ಬೆಂಗಳೂರು: ಪೂರ್ವ ಸೂಚನೆ ಇಲ್ಲದೆ ಮನೆಗಳನ್ನು ಧ್ವಂಸಗೊಳಿಸಿದ ಪ್ರದೇಶಕ್ಕೆ ವಿಮೆನ್ ಇಂಡಿಯಾ ಮೂವ್ಮೆಂಟ್ ನಿಯೋಗ ಭೇಟಿ

Date:

ಬೆಂಗಳೂರಿನ ಕೋಗಿಲು ಪ್ರದೇಶದ ಫಕೀರ್ ಲೇಔಟ್ ಮತ್ತು ವಸೀಂ ಲೇಔಟ್ ಗಳಲ್ಲಿ ಕಳೆದ 30 ವರ್ಷಗಳಿಂದ ಆಶ್ರಯ ಕಂಡುಕೊಂಡಿದ್ದ ಬಡ ಕುಟುಂಬಗಳ ಮನೆಗಳನ್ನು ಯಾವುದೇ ಪುನರ್ವಸತಿ ವ್ಯವಸ್ಥೆ ಕಲ್ಪಿಸಿದೆ, ಬುಲ್ಡೋಜರ್ಸ್ ಮೂಲಕ ಏಕಾಏಕಿ ಧ್ವಂಸಗೊಳಿಸಲಾಗಿದ್ದು, ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಕೋಶಾಧಿಕಾರಿ ಆಯಿಶಾ ಶಬೀರ್ ನೇತೃತ್ವದ ತಂಡ ಆ ಪ್ರದೇಶಗಳಿಗೆ ಭೇಟಿ ಮಾಡಿತು.


ಈ ಸಂದರ್ಭದಲ್ಲಿ ಮಾತನಾಡಿದ ಆಯಿಶಾ ಶಬೀರ್, ಸರ್ಕಾರದ ಈ ಆದೇಶವು ಅತ್ಯಂತ ಅಮಾನವೀಯವಾಗಿದೆ. ಸಣ್ಣ ಮಕ್ಕಳು, ಮಹಿಳೆಯರು, ಗರ್ಭಿಣಿಯರು ಇರುವ ಕುಟುಂಬಗಳನ್ನು ಪೂರ್ವ ಸೂಚನೆ ಇಲ್ಲದೆ ಬೀದಿಪಾಲು ಮಾಡಿರುವುದು ಸರಿಯಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಶಾಸಕರು ನಿಷ್ಪ್ರಯೋಜಕರು ಎಂದು ಹೇಳಿದರು.

   

ತಮ್ಮ ಕನಸು, ಸೂರು, ಸುರಕ್ಷತೆಯನ್ನು ಕಳೆದುಕೊಂಡಿರುವ
ಕುಟುಂಬಗಳೊಂದಿಗೆ ವಿಮೆನ್ ಇಂಡಿಯಾ ಮೂವ್ಮೆಂಟ್
ಸದಾ ಜೊತೆಯಾಗಿರುತ್ತದೆ ಎಂದು ಅವರು ಭರವಸೆಯಿತ್ತರು.
ಈ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಆ ಕುಟುಂಬಗಳ ಧ್ವನಿಯಾಗಲು ನಾವು ತಯಾರಿದ್ದೇವೆ. ಅವರ ಜೀವನವನ್ನು ಆತ್ಮವಿಶ್ವಾಸದೊಂದಿಗೆ,ಭರವಸೆಯೊಂದಿಗೆ ಮತ್ತೆ ರೂಪಿಸಿಕೊಳ್ಳಲು ನಮ್ಮ ತಂಡದ ಸಹಕಾರ ಯಾವತ್ತೂ ಇರಲಿದೆ ಎಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...