ಮಂಗಳೂರು ವಿವಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆ, ಸಾಧನೆಯ ತುಡಿತವಿದ್ದರೆ ಬದುಕು ಯಶಸ್ಸು: ಜೆ.ಪಿ. ತೂಮಿನಾಡು

Date:


ಕೊಣಾಜೆ: ಯಶಸ್ಸು‌ ನಮ್ಮ‌ನ್ನು ಹುಡುಕಿಕೊಂಡು ಬರಲ್ಲ. ನಾವು ಸಾಧನೆಯ ಗುರಿ, ಉದ್ದೇಶ,‌ ಕಠಿಣ ಪರಿಶ್ರಮದೊಂದಿಗೆ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ. ಧನಾತ್ಮಕ ಚಿಂತನೆಯೊಂದಿಗೆ ಸಾಧಿಸಬೇಕೆನ್ನುವ ತುಡಿತವಿದ್ದರೆ ಬದುಕು ಬೆಳಗುವುದರಲ್ಲಿ ಸಂಶಯವಿಲ್ಲ ಎಂದು ಚಲನಚಿತ್ರ ನಟ, ನಿರ್ದೇಶಕ ಜೆ.ಪಿ.ತೂಮಿನಾಡು ಅವರು ಹೇಳಿದರು.


ಅವರು ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಣೇಮಪಾಲನಾ ನಿರ್ದೇಶನಾಲಯ ಇದರ ವತಿಯಿಂದ 2025-26 ನೇ ಸಾಲಿನ ವಿವಿಯ ಸ್ನಾತಕೋತ್ತರ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ‌ ಮೂರು ದಿನಗಳ ಪ್ರತಿಭಾ ಪ್ರತಿಭಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಓರ್ವ ಗೆಳೆಯ ನೀಡಿದ ಪುಸ್ತಕ ಜೀವನದ ಕನಸು ಬಿತ್ತಿತು. ಯಶಸ್ಸಿಗೆ ಏನು ಮಾಡಬೇಕೆನ್ನುವ ಅನೇಕ ಉದಾಹರಣೆಗಳಿದ್ದವು. ಸಾಧಕರ ಯಶಸ್ಸಿನ ವೀಡಿಯೋ ನೋಡಲಾರಂಭಸಿದೆ. ಬದುಕಿನ ಸ್ಪೂರ್ತಿಯೊಂದಿಗೆ ಬರವಣಿಗೆಯ ಆಸಕ್ತಿ ಮೂಡಿಸಿತು. ಈ ಎಲ್ಲಾ ಅಂಶಗಳು ಹೋಟೆಲ್ ಕ್ಲೀನರ್ ,‌ಪೈಂಟರ್ ಆಗಿದ್ದ ನನ್ನನ್ನು ನಟನಾಗಿ,‌ ನಿರ್ದೇಶಕನಾಗಿ ಬೆಳೆಸುವಂತೆ ಮಾಡಿತು. ಇನ್ನಷ್ಟು ಸಾಧನೆ ಮಾಡಬೇಕೆನ್ನುವ ಕನಸಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಸಚಿವರಾದ ಕೆ.ರಾಜು ಮೊಗವೀರ ವಹಿಸಿ ಮಾತನಾಡಿ,‌ ಅವರು ಮಾತನಾಡಿ, ಜೀವನದಲ್ಲಿ ಸವಾಲುಗಳನ್ನು ಮೀರಿ‌‌ ನಮ್ಮ ನಂಬಿಕೆಯೊಂದಿಗೆ ಮುನ್ಮಡೆದರೆ ಯಶಸ್ಸು ನಮ್ಮದಾಗುತ್ತದೆ. ಬದುಕನ್ನು ಕಟ್ಟುವ ಶಕ್ತಿ‌ ನಮಗಿರಬೇಕಾದರೆ ಸಮಾಜವನ್ನು, ದೇಶವನ್ನು ಕಟ್ಟುವ ಸಾಮರ್ಥ್ಯವೂ ನಮಗಿದೆ‌. ಆದ್ದರಿಂದ ಶಿಕ್ಷಣದೊಂದಿಗೆ ಎರಡು ವರ್ಷದಲ್ಲಿ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಹಣಕಾಸು ಅಧಿಕಾರಿ ಪಂಚಲಿಂಗ ಸ್ವಾಮಿ, ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ಸ್ನಾತಕೋತ್ತರ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಯಶ್ವಿನ್ ಕೆ.ಪಿ,‌ ಪದಾಧಿಕಾರಿಗಳಾದ ಕಾರ್ಯದರ್ಶಿ ನಿಹಾಲ್ ಎನ್,‌‌ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಶ ಕೆ, ಉಪಾಧ್ಯಕ್ಷರಾದ ಅಪೇಕ್ಷ ಎಚ್ ಆಳ್ವ,‌ ಸಹಕಾ‌ರ್ಯದರ್ಶಿ ಮಿಲನ್ ಮುತ್ತಣ್ಣ, ಸಹ ಸಾಂಸ್ಕೃತಿ ಕಾರ್ಯದರ್ಶಿ ಕೇಸರಿ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೆಶಕರಾದ ಪ್ರೊ.ಪ್ರಶಾಂತ್ ನಾಯ್ಕ್ ಅವರು ವಿದ್ಯಾರ್ಥಿ ನಾಯಕರಿಗೆ ಪ್ರಮಾಣವಚನ ಬೋಧಿಸಿದರು.
ಸ್ನಾತಕೋತ್ತರ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಯಶ್ವಿನ್ ಕೆ.ಪಿ ಅವರು ವಂದಿಸಿದರು.‌ ವೈಷ್ಣವಿ ಯೋಗೀಶ್ ನಿರೂಪಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ವಿಟ್ಲ: ಕರೈಯಲ್ಲಿ ಗೋವು ಸಾಗಾಟ ತಡೆದು, ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ವಿಟ್ಲ (ಫೆ. 27): ಗುರುವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ...

ಸೌದಿ ಅರೇಬಿಯಾ: ರಿಯಾದ್-ತಾಯಿಫ್ ಹೆದ್ದಾರಿಯಲ್ಲಿ ಉಮ್ರಾ ಬಸ್ ಅಪಘಾತ; ಮೂವರು ಭಾರತೀಯರ ಮೃತ್ಯು; ಹಲವರಿಗೆ ಗಾಯ

ಜೆದ್ದಾ: ರಿಯಾದ್-ತಾಯಿಫ್ ಹೆದ್ದಾರಿಯಲ್ಲಿ ಭಾರತೀಯರು ಪ್ರಯಾಣಿಸುತ್ತಿದ್ದ ಉಮ್ರಾ ಬಸ್ ಪಲ್ಟಿಯಾಗಿ ಅಪಘಾತ...

ಓಂ ಶ್ರೀ ಗಣೇಶ ಯುವಕ ಮಂಡಲ, ಮಹಿಳಾ ಮಂಡಲ ಹಾಗೂ ಭಜನಾ ಮಂಡಳಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಫೆ.27ರಂದು

ಉಳ್ಳಾಲ: ಕಳೆದ 35 ವರ್ಷಗಳಿಂದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ...

ಆಧುನಿಕ ಶಿಕ್ಷಣದೊಂದಿಗೆ ದೇಶಕ್ಕೆ ಕೊಡುಗೆಯಾಗಬಲ್ಲ ಆವಿಷ್ಕಗಳನ್ನು ಮಾಡಿ: ಕಾಳಹಸ್ತೇಂದ್ರ ಸ್ವಾಮೀಜಿ

ಮೂಡುಬಿದಿರೆ: ವಿಶ್ವಕಮ೯ರು ಸಮಾಜದವರು ಸಾಂಪ್ರದಾಯಿಕವಾಗಿ ತಾಂತ್ರಿಕ ಕೌಶಲವನ್ನು ಸಹಜವಾಗಿ ಮೈಗೂಡಿಸಿಕೊಂಡಿದ್ದು ಮುಂದೆ...