ತಾಲೂಕಿನಲ್ಲಿ ಡಿಜಿಪೇ ಕಾಯ೯ಕ್ರಮಕ್ಕೆ ಚಾಲನೆ

Date:

ಮೂಡುಬಿದಿರೆ : ಶ್ರೀ. ಕ್ಷೇ.ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಡುಬಿದಿರೆ ತಾಲೂಕಿನ ಅಲಂಗಾರ್ ವಲಯ ವ್ಯಾಪ್ತಿಯ ಮೂಡುಕೊಣಾಜೆ ಸಿಎಸ್ ಸಿ ಕೇಂದ್ರದಲ್ಲಿ ಡಿಜಿಪೇ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡುವ ಮೂಲಕ ವಲಯದಲ್ಲಿ ಅನುಷ್ಠಾನ ಮಾಡಲಾಯಿತು.

ತಾಲೂಕಿನ ಯೋಜನಾಧಿಕಾರಿ ಧನಂಜಯ ಅವರು ಮಾತನಾಡಿ ಗ್ರಾಮಮಟ್ಟದ್ದಲ್ಲಿ ಎಲ್ಲಾ ಸದಸ್ಯರಿಗೆ ಬ್ಯಾಂಕಿನ ಸೇವೆಯ ಸೌಲಭ್ಯ ಸಿಗುವಂತೆ ನಮ್ಮ ಗ್ರಾಮಭಿವೃದ್ಧಿ ಸಿಎಸ್ ಸಿ ಕೇಂದ್ರದಲ್ಲಿ ಡಿಜಿ-ಪೇ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು ಇದನ್ನು ಎಲ್ಲ ಸದಸ್ಯರು ಪ್ರಯೋಜನ ಪಡೆದು ಕೊಳ್ಳುವಂತೆ ತಿಳಿಸಿದರು ಹಾಗೂ ಸಿಎಸ್ ಸಿ ಕಾರ್ಯಕ್ರಮಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಮೂಡುಕೊಣಾಜೆ ಒಕ್ಕೂಟದ ಅಧ್ಯಕ್ಷೆ ಲತಾ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಯೋಜನೆಯಿಂದ ಎಲ್ಲಾ ಸದಸ್ಯರಿಗೆ ಸರಕಾರದ ಸೌಲಭ್ಯಗಳು ಗ್ರಾಮ ಮಟ್ಟದಲ್ಲಿ ಸಿಗುತ್ತಿದ್ದೂ ಇನ್ನು ಬ್ಯಾಂಕಿನ ಸೇವೆಗಳು ಸಹ ನಮಗೆ ಸಿಗುತ್ತಿದ್ದೂ ನಮಗೆ ಖುಷಿ ತಂದಿರುವ ವಿಷಯ, ಮುಂದೆಯೂ ಸಹ ಎಲ್ಲಾ ಸೇವೆ ಗಳನ್ನು ಗ್ರಾಮೀಣ ವ್ಯಾಪ್ತಿಯ ಜನರಿಗೆ ಸೇವೆಯ ಪ್ರಯೋಜನಗಳನ್ನು ತಮ್ಮದೇ ಗ್ರಾಮದಲ್ಲಿ ಪಡೆದುಕೊಳ್ಳುವಂತೆ ಆಗಲಿ ಎಂದು ಹಾರೈಸಿದರು.

ವಲಯ ಮೇಲ್ವಿಚಾರಕರಾದ ಚಂದ್ರಹಾಸ ಶೆಟ್ಟಿ, ಸೇವಾಪ್ರತಿನಿಧಿ ಜಯಲಕ್ಷ್ಮಿ,ಸಿಎಸ್ ಸಿ ನೋಡಲ್ ಅಧಿಕಾರಿ ರತಿ, ಮೂಡುಕೊಣಾಜೆ ಒಕ್ಕೂಟದ ಮಾಜಿ ಅಧ್ಯಕ್ಷರು, ಕಾರ್ಯದರ್ಶಿ ಪದಾಧಿಕಾರಿಗಳು, ಸಿಎಸ್ ಸಿ ಸೇವಾದಾರರು, ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...