪಿ.ಬಾಯರ್,ಮಂಜುನಾಥ ಕಾಸರಗೋಡು, ಯುಸುಫ್ ಶೇಣಿ,ಜೇಶ್ ಬಾಯರ್,ಅಮಾನ್ ತಲೆಕಳ, ಮನ್ಸೂರ್ ಪೆರ್ಲ,ಶಾಕೀರ್ ಬಾಯರ್, ರಾಮಚಂದ್ರ ಬೆದ್ರಡ್ಕ,ಆಶೀಕ್ ಮಿಯಾರವರು ಘಟಕದ ಅಧ್ಯಕ್ಷರಾದ ಅಮರ್ ದೀಪ ಕಲ್ಲುರಾಯರವರು ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...