ದಕ್ಕೆಯಲ್ಲಿ ಲೈಟ್ ಕಂಬ ಬಿದ್ದು ಕಾರ್ಮಿಕ ಮೃತ್ಯು: ಸೂಕ್ತ ಪರಿಹಾರಕ್ಕೆ ಎಸ್.ಡಿ.ಟಿ.ಯು ಆಗ್ರಹ.

Date:

ಮಂಗಳೂರು:ಪೆ22: ಮಂಗಳೂರಿನ ದಕ್ಕೆಯಲ್ಲಿ ಲೈಟ್ ಕಂಬ ಬಿದ್ದು ತಮಿಳುನಾಡಿನ ಮೀನು ಕಾರ್ಮಿಕ ಮೃತಪಟ್ಟಿದ್ದು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ( ಎಸ್.ಡಿ.ಟಿ.ಯು ) ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ರಹಿಮಾನ್ ಬೋಳಿಯಾರ್ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.

ಈ ಘಟನೆ ನಡೆಯಲು ದಕ್ಕೆಯ ಅವ್ಯವಸ್ಥೆಯೇ ಕಾರಣ ಎಂದು ಕಟುವಾಗಿ ಟೀಕಿಸಿದ್ದಾರೆ. ಸಾವಿರಾರು ಕೂಲಿಕಾರ್ಮಿಕರು ದುಡಿಯುವ ಮಂಗಳೂರಿನ ದಕ್ಕೆಯಲ್ಲಿ ಈ ರೀತಿಯ ತುಕ್ಕುಹಿಡಿದ ಕಂಬಗಳು ಇನ್ನು ಕೂಡ ತಲೆಎತ್ತಿ ನಿಂತಿದೆ ಎಂದರೆ ಇದು ಅಲ್ಲಿನ ಅವ್ಯವಸ್ಥೆಯ ಮುಖ್ಯ ಕಾರಣ ಎಂದು ಅವರು ಹೇಳಿದರು.

ಮಂಗಳೂರಿನ ದಕ್ಕೆ ಪ್ರಮುಖವಾಗಿ ಬಂದರು ಚಟುವಟಿಕೆಗಳ ಕೇಂದ್ರವಾಗಿದ್ದು ಮೀನುಗಾರಿಕೆ,ಸರಕು ಸಾಗಣಿಕೆ ಕೋಟಿಗಟ್ಟಲೆ ವ್ಯಾಪಾರ ವಹಿವಾಟು ನಡೆಯುವಂತಹ ಇಂತಹ ಬಂದರು ಪ್ರದೇಶದಲ್ಲಿ ಕೂಲಿಕಾರ್ಮಿಕರಿಗೆ ಸರಿಯಾದ ಮೂಲಭೂತ ಸೌಕರ್ಯಗಳು ಹಾಗೂ ಬದುಕಿನ ರಕ್ಷಣೆಗೆಬೇಕಾದ ವ್ಯವಸ್ಥೆಗಳು ಇಲ್ಲ ಅಂದ್ರೆ ಇದು ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯವೇ ಆಗಿದೆ ಎಂದರು. ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳು ಸಂಭವಿಸದಾಗೆ ಇಲಾಖೆಗಳು ಎಚ್ಚರವಹಿಸಬೇಕು ಹಾಗೂ ತಮಿಳುನಾಡು ಮೂಲದ ಮೀನು ಕಾರ್ಮಿಕನಾದ ಮುರುಗನ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

‘ನಮ್ಮ ನಡಿಗೆ ಮುಡಿಪು ಪುಣ್ಯ ಕ್ಷೇತ್ರದ ಕಡೆಗೆ’ ಆದ್ಯಾತ್ಮಿಕ ಜಾಥಾ

ಉಳ್ಳಾಲ‌: ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ ವತಿಯಿಂದ ಭಾನುವಾರ ನಡೆದ 'ನಮ್ಮ...

ಮಸ್ಜಿದ್ ಬಿಲಾಲ್ ಸಜಿಪನಡು ಇದರ ನೂತನ ಅಧ್ಯಕ್ಷರಾಗಿ ಜಾಬಿರ್ ಮತ್ತು ಕಾರ್ಯದರ್ಶಿಯಾಗಿ ಇರ್ಶಾದ್

ಉಳ್ಳಾಲ: ಮಸ್ಜಿದ್ ಬಿಲಾಲ್ ಸಲಫಿ ಜುಮಾ ಮಸೀದಿ ಸಜಿಪನಡು ಇದರ ವಾರ್ಷಿಕ...

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...