ಮುಹಮ್ಮದ್ ಮುಕ್ಕಚೇರಿ ಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Date:

ಉಳ್ಳಾಲ:ತನ್ನ ಸಂಪೂರ್ಣ ಜೀವನವನ್ನು ಸಮಾಜಸೇವೆ, ಮಾನವೀಯತೆ, ಜನಪರ ಹೋರಾಟ ಮತ್ತು ಜನಸೇವೆಗೆ ಅರ್ಪಿಸಿದ ಜನಸ್ನೇಹಿ ಹಿರಿಯ ನಾಯಕ, ಉಳ್ಳಾಲ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಆರು ಬಾರಿ ನಿರಂತರವಾಗಿ ಸದಸ್ಯರಾಗಿ ಆಯ್ಕೆಯಾದ ಗೌರವಾನ್ವಿತ ಶ್ರೀ ಮೊಹಮ್ಮದ್ ಮುಕ್ಕಚೇರಿ ರವರಿಗೆ 2025-26ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಇವರು ಸದಾ ಜನರ ಹಿತದೃಷ್ಟಿಯಿಂದ ನೇರ ನುಡಿಯ ಮೂಲಕ ಜನರ ಮನ ಗೆದ್ದವರು, ಸರಳತೆ, ಸೌಮ್ಯತೆ ಮತ್ತು ಪ್ರಾಮಾಣಿಕತೆಯ ಮಾದರಿಯ ಮೂಲಕ ಸಮಾಜದಲ್ಲಿ ಸೇವಾಭಾವನೆಗೆ ನಿಜವಾದ ಅರ್ಥ ನೀಡಿದವರು, ಸಹಾನುಭೂತಿಯ ನಿಲುವು, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸದಾ ಶ್ರಮಿಸಿದವರು.

ಉತ್ತಮ ಸಮಾಜ ಸೇವಕ. ಇಷ್ಟು ವರ್ಷಗಳ ಕಾಲ ರಾಜಕೀಯದಲ್ಲಿ ಇದ್ದರೂ ಸಹಾ ಯಾವುದೇ ಕಳಂಕ ಇಲ್ಲದ ವ್ಯಕ್ತಿ. ಸಮಾಜ ಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟವರು.

ಈ ಗೌರವ ಅವರ ದೀರ್ಘಕಾಲದ ಸೇವಾ ಮನೋಭಾವಕ್ಕೆ ರಾಜ್ಯದ ಮಾನ್ಯತೆ ದೊರೆತಿದೆ ಎಂಬುದು ನಿಜವಾದ ಸಂತೋಷದ ವಿಷಯ.

ಸೃಷ್ಟಿಕರ್ತನು ಅವರಿಗೆ ಇನ್ನಷ್ಟು ಆಯುಸ್ಸು, ಆರೋಗ್ಯ ಹಾಗೂ ಶಕ್ತಿ ನೀಡಲಿ — ಮುಂದಿನ ದಿನಗಳಲ್ಲೂ ಸಮಾಜಕ್ಕೆ ಸೇವೆ ಸಲ್ಲಿಸಲು ಅವಕಾಶ ದೊರಕಲಿ ಎಂದು ಹಾರೈಕೆಗಳು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...