ಮಂಗಳೂರು: ಉರ್ಸುಲಿನ್ ಫ್ರಾನ್ಸಿಸ್ಕನ್ ಎಜುಕೇಷನ್ ಸೊಸೈಟಿಯ ಮಂಗಳೂರು ಪ್ರಾಂತ್ಯದ ಆಶ್ರಯದಲ್ಲಿ ಅನುಷ್ಠಾನದಲ್ಲಿರುವ ‘ಮದರ್ ನಿಮ್ಫಾ ಹದಿಹರೆಯ ಮಕ್ಕಳ ಸಬಲೀಕರಣ ಕಾರ್ಯಕ್ರಮದ (AEP) ಭಾಗವಾದ ‘ಸಾಮಾಜಿಕ ಪರಿವರ್ತಕರ ವೇದಿಕೆ – Social Change Agents Forum (SCAF) ಇದರ 2025-26 ಸಾಲಿನ ಪ್ರಾಂತಿಯ ಮಟ್ಟದ ಉದ್ಘಾಟನಾ ಸಭೆಯು ಇತ್ತೀಚೆಗೆ ಬೆಜೈಯ ಲೂರ್ಡ್ಸ್ ಹೈಸ್ಕೂಲ್ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೇನ್‌ಬೋ ಹೋಮ್ಸ್ ಇಂಡಿಯಾದ ನ್ಯಾಷನಲ್ ಸೀನಿಯರ್ ಮ್ಯಾನೇಜರ್ ಮಂಜುಲಾ ತೆಲಗಡೆ ಮಾತನಾಡಿ, “ಹದಿಹರೆಯರ ಸಬಲೀಕರಣವು ಕೇವಲ ವ್ಯಕ್ತಿಯ ಅಭಿವೃದ್ಧಿಯಲ್ಲ, ಬದಲಾಗಿ ಅದು ಇಡೀ ಸಮುದಾಯದ ಸಮಗ್ರ ಪ್ರಗತಿಗೆ ಅಡಿಪಾಯವಾಗಿದೆ. ಹದಿಹರೆಯ ಮಕ್ಕಳು ತಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಜಾಗೃತರಾದಾಗ ಸಮಾಜದಲ್ಲಿ ದೊಡ್ಡ ಬದಲಾವಣೆ ತರಲು ಸಾಧ್ಯ,” ಎಂದು ಅಭಿಪ್ರಾಯಪಟ್ಟರು.

ಮಂಗಳೂರು ಪ್ರಾಂತ್ಯದ ಪ್ರಾಂತೀಯ ಪ್ರಾಂತ್ಯಧಿಕಾರಿಯಾದ ರೆವ್. ಸಿಸ್ಟರ್ ಕ್ಲಾರಾ ಮೆನೆಜಿಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. UFC ಸಂಸ್ಥೆ, ಮಂಗಳೂರು ಇದರ ಸಾಮಾಜಿಕ ಅಭಿವೃದ್ಧಿ ಹಾಗೂ ಆರೋಗ್ಯ ಸೇವಾ ಕಾರ್ಯ ಸಂಯೋಜಕರಾದ ರೆವ್. ಸಿಸ್ಟರ್ ಲಿಡಿಯಾ ಸೆರಾವೋ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಭೆಯಲ್ಲಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವಲ್ಲಿ ಯುವತಿಯರ ಪಾತ್ರ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವ ಮಹತ್ವದ ಕುರಿತು ವಿಶೇಷ ಸಂವಾದ ಮತ್ತು ಚರ್ಚೆಗಳು ನಡೆದವು.

ಗೌರವ ಅತಿಥಿಯಾಗಿ UFES ಉಪ ಕಾರ್ಯದರ್ಶಿ ರೆವ್. ಸಿಸ್ಟರ್ ಜುಲಿಯಾನಾ ಪಾಯ್ಸ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪ್ರಾಂತೀಯ ಸಂಯೋಜಕಿ ಸಿಸ್ಟರ್ ಕಲಾ ನಿಕೋಲಸ್, ಕನ್ವೀನರ್ ಸಿಸ್ಟರ್ ದುಲ್ಸಿನ್ ಕ್ರಾಸ್ತಾ ಹಾಗೂ ಕಾರ್ಯಕ್ರಮ ಸಂಯೋಜಕಿ ಸಿಸ್ಟರ್ ಡಿಂಪಲ್ ಡಿ’ಸೌಝಾ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ 150 ವಿದ್ಯಾರ್ಥಿನಿಯರು – ಸಾಮಾಜಿಕ ಪರಿವರ್ತಕರು, ವಿದ್ಯಾರ್ಥಿಗಳ ಮಾರ್ಗದರ್ಶಕ -ಶಿಕ್ಷಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸಿಸ್ಟರ್ ಲಿಲ್ಲಿ ಪುಷ್ಪಾ ಸ್ವಾಗತಿಸಿದರು. ಸಿಸ್ಟರ್ ಗ್ರೆಟ್ಟಾ ಡಿಸೋಜ ವಂದಿಸಿದರು. ಸಿಸ್ಟರ್ ಜಾನೆಟ್ ಮಚಾದೋ ಕಾರ್ಯಕ್ರಮ ನಿರ್ವಹಿಸಿದರು.


