ಜ. 25ರಂದು ಕಲ್ಲಬೆಟ್ಟಿನಲ್ಲಿ ಹಿಂದೂ ಸಂಗಮ: ಆಮಂತ್ರಣ ಪತ್ರಿಕೆ ಬಿಡುಗಡೆ

Date:

ಮೂಡುಬಿದಿರೆ: ಹಿಂದೂ ಸಂಗಮ ಆಯೋಜನಾ ಸಮಿತಿ ಮೂಡುಬಿದಿರೆ ತಾಲೂಕು, ಕಲ್ಲಬೆಟ್ಟು ಮಂಡಲದ (ಕಲ್ಲಬೆಟ್ಟು-ಕರಿಂಜೆ-ಮಾರೂರು ಗ್ರಾಮಗಳು) ವತಿಯಿಂದ ಜನವರಿ 25ರ ಭಾನುವಾರ ಕಲ್ಲಬೆಟ್ಟಿನ ಶ್ರೀ ಮಹಮ್ಮಾಯಿ ದೇವಸ್ಥಾನದ ವಠಾರದಲ್ಲಿ ‘ಹಿಂದೂ ಸಂಗಮ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಆ ಪ್ರಯುಕ್ತ ಆಮಂತ್ರಣ ಪತ್ರಿಕೆ ಯನ್ನು ಭಾನುವಾರ ಬಿಡುಗಡೆಗೊಳಿಸಲಾಯಿತು.

ಬಿಜೆಪಿ ಮುಖಂಡ, ವಕೀಲ ಎಂ. ಬಾಹುಬಲಿ ಪ್ರಸಾದ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಪ್ರಮುಖರಾದ ಮಂಜುನಾಥ ಬೆಳುವಾಯಿ, ಕೃಷ್ಣಪ್ಪ ಕಲ್ಲಬೆಟ್ಟು, ರಮೇಶ್ ಚಂದ್ರ ಪಿ., ಶಿವಾನಂದ ಪೈ, ಸತೀಶ್ ಶೆಟ್ಟಿ, ಸುಶಾಂತ್ ಕರ್ಕೇರಾ, ಹೊಸಂಗಡಿ ಅರಮನೆ ಸುಕುಮಾರ ಶೆಟ್ಟಿ, ಕೆ. ಪ್ರದೀಪ್ ರೈ, ಸಂಪತ್ ನೆತ್ತೋಡಿ, ವಿಶಾಲ್, ಅರ್ಚಕರಾದ ಸೂರ್ಯರಾವ್ ಹಾಗೂ ಕಲ್ಲಬೆಟ್ಟು-ಕರಿಂಜೆ-ಮಾರೂರು ಗ್ರಾಮಗಳ ಮುಖಂಡರು ಮತ್ತು ಗ್ರಾಮಸ್ಥರು ಈ ಸಂದಭ೯ದಲ್ಲಿದ್ದರು.

ಜ.25ರ ಮಧ್ಯಾಹ್ನ 3:00 ಗಂಟೆಗೆ ಮೂಡುಬಿದಿರೆ ಮಹಾವೀರ ಕಾಲೇಜು ಜಂಕ್ಷನ್‌ನಿಂದ “ವೈಭವದ ಶೋಭಾಯಾತ್ರೆ” ಆರಂಭಗೊಳ್ಳಲಿದ್ದು, ಕಲ್ಲಬೆಟ್ಟು ಶ್ರೀ ಮಹಮ್ಮಾಯಿ ದೇವಸ್ಥಾನದವರೆಗೆ ಸಾಗಲಿದೆ. ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಗಮಕ್ಕೆ ಭಕ್ತಾಭಿಮಾನಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜನಾ ಸಮಿತಿ ವಿನಂತಿಸಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...