ಹತ್ತು ಮಂದಿ ಸಾಧಕರಿಗೆ ʼಬ್ಯಾರಿ ಅಕಾಡೆಮಿ ಚಮ್ಮನʼ

Date:

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2022 ಮತ್ತು 2023 ನೇ ಸಾಲಿನ ʼಬ್ಯಾರಿ ಅಕಾಡೆಮಿ ಚಮ್ಮನʼ (ಗೌರವ ಪುರಸ್ಕಾರ) ಕ್ಕೆ ಹತ್ತು ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಅಬ್ದುಲ್‌ ಸಮದ್‌ ಬಾವಾ (ಬ್ಯಾರಿ ಸಾಹಿತ್ಯ), ಅನ್ಸಾರ್‌ ಇನೋಳಿ (ಬ್ಯಾರಿ ಭಾಷೆ), ರಶೀದ್‌ ನಂದಾವರ (ಬ್ಯಾರಿ ಕಲೆ, ಸಂಸ್ಕೃತಿ), ನಝ್ಮತ್ತುನ್ನೀಸಾ ಲೈಝ್‌ ( ಬ್ಯಾರಿ ಸಾಹಿತ್ಯ), ಮಹಮ್ಮದ್‌ ಅಲಿ ಬಡ್ಡೂರು (ಬ್ಯಾರಿ ಸಂಸ್ಕೃತಿ, ಕಲೆ), ಟಿ.ಎಂ ಶಹೀದ್‌ ( ಬ್ಯಾರಿ ಭಾಷೆ, ಸಂಘಟನೆ ), ಯಂ.ಪಿ ಬಶೀರ್‌ ಅಹ್ಮದ್‌ ( ಬ್ಯಾರಿ ಸಾಹಿತ್ಯ), ಯಾಸೀರ್‌ ಕಲ್ಲಡ್ಕ ( ಬ್ಯಾರಿ ಸಂಸ್ಕೃತಿ ), ಮಲ್ಲಿಕಾ ಶೆಟ್ಟಿ ( ಬ್ಯಾರಿ ಕಲೆ, ಸಂಸ್ಕೃತಿ), ಸೈಫ್‌ ಕುತ್ತಾರ್‌ ( ಬ್ಯಾರಿ ಭಾಷೆ) ʼಬ್ಯಾರಿ ಅಕಾಡೆಮಿ ಚಮ್ಮನʼ ಕ್ಕೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸ್ಥಾಯಿ ಸಮಿತಿ ಸಭೆ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿದೆ. ಬ್ಯಾರಿ ಅಕಾಡೆಮಿ ಚಮ್ಮನವು ಹತ್ತು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ. ಬ್ಯಾರಿ ಅಕಾಡೆಮಿ ಚಮ್ಮನ ಸಮಾರಂಭವು 2025 ಡಿಸೆಂಬರ್‌ 07 ಪುತ್ತೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಉಮರ್ ಯು. ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...