ಮಂಗಳೂರು ವಿವಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ, ಕನ್ನಡ ಭಾಷೆಯನ್ನು ಹೃದಯದಿಂದ ಪ್ರೀತಿಸಿ: ಪ್ರೊ.ಅಜಿತ್ ಪ್ರಸಾದ

Date:

ಕೊಣಾಜೆ: ಬದುಕಲು ನಮಗೆ ಹೇಗೆ ಕನ್ನಡ ನೆಲಬೇಕೋ ಹಾಗೆ ಕನ್ನಡ ಭಾಷೆಯನ್ನೂ ಹೃದಯದಿಂದ ಪ್ರೀತಿಸಬೇಕು. ಕನ್ನಡದ ರಕ್ಷಣೆಗೆ ಮುಂದಾಗದಿದ್ದರೆ ಅಪಾಯ ಎದುರಾಗಲಿದೆ. ಬೆಂಗಳೂರಿನಲ್ಲಿ ಕನ್ನಡಿಗರು ಯಾವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಯೋ ಹಾಗೆಯೇ ಮಂಗಳೂರಿಗೂ ಅಂತ ಸಮಸ್ಯೆ ಎದುರಾಗಲಿದೆ. ಇಲ್ಲಿಯೂ ತುಳು ಕನ್ನಡದ ಬದಲು ಮಲಯಾಲಂ ಇನ್ನಿತರ ಭಾಷೆಗಳು ಕೇಳಿ ಬರುತ್ತಿವೆ. ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮಂಗಳೂರಿಗರೂ ಏಟು ತಿನ್ನುವ ಪರಿಸ್ಥಿತಿ ಬರಬಹುದು ಎಂದು ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ಅಜಿತ್ ಪ್ರಸಾದ ಅವರು ಹೇಳಿದರು.

ಅವರು ಮಂಗಳೂರು ವಿವಿಯ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೋಮವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಭಾಷಾವಾರು ಪ್ರಾಂತ್ಯ ರಚನೆಯಾದ ಮೇಲೆ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂಬ ದೊಡ್ಡ ಒಂದು ಸುಳ್ಳೊಂದನ್ನು ತಲೆಮಾರುಗಳಿಂದ ನಮ್ಮ ಮೇಲೆ ಹೇರಲಾಗಿದೆ. ಹಿಂದಿ ಮಾತ್ರ ರಾಷ್ಟ್ರಭಾಷೆಯಾಗದು. ಕನ್ನಡ ತುಳು, ತಮಿಳು,ಮಲಯಾಳ, ಕೊಂಕಣಿ ಎಲ್ಲವೂ ರಾಷ್ಟ್ರ ಭಾಷೆಗಳೇ. ತ್ರಿಭಾಷಾ ಸೂತ್ರದ ಸೂಕ್ಷ್ಮತೆಗಳನ್ನು ಮೊದಲು ನಾವು ಅರ್ಥ ಮಾಡಿಕೊಂಡರೆ ಅದು ನಮನ್ನು ಹೇಗೆ ಮೋಸ ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯ. ಈ ಸೂತ್ರದ ಆಧಾರದಲ್ಲಿ ನಮಗೆ ಗೊತ್ತಿಲ್ಲದೆಯೇ ನಮ್ಮ‌ ತೆರಿಗೆಯ ಹಣದಿಂದಲೇ ಹಿಂದಿಯನ್ನು ನಮ್ಮ ತಲೆಯ ಮೇಲೆ ಬಲವಂತದಿಂದ ತುರುಕಿಸುವ ಕೆಲಸವನ್ನು ಅವ್ಯಾಹತವಾಗಿ ಇಂದಿಗೂ ಮಾಡುತ್ತಾ ಇದ್ದಾರೆ. ಕನ್ನಡವ ಅದು ಕೇವಲ ಸಂವಹನ ಭಾಷೆ ಮಾತ್ರವಲ್ಲ ಪ್ರತಿಯೊಬ್ಬನ ಕನ್ನಡಿಗನ ಹೃದಯದಲ್ಲಿ ನೆಲೆ ನಿಲ್ಲಬೇಕಾದ ಭಾಷೆಯಾಗಿದೆ ಎಂದರು.

ಮಂಗಳೂರು ವಿವಿ ಕುಲಸಚಿವರಾದ ಕೆ.ರಾಜು ಮೊಗವೀರ ಅವರು ಮಾತನಾಡಿ, ಸಂಸ್ಕೃತಿ ಮತ್ತು ಭಾಷೆಗೆ ಸಂಬಂಧವಿದೆ. ಇದನ್ನು ಬಹುತ್ವದ ನೆಲೆಯಲ್ಲೇ ಅರ್ಥಮಾಡಿಕೊಂಡು ಮುನ್ನಡೆಯಬೇಕು. ಇವತ್ತಿನ ತಂತ್ರಜ್ಞಾನವನ್ನು ಕನ್ನಡ ಬೆಳವಣಿಗೆಗೆ ಪೂರಕವಾಗಿ ಬೆಳೆಸಬೇಕಾದ ಜಾಗೃತಿ ನಮ್ಮಲ್ಲಿರಲಿ ಎಂದರು.

ಮಂಗಳೂರು ವಿವಿ ಕುಲಪತಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವವು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ಕನ್ನಡದ ಪ್ರೀತಿಯೊಂದಿಗೆ ನಿರಂತರವಾಗಿ ನಡೆಯಲಿ ಎಂದು ಅಭಿಪ್ರಾಯಪಟ್ಟರು.

ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವರಾದ ಪ್ರೊ.ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪಂಚಲಿಂಗ ಸ್ವಾಮಿ, ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ನಾಗಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಪ್ರೊ.ಸೋಮಣ್ಣ ಹೊಂಗಳ್ಳಿ ಸ್ವಾಗತಿಸಿದರು. ಪ್ರಾಧ್ಯಾಪಕರಾದ‌ ಡಾ.ಧನಂಜಯ ಕುಂಬ್ಳೆ ವಂದಿಸಿದರು. ಡಾ.ಯಶುಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಕನ್ನಡ ಧ್ವಜ ಯಾಕೆ ಬೇಡ. ರಾಜಕೀಯ ಪಕ್ಷಗಳಿಗೆ ಅವರವರ ಬಾವುಟವಿದೆ.ಅದು ರಾಷ್ಟ್ರೀಯ ಐಕ್ಯತೆಗೆ ತೊಂದರೆ ಕೊಡುವುದಿಲ್ಲವಾದರೆ ಕನ್ನಡ ಧ್ವಜದ ಮಾನ್ಯತೆಗೆ ಮಾತ್ರ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುತ್ತದೆ ಎಂದರೆ ಹೇಗೆ? ಆದ್ದರಿಂದ ಕೇಂದ್ರ ಸರಕಾರ ಕನ್ನಡ ಧ್ವಜಕ್ಕೆ ಮಾನ್ಯತೆ ನೀಡಬೇಕು ಪ್ರೊ.ಅಜಿತ್ ಪ್ರಸಾದ್

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...