ಸಮುದಾಯ ಆರೋಗ್ಯ ಕೇಂದ್ರ ಮೇಲ್ದಜೆ೯ಗೆ, ಶಾಶ್ವತ ರಕ್ತ ಬ್ಯಾಂಕ್ ಗಾಗಿ ಸಚಿವರಿಗೆ ಮನವಿ

Date:

ಮೂಡುಬಿದಿರೆ: ಈ ಪ್ರದೇಶದ ಆರೋಗ್ಯ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯ ದೃಷ್ಟಿಯಿಂದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದಜೆ೯ಗೇರಿಸಬೇಕು, ಸರಕಾರಿ ಅಧೀನದಲ್ಲಿನ ಶಾಶ್ವತ ರಕ್ತ ಬ್ಯಾಂಕ್ ಅಥವಾ ರಕ್ತ ಶೇಖರಣಾ ಘಟಕ ಸ್ಥಾಪನೆ ಹಾಗೂ ಮೂಡುಬಿದಿರೆಯಲ್ಲಿ ಚೌಟ ರಾಣಿ ಅಬ್ಬಕ್ಕ ಸಂಶೋಧನಾ ಕೇಂದ್ರವನ್ನು ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಜವನೆರ್ ಬೆದ್ರ ಪೌಂಡೇಷನ್ (ರಿ) ವತಿಯಿಂದ ಅಮರ್ ಕೋಟೆ ಅವರು ಶನಿವಾರ ಮನವಿಯನ್ನು ಸಲ್ಲಿಸಿದರು.


ಬೆಳೆಯುತ್ತಿರುವ ಮೂಡುಬಿದಿರೆ ನಗರದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಸಂಖ್ಯೆಯೂ ಹೆಚ್ಚುತ್ತಿದೆ. ಈಗ ಇರುವ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದಜೆ೯ಗೇರಿಸಿದರೆ ಸ್ಥಳೀಯ ನಾಗರಿಕರಿಗೆ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳು ದೊರೆಯಲಿದ್ದು ತುತು೯ ವೈದ್ಯಕೀಯ ಸೇವೆಗಳಿಗೂ ಬಲ ನೀಡಿದಂತ್ತಾಗುತ್ತದೆ.
ಮೂಡುಬಿದಿರೆಯಲ್ಲಿ ಪ್ರಸ್ತುತ ಖಾಸಗಿ ರಕ್ತ ಬ್ಯಾಂಕ್ ಗಳಿದ್ದು ಅವುಗಳಲ್ಲಿ ರಕ್ತ ಪೂರೈಕೆಗೆ ಹೆಚ್ಚಿನ ಮೊತ್ತವನ್ನು ವಿಧಿಸಲಾಗುತ್ತದೆ ಇದರಿಂದ ಆಥಿ೯ಕವಾಗಿ ಹಿಂದುಳಿದವರು, ದುಬ೯ಲ ಕುಟುಂಬದವರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ರಕ್ತ ಬ್ಯಾಂಕ್ ನ್ನು ಸ್ಥಾಪಿಸಿದರೆ ತುತು೯ ಆರೋಗ್ಯ ಸೇವೆಗಳಲ್ಲಿ ಜೀವ ರಕ್ಷಣೆಗೆ ಮಹತ್ವದ ಸಹಾಯ ಮಾಡಿದಂತ್ತಾಗುತ್ತದೆ.

ಮೂಡುಬಿದಿರೆಯು ಐತಿಹಾಸಿಕ ಮತ್ತು ಧಾಮಿ೯ಕ ಪರಂಪರೆಯೊಂದಿಗೆ ‘ಜೈನ ಕಾಶಿ’ ಎಂದು ಪ್ರಸಿದ್ಧವಾಗಿದೆ. ಇಲ್ಲಿ ಅನೇಕ ಪ್ರಾಚೀನ ಬಸದಿಗಳು, ದೇವಾಲಯಗಳು ಮತ್ತು ಸಾಂಸ್ಕೃತಿಕ ಧಾಮಿ೯ಕ ಸ್ಮಾರಕಗಳಿವೆ. ತುಳುನಾಡಿನ ವೀರ ರಾಣಿಯಾದ ರಾಣಿ ಅಬ್ಬಕ್ಕ ಅವರ ಶೌಯ೯, ದೇಶಭಕ್ತಿ ಮತ್ತು ಸ್ತ್ರಿಶಕ್ತಿ ಕುರಿತು ಸಂಶೋಧನೆ ಹಾಗೂ ಅಧ್ಯಯನ ನಡೆಸಲು ಅವರ ಹೆಸರಿನಲ್ಲಿ ಸಂಶೋಧನಾ ಕೇಂದ್ರದ ಅಗತ್ತವಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂದಭ೯ದಲ್ಲಿ ಮೂಡುಬಿದಿರೆ ಜೈನ ಮಠದ ಚಾರುಕೀತಿ೯ ಭಟ್ಟಾರಕ ಸ್ವಾಮೀಜಿ, ಮಾಜಿ ಸಚಿವ ಕೆ. ಅಭಯಚಂದ್ರ, ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಚೌಟರ ಅರಮನೆಯ ಕುಲದೀಪ ಎಂ. ಕೆಪಿಸಿಸಿ ಕಾಯ೯ದಶಿ೯ ಮಿಥುನ್ ರೈ, ಪುರಸಭಾ ಸದಸ್ಯರಾದ ಜೊಸ್ಸಿ ಮಿನೇಜಸ್, ಪುರಂದರ ದೇವಾಡಿಗ, ಸುರೇಶ್ ಕೋಟ್ಯಾನ್, ಮುಖ್ಯಾಧಿಕಾರಿ ಇಂದು ಎಂ.,ಸುದಶ೯ನ್ ಎಂ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...