
ಕುವೈತ್: ಡಿಕೆಎಸ್ಸಿ ಕುವೈತ್ ರಾಷ್ಟ್ರೀಯ ಸಮಿತಿ ಅಧೀನದಲ್ಲಿ ಹವಲ್ಲಿ ಭಾಗದ ಕಾರ್ಯಕರ್ತರನ್ನು ಒಳಗೊಂಡ ನೂತನ ಹವಲ್ಲಿ ಯೂನಿಟ್ ಗೆ ಇತ್ತೀಚೆಗೆ ಚಾಲನೆ ನೀಡಲಾಯಿತು.
ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರಾದ ಅನ್ವರ್ ಕುಂಜಾಲ್ ನೇತೃತ್ವ ನೀಡಿದರು, ರಾಷ್ಟ್ರೀಯ ಸಮಿತಿ ನೇತಾರರಾದ ಯೂಸುಫ್ ಮುನಿಯಂ ಸಂಸ್ಥೆಯ ಬಗ್ಗೆ ಮತ್ತು ಯೂನಿಟ್ ಗಳ ಪ್ರಾಧಾನ್ಯತೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ನೂತನ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಜಿಲಾನಿ , ಕಾರ್ಯದರ್ಶಿಯಾಗಿ ನಿಜಾಮುದ್ದೀನ್ ಹಾಗೂ ಹಣಕಾಸು ಕಾರ್ಯದರ್ಶಿ ಯಾಗಿ ಕಲಂದರ್ ಉಮರಬ್ಬ ಪಡುಬಿದ್ರೆ ಅವರನ್ನು ಆಯ್ಕೆ ಮಾಡಲಾಯಿತು.
ಕುವೈತ್ ರಾಷ್ಟ್ರೀಯ ಸಮಿತಿ ನೇತಾರರಾದ ಅಬ್ದುಲ್ ರಹಿಮಾನ್ ಖಾನ ನೂತನ ಸಮಿತಿಗೆ ಶುಭ ಹಾರೈಸಿದರು. ಇಸ್ಮಾಯಿಲ್ ಉಚ್ಚಿಲ ವಂದಿಸಿದರು.


