ನಿಧನ: ಬೆಳುವಾಯಿ ಹೈಸ್ಕೂಲ್ ಸ್ಥಾಪಕ ಜೆ. ಎಂ. ಪಡುಬಿದ್ರಿ

Date:

ಮೂಡುಬಿದಿರೆ: ವಿದ್ಯಾವರ್ಧಕ ಸಂಘ, ಬೆಳುವಾಯಿ ಇದರ ಆಡಳಿತದಲ್ಲಿ ನಡೆಸಲ್ಪಡುವ ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆ, ಕೆಸರಗದ್ದೆ, ಬೆಳುವಾಯಿ ಇದರ ಸ್ಥಾಪಕ ಜೆ. ಎಂ. ಪಡುಬಿದ್ರಿ ಇವರು ಡಿ.6ರಂದು ಮೂಡುಬಿದಿರೆ ಜೈನ್ ಪೇಟೆಯ ನಿವಾಸದಲ್ಲಿ ನಿಧನ ಹೊಂದಿದರು. ಪತ್ನಿ ಪುತ್ರಿ 2 ಪುತ್ರರನ್ನು ಅಗಲಿದ್ದಾರೆ.

ಬಾಲ್ಯದಲ್ಲಿ ಮುಂಬಯಿಗೆ ಹೋಗಿ, ಕ್ಯಾoಟೀನ್ ಉದ್ಯೋಗದೊಂದಿಗೆ ರಾತ್ರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿ, ಮುಂಬೈ ಯಲ್ಲಿ ಯಂಗ್ ಮೆನ್ ಸೊಸೈಟಿ ಇವನಿಂಗ್ ಸ್ಕೂಲ್ ಸ್ಥಾಪಿಸಿ ಪ್ರಾoಶುಪಾಲರೂ ಆಗಿದ್ದರು. ನಂತರ ಮುಂಬೈ ಯಲ್ಲಿ ಜೆ ಎಮ್ಸ್ ಕೆಟರಿಂಗ್ ಎಂಬ ಸ್ವಂತ ಉದ್ದಿಮೆಯನ್ನು ನೆಡೆಸಿದ್ದರು. ಹರಿಹರದ ಆದಿತ್ಯ ಬಿರ್ಲಾ ಗ್ರೂಪ್ ಗ್ರಾಸಿಂ ಇಂಡಸ್ಟ್ರಿಯಲ್ಲಿ ಉದ್ಯೋಗಿಯಾಗಿದ್ದು, ಚಲನಚಿತ್ರವಾಗಿ ಪ್ರಸಿದ್ದಿಯಾದ ಗುಡ್ಡೆದ ಭೂತ ನಾಟಕದಲ್ಲಿಯೂ ನಟಿಸಿದ್ದರು. ಅಲ್ಲದೆ ಕಂಗಿಲು ಜಾನಪದ ನೃತ್ಯದ ಕಲಾವಿದರೂ ಆಗಿದ್ದು, ಹಲವಾರು ಕಾರ್ಯಕ್ರಮ ನೀಡಿದ್ದರು.

ಮೂಲತಃ ಸಿಪಾಯಿ ಮನೆ ಪಡುಬಿದ್ರಿ ಇಲ್ಲಿಯ ಮನೆತನದವರಾಗಿದ್ದು, ನಂತರ ಬೆಳುವಾಯಿಯಲ್ಲಿ ವಾಸವಾಗಿದ್ದು,1979 ರಲ್ಲಿ ಬೆಳುವಾಯಿ ತುಳುನಾಡ ಹೈಸ್ಕೂಲ್ ಸ್ಥಾಪಿಸಿದರು. ಮುಂದೆ 1982ರಲ್ಲಿ ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢ ಶಾಲೆಯಾಗಿ ನಾಮಕರಣಗೊಂಡಿತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...