
ಬಂಟ್ವಾಳ: ಎಸ್ಕೆಎಸ್ಸೆಸ್ಸೆಫ್ ಕುಕ್ಕಾಜೆ ಕ್ಲಸ್ಟರ್ ವತಿಯಿಂದ ಸಮಸ್ತ ನೂರನೇ ವಾರ್ಷಿಕ ಪ್ರಚಾರ ಸಮ್ಮೇಳನ ಹಾಗೂ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮವು ನಾಳೆ ಮಗ್ರಿಬ್ ನಮಾಝಿನ ನಂತರ ಕುಕ್ಕಾಜೆ ಮಸೀದಿ ಮುಂಭಾಗದ ಶಂಸುಲ್ ಉಲಮಾ ನಗರದ ಮಿತ್ತಬೈಲ್ ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ.
ಅಸರ್ ನನಮಾಝಿನ ನಂತರ ವಾಹನ ಜಾಥಾ ಮತ್ತು ಮಗ್ರಿಬ್ ನಮಾಝಿನ ನಂತರ ಬುರ್ದಾ ಆಲಾಪನೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶೈಖುನಾ ಬಂಬ್ರಾಣ ಉಸ್ತಾದ್, ಸೈಯದ್ ಹುಸೇನ್ ಬಾಅಲವಿ ತಂಙಳ್ ಕುಕ್ಕಾಜೆ, ಇರ್ಷಾದ್ ದಾರಿಮಿ ಮಿತ್ತಬೈಲ್, ಮೌಲಾನಾ ಅನೀಸ್ ಕೌಸರಿ, ಸೈಯದ್ ಅಮೀರ್ ತಂಙಳ್ ಕಿನ್ಯ, ರಶೀದ್ ಫೈಝಿ ವೆಳ್ಳಾಯಿಕ್ಕೋಡ್, ಮಾಜಿ ಸಚಿವ ಶ್ರೀ ಬಿ ರಮಾನಾಥ ರೈ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.


