ಕಾವೂರಿನಲ್ಲಿ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮ

Date:


ಮಂಗಳೂರು: ಸ್ತ್ರೀ ಜಾಗೃತಿ ಸಮಿತಿ ಮತ್ತು ಸೇವಕ್, ಮಹಿಳಾ ಗೃಹ ಕಾರ್ಮಿಕರ ಸಬಲೀಕರಣ ಯೋಜನೆ ಮಂಗಳೂರು ಇದರ ಸಹಯೋಗದೊಂದಿಗೆ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮ ಕಾವೂರಿನ ವ್ಯವಸಾಯ ಸೇವಾ ಸಭಾಂಗಣದಲ್ಲಿ ನಡೆಯತು.

ವಾತ್ಸಲ್ಯಮಯಿ ಮಹಿಳಾ‌ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕಿ ನ್ಯಾಯವಾದಿ ಶೈಲಜಾ ರಾಜೇಶ್ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಸೈಬರ್ ಅಪರಾಧಕ್ಕೆ ಹೆಚ್ಚಾಗಿ ಮಹಿಳೆಯರೆ ಬಲಿಯಾಗುತ್ತಿದ್ದು ಅದೆಷ್ಟೋ ಕುಟುಂಬಗಳು ಮಧ್ಯೆ ಬಿರುಕು ಬಿಟ್ಟ ಉದಾಹರಣೆಗಳಿವೆ ಮಹಿಳೆಯರು ಇನ್ನಷ್ಟು ಜಾಗೃತಿಯಾಗುವ ಅಗತ್ಯವಿದೆ ಎಂದು ಹೇಳಿದರು.

ಕಾವೂರು ಪೋಲೀಸ್ ‌ಠಾಣಾಧಿಕಾರಿ ಸುನೀಲ್ ಸೈಬರ್ ಅಪರಾಧದ‌ ಕುರಿತು ಮಾಹಿತಿ‌ ನೀಡಿದರು. ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ಸುಮಂತ್ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸ್ತ್ರೀ ಜಾಗೃತಿ ಸಮಿತಿಯ ಮಂಗಳೂರು ಸಂಚಾಲಕಿ ಡಾ.ಸಂಸದ್ ಕಾರ್ಯಕ್ರಮದ‌ ಅಧ್ಯಕ್ಷತೆ ವಹಿಸಿದರು.

ನ್ಯಾಯಾವಾದಿ ಸ್ವಾತಿ ಬಂಗೇರ, ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಲೋಕೇಶ್ ಭಂಡಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಅನುಪಮ, ಗೃಹ ಕಾರ್ಮಿಕರ ಸಬಲೀಕರಣ ಯೋಜನೆಯ ಅಧ್ಯಕ್ಷೆ ಸೀತಮ್ಮ ಉಪಸ್ಥಿತರಿದ್ದರು.
ಗೃಹ ಕಾರ್ಮಿಕರ ಸಬಲೀಕರಣ ಯೋಜನೆಯ ಕಾರ್ಯದರ್ಶಿ ಕವಿತಾ ಶ್ರೀ ರಾಮ್ ಸ್ವಾಗತಿಸಿದರು, ರೇಶ್ಮ ರವೀಂದ್ರ ವಂದಿಸಿದರು.
ಗೃಹ ಕಾರ್ಮಿಕರ ಸಬಲೀಕರಣ ಯೋಜನೆಯ ಕಾರ್ಯಕ್ರಮ ಸಂಯೋಜಕಿ ಹನಿಷಾ ಸವಾದ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಂಗ ಸ್ವರೂಪ (ರಿ.) ಕುಂಜತ್ತಬೈಲ್ ವತಿಯಿಂದ ಬೇಸಿಗೆ ಶಿಬಿರ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ

ಕಾವೂರು: ರಂಗ ಸ್ವರೂಪ (ರಿ.) ಕುಂಜತ್ತಬೈಲ್ ಆಯೋಜಿಸಿದ ರಂಗೋತ್ಸವ 2026' 4ದಿನಗಳ...

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...