ಜಿದ್ದಾ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಮಕ್ಕತುಲ್ ಮುಕರ್ರಮ ವಲಯ ಅಧೀನಕ್ಕೊಳಪಟ್ಟ ತ್ವಾಯಿಫ್ ಘಟಕದ ವಾರ್ಷಿಕ ಮಹಾಸಭೆ ಅಲ್ ಬಲದ್ ತ್ವಾಯಿಫ್ ನಲ್ಲಿ ಅಧ್ಯಕ್ಷರಾದ ಬಶೀರ್ ಉಸ್ತಾದ್ ರವರ ನಿವಾಸದಲ್ಲಿ ಸಭಾಧ್ಯಕ್ಷತೆಯಲ್ಲಿ ಜರುಗಿತು.

ಹನೀಫ್ ಉಸ್ತಾದ್ ಕುತ್ತಾರ್ ಕಿರಾಅತ್ ಪಠಿಸಿದರು, ಮಕ್ಕಾ ವಲಯ ಸಲಹೆಗಾರರಾದ ಫಾರೂಖ್ ಸಅದಿ ಹೆಚ್ ಕಲ್ಲು ಉದ್ಘಾಟಿಸಿದರು, ಘಟಕದ ಕಾರ್ಯದರ್ಶಿ ಮನ್ಸೂರ್ ಕುತ್ತಾರ್ ವಾರ್ಷಿಕ ವರದಿ ಮತ್ತು ಪ್ರವರ್ತನಾ ವರದಿ ವಾಚಿಸಿದರು.
ಚುನಾವಣಾಧಿಕಾರಿಯಾಗಿ ಆಗಮಿಸಿದ ಮಕ್ಕಾ ವಲಯ ಪ್ರಧಾನ ಕಾರ್ಯದರ್ಶಿ ರಫೀಖ್ ಎರ್ಮಾಲ್ ಹಳೆಯ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಯನ್ನು ರಚಿಸಿದರು.
2026-27 ನೇ ಸಾಲಿಗೆ ನೂತನ ಸಮಿತಿಯ ಅಧ್ಯಕ್ಷರಾಗಿ ಬಶೀರ್ ಉಸ್ತಾದ್ ಪಾಟ್ರಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಕುತ್ತಾರ್, ಹಣಕಾಸು ಕಾರ್ಯದರ್ಶಿಯಾಗಿ ಸುಲೈಮಾನ್ ತೋಡಾರ್ ಆಯ್ಕೆಯಾದರು. ಡೆವಲಪ್ಮೆಂಟ್ ಚೇರ್ಮಾನ್ ಆಗಿ ಇಖ್ಬಾಲ್ ಮದನಿ ಪಾತೂರು, ಸಂವಹಣಾ ಕಾರ್ಯದರ್ಶಿಯಾಗಿ ರಿಯಾಝ್ ಉಳ್ಳಾಲ, ಉಪಾಧ್ಯಕ್ಷರಾಗಿ ಹನೀಫ್ ಉಸ್ತಾದ್ ಕುತ್ತಾರ್, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ಲತೀಫ್ ಪೈವಳಿಕೆ, ಹಣಕಾಸು ಸಹ ಕಾರ್ಯದರ್ಶಿಯಾಗಿ ಸಲೀಂ ಉಪ್ಪಳ, ಮುಖ್ಯ ಸಲಹೆಗಾರರಾಗಿ ಅಶ್ರಫ್ ಸಖಾಫಿ ಕುಂಬಕೋಡ್, ಸಲಹೆಗಾರರಾಗಿ ಅರಬಿ ಕುಂಞ ಬೀರಿ, ನಾಸಿರ್ ಬೋವು ಉಪ್ಪಿನಂಗಡಿ, ಲೆಕ್ಕ ಪರಿಶೋಧಕರಾಗಿ ಅಝರ್ ಉಳ್ಳಾಲ ಮತ್ತು ಅಬ್ದುರ್ರಝ್ಝಾಖ್ ಕೊಡಂಗಾಯಿ ನೇಮಕ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ :ಹಂಝ ಮಡಿಕೇರಿ, ಸಿದ್ದೀಖ್ ಚಿಪ್ಪಾರ್, ಅನಸ್ ಉಪ್ಪಿನಂಗಡಿ, ಹಫೀಝ್ ಅಡ್ಡೂರು ಮತ್ತು ಅಬ್ದುರ್ರಹ್ಮಾನ್ ಎರ್ಮಾಲ್ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಫಝಲ್ ದೇರಳಕಟ್ಟೆ ಉಪಸ್ಥಿತರಿದ್ದರು, ಮಕ್ಕಾ ವಲಯ ಆರ್ಗನೈಝರ್ ಅಶ್ರಫ್ ಸಖಾಫಿ ಕುಂಭಕೋಡ್ ಸ್ವಾಗತಿಸಿದರು, ಬಶೀರ್ ಉಸ್ತಾದ್ ಧನ್ಯವಾದವಿತ್ತರು.


