ವಿಟ್ಲ: ವಿಟ್ಲದ ಕೊಡಂಗಾಯಿ ಸಮೀಪದ ಮೂರ್ಕಜೆಯ ಆರೆಸ್ಸೆಸ್ಸ್ ಚಲಾಯಿಸುತ್ತಿರುವ (ಮೈತ್ರೆಯೀ ಗುರುಕುಲಮ್) ಗುರಕುಳ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಕಾಣೆಯಾದ ಮಾಹಿತಿ ಹರಿದಾಡುತ್ತಿತ್ತು. ಇದೀಗ ಆ ವಿದ್ಯಾರ್ಥಿನಿಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಆ ವಿದ್ಯಾರ್ಥಿನಿಗೆ ಏನಾಯಿತು? ಕೊಲೆಯೇ, ಆತ್ಮಹತ್ಯೆಯೇ ಎಂಬುವುದು ಇನ್ನು ತನಿಖೆಯಲ್ಲಿ ಬಹಿರಂಗವಾಗಬೇಕೆಂದು ಎಸ್‌ಡಿಪಿಐ ಕೊಳ್ನಾಡು ಬ್ಲಾಕ್ ಸಮಿತಿ ಅಧ್ಯಕ್ಷ ಪೈಝಲ್ ಮಂಚಿ ಆಗ್ರಹಿಸಿದ್ದಾರೆ.

ವಿದ್ಯಾರ್ಥಿನಿ ಸಾವು ಹೇಗಾಯಿತು ಎನ್ನುವ ಕುರಿತು ಸೂಕ್ತ ತನಿಖೆ ನಡೆಯಬೇಕು. ಆರೆಸ್ಸೆಸ್ಸ್ ಅಧೀನದಲ್ಲಿ ಸಂಸ್ಥೆ ಆಗಿರುವುದರಿಂದ ಸಂಘಪರಿವಾರದ ನಾಯಕರು/ ಬಂಟ್ವಾಳ ಶಾಸಕರು ಎಲ್ಲಾ ರಾಜಕೀಯ ಬಲವನ್ನು ಉಪಯೋಗಿಸಿ ಪ್ರಕರಣ ಮುಚ್ಚಿ ಹಾಕುವ ಸಾಧ್ಯತೆ ಇದೇ! ಯಾಕೆಂದರೆ ಇಲ್ಲಿ ಕಾರ್ಯಕ್ರಮಗಳಿಗೆ ಸಂಘ ಪರಿವಾರದ ಉನ್ನತ ಮಟ್ಟದ ನಾಯಕರು ಭಾಗವಹಿಸುತ್ತಾರೆ. ಅಲ್ಲಿ ಏನು ನಡೆಯುತ್ತಿದೆ ಯಾರು ಬರುತ್ತಾರೆ ಯಾರು ಹೋಗುತ್ತಾರೇ ಎನ್ನುವುದು ಹಿಂದಿನಿಂದಲ್ಲೂ ಯಾರಿಗೂ ಗೊತ್ತಾಗ್ತಿರಲಿಲ್ಲ. ಸಾರ್ವಜನಿಕರಿಗೆ ಪ್ರವೇಶ ಕೂಡ ಕೊಡುತ್ತಿರಲಿಲ್ಲ. ಹಿಂದೆಯೂ ಅಲ್ಲಿ ದೌರ್ಜನ್ಯ ನಡೆದ ಕುರಿತು ವಿದ್ಯಾರ್ಥಿನಿಗಳು ಬಂದು ಹೇಳಿದ ಇತಿಹಾಸ ಇದೇ. ಹಾಗಾಗಿ ಈ ವಿದ್ಯಾರ್ಥಿನಿಯ ಕುಟುಂಬಕ್ಕೇ ನ್ಯಾಯ ದೊರಕಿಸಿ ಕೊಡಲು ಗೃಹ ಇಲಾಖೆ ಸನ್ನದ್ದವಾಗಬೇಕೆಂದು ಎಸ್‌ಡಿಪಿಐ ಕೊಳ್ನಾಡು ಬ್ಲಾಕ್ ಸಮಿತಿ ಅಧ್ಯಕ್ಷ ಪೈಝಲ್ ಮಂಚಿ ಆಗ್ರಹಿಸಿದ್ದಾರೆ.


