ಜಿದ್ದಾ: DKSC ಮಕ್ಕಾ ಅಲ್ ಮುಕರ್ರಮ ವಲಯ ಸಮಿತಿ ಅದೀನದ ಜಿದ್ದಾ ಸೌತ್ ಯುನಿಟ್ ನ 2026-27 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 26/12/2025 ರಂದು DKSC ಹೌಸ್ ಅಝೀಝಿಯಾದಲ್ಲಿ ಮಾಸಿಕ ಸ್ವಲಾತ್ ನೊಂದಿಗೆ ಆರಂಭಗೂಂಡಿತು.
ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಇಬ್ರಾಹಿಂ ಬಂಡಾಡಿಯವರು ವಹಿಸಿದ್ದರು. ಫಝಲ್ ಸೂರಿಂಜೆ ರವರು ಸ್ವಾಗತಿಸಿದರು. ಮಕ್ಕಾ ವಲಯ ಆರ್ಗನೈಝರ್ ಅಶ್ರಫ್ ಸಖಾಫಿ ರವರು ಸಬೆಯನ್ನು ಉಧ್ಘಾಟಿಸಿದರು. ವರದಿ ಹಾಗೂ ಲೆಕ್ಕಪತ್ರವನ್ನು ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಗಂಟಲ್ಕಟ್ಟೆ ವಾಚಿಸಿದರು. ಮಕ್ಕಾ ವಲಯ ಸಲಹೆಗಾರರಾದ ಬಹು ಫಾರೂಖ್ ಸಅದಿ ರವರು ಮುಖ್ಯ ಅಥಿತಿಯಾಗಿ ಆಗಮಿಸಿ ಹಿತನುಡಿದರು. ಕೇಂದ್ರ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕಣ್ಣಂಗಾರ್ ಉಸ್ರತುಲ್ ಇಹ್ಸಾನ್ ಪದ್ದತಿಯನ್ನು ಯಶಸ್ಸು ಗೊಳಿಸಲು ಕರೆನೀಡಿದರು ಘಟಕದ ಡೆವಲಪ್ಮೆಂಟ್ ಚೇರ್ಮಾನ್ ಬಹು ಝಕರಿಯಾ ಸಖಾಫಿ ತಂಙಳ್ ನಾವುಂದ ದುಆ ನೆರೆವೇರಿಸಿ ಮಾತನಾಡಿದರು. ಕೇಂದ್ರ ಸಮಿತಿ ಕಾರ್ಯದರ್ಶಿ ಇಸ್ಮಾಯಿಲ್ ಹೈದ್ರೋಸ್ ಮೂಡಿಗೆರೆ ಚುಣಾವನಾ ಅದಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

2026-2027 ನೇ ಸಾಲಿನ ನೂತನ ಕಾರ್ಯಕಾರಿ ಸಮೀತಿಯು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.
ಅಧ್ಯಕ್ಷರು: ಇಬ್ರಾಹಿಂ ಬಂಡಾಡಿ
ಉಪಾಧ್ಯಕ್ಷರು: ಅಬ್ದುಲ್ ರಹ್ಮಾನ್ ಗಂಟಲ್ಕಟ್ಟೆ ಹಾಗೂ ಆಸಿಫ್ ಕೋಟ
ಪ್ರ. ಕಾರ್ಯದರ್ಶಿ: ರಫೀಕ್ ಅಡ್ಡೂರು
ಜೊ. ಕಾರ್ಯದರ್ಶಿ: ಅಬ್ದುಲ್ ಫತ್ತಾಹ್
ಹಣಕಾಸು ಕಾರ್ಯದರ್ಶಿ: ಫಝಲ್ ಸೂರಿಂಜೆ.
ಡೆವಲಪ್ಮೆಂಟ್ ಚೇರ್ಮಾನ್: ಬಹು ॥ ಝಕರಿಯಾ ಸಖಾಫಿ ತಂಞಳ್ ನಾವುಂದ
ಸಲಹೆಗಾರರು: ಬಹು ನಾಫಿಹ್ ತಂಞಳ್ & ಮುಹಮ್ಮದ್ ಝಹ್ರಿ
ಲೆಕ್ಕಪರಿಶೋಧಕರು: ನಾಸಿರ್ ಮಂಚಿ
ನೂತನ ಅಧ್ಯಕ್ಷರಾದ ಇಬ್ರಾಹಿಂ ಬಂಡಾಡಿ ರವರು ಅಧ್ಯಕ್ಷೀಯ ಭಾಷಣಗೖದರು ಹಾಗೂ ಜೊ. ಕಾರ್ಯದರ್ಶಿ ಅಬ್ದುಲ್ ಫತ್ತಾಹ್ ಧನ್ಯವಾದಿಸಿದರು. ಸಭೆಯು ಸಲ್ವಾತುಲ್ ಕಫ್ಫಾರತಿನೊಂದಿಗೆ ಮುಕ್ತಾಯವಾಯಿತು.

ಅಧ್ಯಕ್ಷರು: ಇಬ್ರಾಹಿಂ ಬಂಡಾಡಿ



