ಎಡಪದವು ಯುವಕನ ಮೇಲೆ ದುಷ್ಕರ್ಮಿಗಳಿಂದ ದಾಳಿ: ನಾಲ್ವರ ಬಂಧನ

Date:


ಮೂಡುಬಿದಿರೆ : ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಯುವಕನ ಮೇಲೆ ಮತ್ತೊಂದು ದ್ವಿಚಕ್ರದಲ್ಲಿ ಹೋಗುತ್ತಿದ್ದ ನಾಲ್ವರ ತಂಡವು ಮಾರಕಾಯುಧದಿಂದ ದಾಳಿ ನಡೆಸಿದ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಹನುಮಾನ್ ಮಂದಿರದ ಬಳಿ ಇಂದು ಸಂಜೆ ವೇಳೆಗೆ ನಡೆದಿದೆ.

ಮೂಡುಬಿದಿರೆ ತಾಲೂಕಿನ ಇರುವೈಲು ಪೂಪಾಡಿಕಲ್ಲು ನಿವಾಸಿ ವಿಶ್ವನಾಥ ಪೂಜಾರಿ ಅವರ ಪುತ್ರ ಅಖಿಲೇಶ್ (೨೮)
ದುಷ್ಕಮಿ೯ಗಳ ದಾಳಿಗೆ ಒಳಗಾದವ. ಕೈ ಮೊಣಗಂಟಿಗೆ ಗಾಯಗಳಾಗಿದ್ದು ಇದೀಗ ಮೂಡುಬಿದಿರೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಕೂಟಿಯಲ್ಲಿ ತನ್ನ ತಂಗಿಯನ್ನು ಕಾಲೇಜಿನಂದ ಕರೆದು ಬರಲೆಂದು ಹೋದ ಸಂದಭ೯ದಲ್ಲಿ ಘಟನೆ ನಡೆದಿದೆ. ಒಂದೇ ಸ್ಕೂಟಿಯಲ್ಲಿ ನಾಲ್ವರು ಯುವಕರು ಮಾರಾಕಾಯುಧವನ್ನು ಹಿಡಿದು ಝಳಪಿಸುತ್ತಾ ರಸ್ತೆಯಲ್ಲಿ ಹೋಗುತ್ತಿದ್ದಾರೆನ್ನಲಾಗಿದೆ ಈ ಸಂದಭ೯ ಅಖಿಲೇಶ್ ನ ಕೈಗೆ ಕತ್ತಿಯಿಂದ ಬೀಸಿದರೆನ್ನಲಾಗಿದೆ. ನಾಲ್ವರು ದುಷ್ಕಮಿ೯ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ಆರಂಭಿಸಿದರೆನ್ನಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆನ್ನಲಾಗಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...