ಗೋವುಗಳ ಅಕ್ರಮ ಸಾಗಾಟ : ಮೂವರು ಆರೋಪಿಗಳು ಪೊಲೀಸರ ವಶಕ್ಕೆ

Date:

ಮೂಡುಬಿದಿರೆ: ಹೊಸ್ಮಾರು-ನೆಲ್ಲಿಕಾರು ಕಡೆಯಿಂದ ಟಾಟಾ ಎಸಿ ಕಂಟೈನರ್ ವಾಹನದಲ್ಲಿ ಮೂರು ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಮೂಡಬಿದಿರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗೋವುಗಳ ಅಕ್ರಮ ಸಾಗಾಟದ ಬಗ್ಗೆ ನ.15ರಂದು ಸಂಜೆ 5 ಗಂಟೆಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಮನ್ಸೂರ್ ಅದ್ಯಪಾಡಿ ಮೊಹಮ್ಮದ್ ಅಶ್ಫಕ್ ಮತ್ತು ಅಬ್ದುಲ್ ಮೊಹಮ್ಮದ್ ನಿಶಾಮ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 178/2025 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿ.ಎನ್.ಎಸ್.) ಕಲಂ 111, ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ 11(1)(ಡಿ) ಮತ್ತು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮದ ಕಲಂ 4, 5, 7, 12 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳ ವಿರುದ್ಧ ಸಂಘಟಿತ ಅಪರಾಧ ಪ್ರಕರಣದಂತೆ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧಿತ ಆರೋಪಿಗಳ ಪೈಕಿ ಮನ್ಸೂರ್ ಅದ್ಯಪಾಡಿ ಮೇಲೆ ಇದುವರೆಗೆ ವಿವಿಧ ಠಾಣೆಗಳಲ್ಲಿ ಒಟ್ಟು 29 ಪ್ರಕರಣಗಳು ದಾಖಲಾಗಿದ್ದು, ಇದು ಆತನ 30ನೇ ಪ್ರಕರಣವಾಗಿದೆ. ಆರೋಪಿ ಮೊಹಮ್ಮದ್ ಅಶ್ಫಕ್ ಮೇಲೆ ಉಳ್ಳಾಲದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯ ಪ್ರಕರಣ ದಾಖಲಾಗಿದ್ದು, ಇದು ಆತನ 2ನೇ ಪ್ರಕರಣವಾಗಿದೆ. ಆರೋಪಿ ಅಬ್ದುಲ್ ಮೊಹಮ್ಮದ್ ನಿಶಾಮ್ ನ ವಿರುದ್ಧ ಇದು ಮೊದಲನೇ ಪ್ರಕರಣವಾಗಿರುತ್ತದೆ. ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ವಿಟ್ಲ: ಕರೈಯಲ್ಲಿ ಗೋವು ಸಾಗಾಟ ತಡೆದು, ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ವಿಟ್ಲ (ಫೆ. 27): ಗುರುವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ...

ಸೌದಿ ಅರೇಬಿಯಾ: ರಿಯಾದ್-ತಾಯಿಫ್ ಹೆದ್ದಾರಿಯಲ್ಲಿ ಉಮ್ರಾ ಬಸ್ ಅಪಘಾತ; ಮೂವರು ಭಾರತೀಯರ ಮೃತ್ಯು; ಹಲವರಿಗೆ ಗಾಯ

ಜೆದ್ದಾ: ರಿಯಾದ್-ತಾಯಿಫ್ ಹೆದ್ದಾರಿಯಲ್ಲಿ ಭಾರತೀಯರು ಪ್ರಯಾಣಿಸುತ್ತಿದ್ದ ಉಮ್ರಾ ಬಸ್ ಪಲ್ಟಿಯಾಗಿ ಅಪಘಾತ...

ಓಂ ಶ್ರೀ ಗಣೇಶ ಯುವಕ ಮಂಡಲ, ಮಹಿಳಾ ಮಂಡಲ ಹಾಗೂ ಭಜನಾ ಮಂಡಳಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಫೆ.27ರಂದು

ಉಳ್ಳಾಲ: ಕಳೆದ 35 ವರ್ಷಗಳಿಂದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ...

ಆಧುನಿಕ ಶಿಕ್ಷಣದೊಂದಿಗೆ ದೇಶಕ್ಕೆ ಕೊಡುಗೆಯಾಗಬಲ್ಲ ಆವಿಷ್ಕಗಳನ್ನು ಮಾಡಿ: ಕಾಳಹಸ್ತೇಂದ್ರ ಸ್ವಾಮೀಜಿ

ಮೂಡುಬಿದಿರೆ: ವಿಶ್ವಕಮ೯ರು ಸಮಾಜದವರು ಸಾಂಪ್ರದಾಯಿಕವಾಗಿ ತಾಂತ್ರಿಕ ಕೌಶಲವನ್ನು ಸಹಜವಾಗಿ ಮೈಗೂಡಿಸಿಕೊಂಡಿದ್ದು ಮುಂದೆ...