ಬಹರೈನ್: ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್(ರಿ) ಆಯೋಜಿಸಿದ ಕರ್ನಾಟಕ ರಾಜೋತ್ಸವ ಸಂಭ್ರಮ 2025 ಕಾರ್ಯಕ್ರಮ ಬಹರೈನ್ ನ ದಿ ಇಂಡಿಯಾನ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.

ಭಾರತೀಯ ರಾಯಭಾರಿ ಎಚ್.ಇ. ವಿನೋದ್ ಕೆ. ಜೇಕಬ್ ಕರ್ನಾಟಕ ರಾಜೋತ್ಸವ ಸಂಭ್ರಮ- 2025 ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ತುಳು ಕನ್ನಡಿಗರು ಸತತ ಪ್ರಯತ್ನದಿಂದ ಎಲ್ಲಾ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತಾರೆ. ನಮ್ಮ ರಾಯಭಾರಿ ಕಚೇರಿಗೆ ತುಳು ಕನ್ನಡಗರ ಕೊಡುಗೆ ಅಪಾರ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಇದರ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅರಬ್ ರಾಷ್ಟ್ರಗಳಲ್ಲಿ ಕನ್ನಡ ಸೇವೆಯನ್ನು ನೋಡಿದಾಗ ತುಂಬಾ ಸಂತೋಷವಾಗುತ್ತಾದೆ. ಮುಂದಿನ ಸಹಕಾರಿ ಸಪ್ತಾಹದಲ್ಲಿ ಅನಿವಾಸಿ ಭಾರತೀಯನ್ನು ಗುರುತಿಸಿ ಅವರು ಸನ್ಮಾನಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಾಜಿಕ ಕಾರ್ಯಕರ್ತ ಡಾ. ಅಬ್ದುಲ್ ಶಕೀಲ್, ಸೋನಾ ಗ್ರೂಪ್‌ನ ಸ್ಥಾಪಕ ಯಜ್ಞ ನಾರಾಯಣ ಕಮ್ಮಜೆ, ಅಥ್ಲೆಟಿಕ್ಸ್ ಅಸೋಸಿಯೇಷನ್ ಉಡುಪಿ ಜಿಲ್ಲಾಧ್ಯಕ್ಷ ಹರಿಪ್ರಸಾದ್ ರೈ, ಅಬಕಾರಿ ಅಧಿಕಾರಿ ರಾಜಶೇಖರ್ ರಾಯಪ್ಪ ಕಾರಾಡ್ಕರ್, ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಸಹಕಾರಿ ಸಂಘ ಇದರ ಅಧ್ಯಕ್ಷ ಜೆ.ಮೊಹಮ್ಮದ್ ಇಸ್ಹಾಕ್ ವರರಿಗೆ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್(ರಿ) ಕೊಡಮಾಡುವ ಬಹರೈನ್ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್(ರಿ) ಅಧ್ಯಕ್ಷ ರಾಜ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಬಹರೈನ್ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಉಪಾಧ್ಯಕ್ಷ ಮೊಹಮ್ಮದ್ ಅಬ್ದುಲ್ ಜಬ್ಬಾರ್ ಅಲ್- ಕೂಹೆಜಿ ಕಾರ್ಯಕ್ರಮ ಕ್ಕೆ ಶುಭಹಾರೈಸಿದರು.

ಪ್ರವಾಸಿ ಭಾರತೀಯ ಪ್ರಶಸ್ತಿ ಪುರಸ್ಕೃತ ಜಿ. ಬಾಬು ರಾಜನ್, ದಿ ಇಂಡಿಯಾನ್ ಕ್ಲಬ್ ಅಧ್ಯಕ್ಷ ಜೋಸೆಫ್ ಜ್ವಾಯಿ, ಬಹರೈನ್ ಕ್ರಿಕೆಟ್ ಫೆಡರೇಶನ್ ಸಲಹಾ ಸಮಿತಿ ಅಧ್ಯಕ್ಷ ಮೊಹಮ್ಮದ್ ಮನ್ಸೂರ್ ಕನ್ನಂಗಾರ್ ಅತಿಥಿಯಾಗಿ ಭಾಗವಹಿಸಿದ್ದರು.

ಸ್ವಸ್ತಿಕ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಸಲಹೆಗಾರ ಅಸ್ಟೀನ್ ಸಂತೋಷ್ ವಂದಿಸಿದರು.
ಪುಷ್ಕರಾ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ, ಹಾಸ್ಯ ಕಲಾವಿದರಾದ ರಾಘವೇಂದ್ರ, ಹುಲಿ ಕಾರ್ತಿಕ್ ಮತ್ತು ಚಿಲ್ಲರ್ ಮಂಜು ಅವರಿಂದ ಹಾಸ್ಯ ಪ್ರದರ್ಶನ, ಮ್ಯಾಜಿಷಿಯನ್ ಮುರಳೀಧರ ಕೌಶಿಕ್ ಜಾದೂ ಪ್ರದರ್ಶನ . ಜನಪದ ಗೀತೆಗಳನ್ನು ಗೋನ ಸ್ವಾಮಿ ಮತ್ತು ಶೈಲಜಾ ಶ್ರೀನಿವಾಸ್ ಪ್ರಸ್ತುತಪಡಿಸಿದರು. ಸ್ಥಳೀಯ ನೃತ್ಯ ಕಲಾವಿದರು ನೃತ್ಯ ಪ್ರದರ್ಶನ ನಡೆಯಿತು.



