ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಿಗೆ ಶಕ್ತಿ: ಮಾಜಿ ಸಚಿವ ಅಭಯಚಂದ್ರ ಜೈನ್

Date:

ಮೂಡುಬಿದಿರೆ: ಒಂದು ಕಾಲದಲ್ಲಿ ಹೆಣ್ಣು ಕೇವಲ ಅಡಿಗೆ ಕೋಣೆಗೆ ಸೀಮಿತವಾಗಿದ್ದಳು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಮೇಲೆ, ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ ನಂತರ ಹಾಗೂ ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂದ ನಂತರ ಹೆಣ್ಣು ಮಕ್ಕಳಿಗೆ ಶಕ್ತಿ ಬಂದಿದೆ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.

ಅವರು ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮೂಡುಬಿದಿರೆ ತಾಲೂಕು ಇದರ ವತಿಯಿಂದ ಜ್ಞಾನ ವಿಕಾಸ ಮಹಿಳಾ ಕಾಯ೯ಕ್ರಮದನ್ವಯ ಭಾನುವಾರ ಧವಲಾ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ವಿಚಾರಗೋಷ್ಠಿ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಿಂದೆ ಕಾಕ೯ಳ ತಾಲೂಕಿನಲ್ಲಿದ್ದ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರವನ್ನು ಮೂಡುಬಿದಿರೆಗೆ ವಿಸ್ತರಿಸುವಂತೆ ತಾನು ಶಾಸಕನಾಗಿದ್ದ ಸಂದಭ೯ದಲ್ಲಿ ಹೆಗ್ಗಡೆಯವರ ಬಳಿ ಮನವಿ ಮಾಡಿದ್ದೆ ಈ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಶಕ್ತಿ ತುಂಬಲಾಗಿದ್ದು ಆ ಕಾರಣದಿಂದಲೇ ಇಂದು ಹೆಣ್ಣು ಮಕ್ಕಳು ಆದಾಯ ಗಳಿಸಲು, ರಾಜಕೀಯಕ್ಕೆ ಪ್ರವೇಶಿಸಲು ಹಾಗೂ ವೇದಿಕೆಗೆ ಬಂದು ಮಾತನಾಡಲು ಸಹಕಾರಿಯಾಗಿದೆ ಎಂದರು.

ದಿಗಂಬರ ಜೈನ ವಿದ್ಯಾವಧ೯ಕ ಸಂಘದ ಸಂಚಾಲಕ ಕೆ. ಹೇಮರಾಜ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಡುಬಿದಿರೆ ಠಾಣೆಯ ಉಪ ನಿರೀಕ್ಷಕಿ ಪ್ರತಿಭಾ ಅವರು ಪೊಕ್ಸೋ ಕಾಯಿದೆ, ಸೈಬರ್ ಕ್ರೈಮ್, ಆನ್ ಲೈನ್ ವಂಚನೆ, ಡಿಜಿಟಲ್ ಸ್ಕ್ಯಾಮ್ ಬಗ್ಗೆ ಜಾಗರೂಕರಾಗುವಂತೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಂಶುಪಾಲೆ ಪ್ರೊ. ಮಿತ್ರ ಪ್ರಭಾ ಹೆಗ್ಡೆ ” ಸದೃಢ ಸಮಾಜ ನಿಮಾ೯ಣದಲ್ಲಿ ಮಹಿಳೆ ಪಾತ್ರ” ಎಂಬ ವಿಷಯದ ಕುರಿತು ಮಾತನಾಡಿದರು.

ಪುರಸಭೆಯ ಅಧ್ಯಕ್ಷೆ ಜಯಶ್ರೀ ಕೇಶವ್, ಯೋಜನೆಯ ದ. ಕ. ಜಿಲ್ಲಾ ನಿದೇ೯ಶಕ ದಿನೇಶ್ ಡಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಗ್ರಾಮಾಭಿವೃದ್ಧಿ ಯೋಜನೆಯ ಮೂಡುಬಿದಿರೆ ತಾಲೂಕು ಯೋಜನಾಧಿಕಾರಿ ಬಿ. ಧನಂಜಯ ಸ್ವಾಗತಿಸಿದರು. ಸಿಂಚನ ಜ್ಞಾನ ವಿಕಾಸ ಕೇಂದ್ರ ಕರಿಯನಂಗಡಿ ಇದರ ಸದಸ್ಯೆ ಪದ್ಮಾವತಿ, ಧನಲಕ್ಷ್ಮೀ ಜ್ಞಾನ ವಿಕಾಸ ಕೇಂದ್ರ ಮೂಡುಕೊಣಾಜೆಯ ಸದಸ್ಯೆ ಲತಾ ಹೆಗ್ಡೆ ಅನಿಸಿಕೆಯನ್ನು ಹಂಚಿಕೊಂಡರು. ಲೆಕ್ಕ ಪರಿಶೋಧಕ ನಾಗೇಶ್ ಹೆಗ್ಡೆ ಕಾಯ೯ಕ್ರಮ ನಿರೂಪಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿದ್ಯಾ ವಂದಿಸಿದರು.

ಜ್ಞಾನ ವಿಕಾಸ ಮಹಿಳಾ ತಂಡಗಳಿಂದ ಸಾಂಸ್ಕೃತಿಕ ಹಾಗೂ ಪುಷ್ಪಗುಚ್ಛ ಸ್ಪಧೆ೯ಗಳು ನಡೆದವು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...