ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಕೆಂಪು ಕಲ್ಲಿನ ಕ್ವಾರಿಗಳ ಮಾಲಿಕರು ಕೆಂಪುಕಲ್ಲಿಗೆ ನಿಗದಿತ ದರಕ್ಕಿಂತ ಅಧಿಕವಾಗಿ ಮಾರಾಟ ಮಾಡುತ್ತಿದ್ದು ಇದರಿಂದ ಜನಸಾಮಾನ್ಯರ ವಸತಿ ನಿರ್ಮಾಣದ ಕನಸು ಭಗ್ನವಾಗುವುದರೊಂದಿಗೆ ಕೂಲಿ ಕಾರ್ಮಿಕರ ಹಾಗೂ ಗುತ್ತಿಗೆದಾರರ ಬದುಕು ಬೀದಿಪಾಲಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.

ಕೆಲವು ತಿಂಗಳ ಹಿಂದೆ ಕೆಂಪು ಕಲ್ಲು ಮರಳು ಜೆಲ್ಲಿ ಸಾಗಟಕ್ಕೆ ತಟಸ್ಥ ಇದ್ದು ಇದರಿಂದ ಕೆಲಸವಿಲ್ಲದೆ ಅದೆಷ್ಟೋ ಕೂಲಿ ಕಾರ್ಮಿಕರು, ಗುತ್ತಿಗೆದಾರರು, ಕಟ್ಟಡಕಾರ್ಮಿಕರು ತನ್ನ ಬದುಕು ಸಾಗಿಸಲು ಸಂಕಷ್ಟ ಅನುಭವಿಸಿದ್ದು ಇಡೀ ಕರಾವಳಿ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು ಅಲ್ಲದೆ ವಿವಿಧ ಸಂಘಟನೆಗಳ ಪ್ರತಿಭಟನೆ ಹಾಗೂ ಹೋರಾಟಗಳು ಜಾಸ್ತಿಯಾದಂತೆ ಸಾಗಾಟಗಳು ಪ್ರಾರಂಭಗೊಂಡು ಕೂಲಿ ಕಾರ್ಮಿಕರು ನಿಟ್ಟುಸಿರು ಬಿಡುವಷ್ಟರಲ್ಲಿ ಈಗ ಮತ್ತೆ ಕೆಂಪು ಕಲ್ಲಿನ ಕ್ವಾರಿಗಳ ದರ ಹೆಚ್ವಳದಿಂದ ಮತ್ತೆ ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ.
ಕರಾವಳಿ ಜಿಲ್ಲೆಯ ಜನಸಾಮಾನ್ಯರ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬಗೆಹರಿಸಿ ಕೊಡಬೇಕು ವಿಳಂಬವಾದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್.ಡಿ.ಟಿ.ಯು) ಮಂಗಳೂರು ನಗರ ಜಿಲ್ಲಾ ಸಮಿತಿಯು ಎಲ್ಲಾ ಕೂಲಿ ಕಾರ್ಮಿಕರನ್ನು, ಗುತ್ತಿಗೆದಾರರನ್ನು, ಕಟ್ಟಡ ಕಾರ್ಮಿಕರನ್ನು ಒಟ್ಟುಸೇರಿಸಿ ಬೃಹತ್ ಪ್ರತಿಭಟನೆ ಮಾಡುವುದಾಗಿ ಜಿಲ್ಲಾ ಸಮಿತಿ ತಿರ್ಮಾನಿಸಿದೆ ಎಂದು ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಬೆಂಗ್ರೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


