ಶ್ರೀಲಂಕಾ ನಿಯೋಗ ಮಂಗಳೂರು ಪ್ರೆಸ್ ಕ್ಲಬ್‌ಗೆ ಭೇಟಿ

Date:


  • ಭಾರತ -ಶ್ರೀಲಂಕಾ ಮಧ್ಯೆ ಅವಿನಾಭಾವ ಸಂಬಂಧ ಶ್ರೀಲಂಕಾ ಪ್ರಧಾನಿ ಕಚೇರಿಯ ಮಾಜಿ ಮಾಧ್ಯಮ ಕಾರ್ಯದರ್ಶಿ ನಿಶಾಂತ ಆಲ್ವಿಸ್

ಮಂಗಳೂರು: ಶ್ರೀಲಂಕಾದ ಆರ್ಥಿಕ ಸಚಿವಾಲಯದ ಮಾಜಿ ಮಾಧ್ಯಮ ಕಾರ್ಯದರ್ಶಿ, ಏಷ್ಯನ್ ಮೀಡಿಯಾ ಮತ್ತು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಪ್ಯಾಟಮ್ ಪ್ಯಾಸ್ಕುೃಲ್ ನೇತ್ರತ್ವದ ಶ್ರೀಲಂಕಾದ ಅಧಿಕಾರಿಗಳ ಹಾಗೂ ಪತ್ರಕರ್ತರ ನಿಯೋಗ ಶನಿವಾರ ಮಂಗಳೂರು ಪ್ರೆಸ್ ಕ್ಲಬ್‌ಗೆ ಭೇಟಿ ನೀಡಿತು.


ಪತ್ರಕರ್ತರ ಜತೆ ಸಂವಾದ ನಡೆಸಿದ ನಿಯೋಗದ ಸದಸ್ಯ ಶ್ರೀಲಂಕಾ ಪ್ರಧಾನಿ ಕಚೇರಿಯ ಮಾಜಿ ಮಾಧ್ಯಮ ಕಾರ್ಯದರ್ಶಿ ನಿಶಾಂತ ಆಲ್ವಿಸ್ ಮಾತನಾಡಿ ‘ಶ್ರೀಲಂಕಾಕ್ಕೆ ಸಂಕಷ್ಟ ಎದುರಿಸಿದಾಗಲೆಲ್ಲ ಭಾರತ ನೆರವಿಗೆ ಬಂದಿದೆ. ಕೊರೊನಾ, ಚಂಡಮಾರುತ , ನೆರೆ ಸಂದರ್ಭಗಳಲ್ಲಿ ಭಾರತದ ನೀಡಿದ ಸಹಾಯ ಹಸ್ತವನ್ನು ಎಂದೂ ಮರೆಯುವಂತಿಲ್ಲ. ಭಾರತ ಮತ್ತು ಶ್ರೀಲಂಕಾ ಮಧ್ಯೆ ಇರುವ ಅವಿನಾಭಾವ ಸಂಬಂಧವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಜವಾಬ್ದಾರಿ ಉಭಯ ದೇಶಗಳ ಪ್ರಜೆಗಳ ಮೇಲಿದೆ ’ಎಂದರು.


ಶ್ರೀಲಂಕಾದ ಹಿರಿಯ ಪತ್ರಕರ್ತರಾದ ಸಂಜೀವ ತಿಸೇರಾ, ಹೇಮಂತ ಕುಮಾರಸಿಂಧೆ, ದಾಮಿಸಿರಿ ಅಜಿತ್, ತುಷಾರ ಹೆಟ್ಟಿರಾಚಿ ನಿಯೋಗದ ಇತರ ಸದಸ್ಯರಾಗಿದ್ದರು. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಪ್ರಧಾನ ಕಾರ್ಯದರ್ಶಿ ರಾಜೇಶ್.ಕೆ.ಪೂಜಾರಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ನಿಯೋಗದ ಸದಸ್ಯರನ್ನು ಗೌರವಿಸಿದರು.


ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಆರಿಫ್ ಪಡುಬಿದ್ರಿ, ವಿಲ್ಪ್ರೆಡ್ ಡಿಸೋಜಾ, ಖಜಾಂಜಿ ವಿಜಯ ಕೋಟ್ಯಾನ್, ಕಾರ್ಯದರ್ಶಿ ಸತೀಶ್ ಇರಾ, ಜೀವನ್, ದಯಾ ಕುಕ್ಕಾಜೆ, ಸಂದೀಪ್ ಕುಮಾರ್ ಎಂ, ಭಾಸ್ಕರ ರೈ ಕಟ್ಟ, ಪ್ರಣಾಮ್, ಅಭಿಜಿತ್ ಕೊಲ್ಪೆ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ರಾಮಚಂದ್ರ ಭಂಡಾರ್ಕಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...