ಕಣಚೂರು: 8 ನೇ ‘ಕೆಎಸ್ ಸಿಎಎಸ್ ಐ – ಮಿಡ್ ಕಾನ್ 2025’ ಸಮ್ಮೇಳನ ಉದ್ಘಾಟನೆ

Date:

ದೇರಳಕಟ್ಟೆ: ಯಶಸ್ಸು ಎಂದರೆ ಕೀರ್ತಿ ಅಥವಾ ಐಶ್ವರ್ಯವಲ್ಲ, ನೀವು ಮಾಡುವ ಕೆಲಸ ಹಾಗೂ ಅದರಿಂದ ಸಿಗುವ ತೃಪ್ತಿ ನಿಜವಾದ ಸಾಧನೆ ಅಥವಾ ಯಶಸ್ಸಾಗಿದೆ. ನಕಾರಾತ್ಮಕತ ಚಿಂತನೆಯಿಂದ ವೈದ್ಯರು ದೂರವಿದ್ದು, ತಮ್ಮ ಕೆಲಸ ಹಾಗೂ ಬದುಕಿನ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕಿದೆ. ಜ್ಞಾನ, ಕೌಶಲ್ಯ, ಮಾನವೀಯ ಮೌಲ್ಯಗಳೊಂದಿಗೆ ಸಮಾಜದಲ್ಲಿ ಉತ್ತಮ ವೈದ್ಯರಾಗಿ ಗುರುತಿಸಿಕೊಳ್ಳಬೇಕು ಎಂದು ಧಾರಾವಾಡದ ಎಸ್ ಡಿಎಮ್ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ್ ಕುಮಾರ್ ಹೇಳಿದರು.


ಅವರು ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸಸ್ ಹಾಗೂ ಎಎಸ್ಐ ಸೌತ್ ಕೆನರಾ ಸಿಟಿ ಬ್ರಾಂಚ್ ಇದರ ಆಶ್ರಯದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ‌ 8 ನೇ ಕೆಎಸ್ ಸಿಎಎಸ್ ಐ – ಮಿಡ್ ಕಾನ್ 2025′ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಸಾಧಾರಣ ಶಸ್ತ್ರಚಿಕಿತ್ಸಕನಾಗುವುದಕ್ಕಿಂತ, ಸಾಮಾನ್ಯ ಶಸ್ತ್ರಚಿಕಿತ್ಸಕನಾಗಿಯೇ ಅಸಾಧಾರಣ ಕೆಲಸಗಳನ್ನು ಮಾಡಬಹುದು. ವೈದ್ಯರಾದವರಿಗೆ ಕೇಂದ್ರೀಕೃತ ಮನಸ್ಸು, ಸ್ಪಷ್ಟತೆ, ಸಮರ್ಪಣಾ ಭಾವ ಅಗತ್ಯ. ಇತರರ ನೋವನ್ನು ಗುಣಪಡಿಸುವ ಶಕ್ತಿ ದೇವರು ವೈದ್ಯರಿಗೆ ಕೊಟ್ಟಿದ್ದಾನೆ ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು ಎಂದರು .
ಎಸ್ ಎಸ್ ಐ ಕರ್ನಾಟಕ ಇದರ ಅಧ್ಯಕ್ಷರಾದ‌ ಡಾ.ರಾಜ್ ಗೋಪಾಲ್ ಶೆಣೈ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಈ ರಾಜ್ಯ ಮಟ್ಟದ‌ ಸಮ್ಮೇಳನವು ತಜ್ಞರ‌ ಉಪಸ್ಥಿತಿಯೊಂದಿಗೆ ನಡೆಯುತ್ತಿದ್ದು ಸ್ನಾತಕೋತ್ತರ ಪದವೀಧರರಿಗೆ, ಯುವ ವೈದ್ಯರಿಗೆ ಅನೇಕ ಮೌಲ್ಯಯುತ ವಿಷಯಗಳ ಅರಿವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಣಚೂರು‌ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಯು.ಕೆ.ಮೋನು ಅವರು , ರಾಜ್ಯ ಮಟ್ಟದ ಸಮ್ಮೇಳನವು ರಾಜ್ಯದ ಗಣ್ಯರ, ಸಂಶೋಧಕರ ಪಾಲ್ಗೊಳ್ಳುವಿಕೆಯೊಂದಿಗೆ ನಮ್ಮ ಸಂಸ್ಥೆಯಲ್ಲಿ ನಡೆದಿರುವುದು ಸಂತಸದ‌ ವಿಷಯವಾಗಿದೆ. ಯುವ ವೈದ್ಯರು ಸಮ್ಮೇಳನದ ಪ್ರಯೋಜನವನ್ನು ಪಡೆದು ಮುನ್ನಡೆಯಿರಿ ಎಂದರು.
ಕಾರ್ಯಕ್ರಮದಲ್ಲಿ ಕೆಎಸ್ ಸಿ ಎಎಸ್ಐ ನ ಡಾ.ನಾಝ್ ಜಹನಾ ಶೇಖ್ , ಕೆಎಸ್ ಸಿ ಎಎಸ್ಐ ಕಾರ್ಯದರ್ಶಿ ಡಾ.ಸರ್ವೇಶ ರಾಜೆ ಯುಆರ್ ಎಸ್ , ಕಣಚೂರು ಮೆಡಿಕಲ್ ಅಕಾಡೆಮಿಯ ಡೀನ್‌ ಶಹನವಾಝ್ ಮನ್ನಿಪ್ಪಾಡಿ, ಕಣಚೂರು ಹೆಲ್ತ್ ಸೈಯನ್ಸ್ ನ ಅಧ್ಯಕ್ಷರಾದ ಡಾ.ಮಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಕಣಚೂರು ಹೆಲ್ತ್ ಸೈಯನ್ಸ್ ನ ಸಲಹಾ ಸಮಿತಿ ಸದಸ್ಯ ಡಾ ಎಂ.ವೆಂಕಟ್ರಾಯ ಪ್ರಭು, ಕೆಎಸ್ ಸಿ ಎಎಸ್ಐ ಕೋಶಾಧಿಕಾರಿ ಡಾ.ಗುರುಬಸವನ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸಸ್ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮ್ಮೇಳನದ ಸಂಘಟಕರಾದ ಡಾ.ಸತ್ಯಮೂರ್ತಿ ಐತಾಳ್ ಅವರು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ಲಿಖಿತ್ ರೈ ವಂದಿಸಿದರು. ಅಬ್ದುಲ್ ಕರೀಂ ಪಾರೂಕಿ, ಅರುಂಧತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...