ನೆಲ್ಲಿಕಾರಿನಲ್ಲಿ ಸೀರೆ ಗೊಂಡೆ ಹಾಕುವ ತರಬೇತಿ, ಮಾಸಿಕ ಸಂತೆ

Date:

ಮೂಡುಬಿದಿರೆ : ನೆಲ್ಲಿಕಾರು ಪಂಚಾಯತ್ ನಲ್ಲಿ ಸೀರೆಗೆ ಗೊಂಡೆ ಹಾಕುವ ತರಬೇತಿಯ ಉದ್ಘಾಟನೆ ಮತ್ತು ಮಾಸಿಕ ಸಂತೆ ಬುಧವಾರ ನಡೆಯಿತು.

ವಿಜಯ ಗ್ರಾಮೀಣ ಪ್ರತಿಷ್ಟಾನ ಮಂಗಳೂರು ಇದರ ಜ್ಯೋತಿರಾಜ್ ಅವರು ಉದ್ಘಾಟಿಸಿ ಮಾತನಾಡಿ ಮಹಿಳೆಯರು ಸ್ವ ಉದ್ಯೋಗ ಮಾಡಲು ಹೆಚ್ಚಿನ ಕೌಶಲ್ಯದ ಅಗತ್ಯವಿದ್ದು ವಿಆರ್ ಡಿಎಫ್ ಮಹಿಳೆಯರಿಗೆ ಬೇಕಾದ ತರಬೇತಿ ಹಾಗೂ ಬೆಂಬಲ ನೀಡಲು ಸದಾ ಸಿದ್ಧವಿದೆ ಎಂದು ತಿಳಿಸಿದರು.

ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಜೀವನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮಹಿಳೆಯರು ಸ್ವ ಉದ್ಯೋಗ ಮಾಡುವುದರ ಮೂಲಕ ಆರ್ಥಿಕವಾಗಿ ಸಬಲರಾಗ ಬಹುದು ಎಂದು ತಿಳಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆ ಸ್ವಾವಲಂಬಿಯಾಗಲು ಇಂತಹ ಸಭೆಗಳಲ್ಲಿ ಭಾಗವಹಿಸಲು ಕರೆ ನೀಡಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಶೀಲ, ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜು, ಎನ್.ಆರ್. ಎಲ್.ಎಂ ತಾಲೂಕು ವ್ಯವಸ್ಥಾಪಕ ನಿಖಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ದಾಮೋದರ. ಭ್ರಾಮರಿ ಒಕ್ಕೂಟದ ಉಪಾಧ್ಯಕ್ಷ ಆಶಾ, ಒಕ್ಕೂಟದ ಎಲ್ಲಾ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕ್ರತೆಯರು, ಸ್ತ್ರೀ ಶಕ್ತಿ ಮತ್ತು ಸಂಜೀವಿನಿ ಸದಸ್ಯರು ಕುಶಲ, ಸುಮಲತಾ ಭಾಗವಹಿಸಿದ್ದರು.

ಮಾಸಿಕ ಸಂತೆಗೆ 25 ಸಂಜೀವಿನಿ ಸಂಘದವರು ತಾವು ಮನೆಯಲ್ಲಿ ಮಾಡಿದ ಉತ್ಪನ್ನಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಗೀತಾ ಜೈನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...