ಕಲ್ಕಟ್ಟ ಹಸನಬ್ಬ ಹಾಜಿ ವಫಾತಾಗಿ ಹತ್ತು ವರ್ಷ

Date:

ದೇರಳಕಟ್ಟೆ: ಪವಿತ್ರ ರಮಳಾನ್ ಮಾಸದಲ್ಲಿ ವಫಾತಾಗುವ ಭಾಗ್ಯ ದೊರೆತ ನಾಡಿನ ಹಿರಿಯ ಮುತ್ಸದ್ಧಿಗಳಲ್ಲೊ ಬ್ಬರಾಗಿದ್ದ ಕಲ್ಕಟ್ಟ ಹಸನಬ್ಬ ಹಾಜಿಯವರು ಮರಣ ಹೊಂದಿ ಈ ರಮಳಾನ್ ಗೆ ಹತ್ತು ವರ್ಷ ತುಂಬುತ್ತದೆ. ನಿನ್ನೆ ಕಲ್ಕಟ್ಟದಲ್ಲಿ ತರಾವೀಹ್ ಗೆ ಹೋಗಿದ್ದಾಗ ಅವರ ಪುತ್ರ ಬಶೀರ್ ಹಾಜಿಯವರು ಇದನ್ನು ನೆನಪಿಸಿದರು. ಕಣ್ಮರೆಯಾದರೂ ಮನ್ಮರೆಯದ ನೆನಪುಗಳು, ಆದರ್ಶ, ನಡೆನುಡಿಗಳ ಮೂಲಕ ಊರಲ್ಲಿ ಛಾಪು ಮೂಡಿಸಿ ಹೋಗಿರುವುದರಿಂದ ನಿಜಕ್ಕೂ ಹಸನಬ್ಬ ಹಾಜಿಯವರು ಸ್ಮರಣಾರ್ಹರು.

ಸತ್ಯನಿಷ್ಠೆ, ಧರ್ಮನಿಷ್ಠೆ, ನ್ಯಾಯದ ವಿಷಯದಲ್ಲಿ ರಾಜಿಯಿಲ್ಲದ ದಿಟ್ಟ ನಿಲುವು ಮುಂತಾದ ಮಾದರೀಯೋಗ್ಯ ನಡೆಗಳ ನೆನಪುಗಳನ್ನು ಅವರು ಉಳಿಸಿ ಹೋಗಿದ್ದಾರೆ. ಮಂಜನಾಡಿ ಅಲ್ ಮದೀನಾ ವಿದ್ಯಾ ಸಂಸ್ಥೆಯ ರೂವಾರಿ ಮರ್ಹೂಮ್ ಅಬ್ಬಾಸ್ ಉಸ್ತಾದರ ಒಡನಾಡಿಯಾಗಿ ಆ ಸಂಸ್ಥೆಯ ಅಭಿವೃದ್ಧಿಯಲ್ಲಿ ಪಾತ್ರ ವಹಿಸಿದವರು ಹಸನಬ್ಬ ಹಾಜಿಯವರು. ಊರು ಮತ್ತು ಆಸುಪಾಸುಗಳಲ್ಲಿ ಯಾವುದೇ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳಿದ್ದರೂ ಅಲ್ಲಿ ಹಸನಬ್ಬಾಜಿಯವರ ಸಕ್ರಿಯ ಪಾತ್ರ ಇದ್ದೇ ಇರುತ್ತಿತ್ತು.

ನೀತಿ, ನ್ಯಾಯದ ವಿಷಯದಲ್ಲಿ ನಿಷ್ಠುರವಾದಿಯಾಗಿದ್ದುದರಿಂದ ಊರಿಡೀ ಅವರ ಮೇಲೆ ಒಂದು ವಿಧ ಗೌರವ ಭಯ ಇತ್ತು. ಅಲ್ಲಾಹು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರ ಕಬರನ್ನು ಸ್ವರ್ಗಧಾಮವಾಗಿಸಲಿ, ಆಮೀನ್ ಯಾರಬ್ಬಲ್ ಆಲಮೀನ್.

-ಡಿ.ಐ. ಅಬೂಬಕರ್ ಕೈರಂಗಳ

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮದೀನಾ: ನ್ಯೂ ವೆಲ್ಫೇರ್ ಇಫ್ತಾರ್ ಕೂಟ ಫೆ.27ರಂದು

ಮದೀನಾ: ನ್ಯೂ ವೆಲ್ಫೇರ್ ಅಸೋಸಿಯೇಷನ್ ಮದೀನಾ ಮುನವ್ವರ ಇದರ ವತಿಯಿಂದ ಇಫ್ತಾರ್...

ಯುವವಾಹಿನಿ ಮೂಡಬಿದಿರೆ ಘಟಕದ ನೂತನ ಅಧ್ಯಕ್ಷರಾಗಿ ಗಿರೀಶ್ ಕೋಟ್ಯಾನ್ ಮಾರೂರು ಆಯ್ಕೆ

ಮೂಡುಬಿದಿರೆ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ನೂತನ...

ಮೂಡುಮಾನಾ೯ಡು ಪ್ರಾ. ಶಾಲೆಯಲ್ಲಿ ಮೆಟ್ರಿಕ್ ಮೇಳ

ಮೂಡಬಿದಿರೆ: ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡು ಮಾರ್ನಾಡುವಿನಲ್ಲಿ ಮೆಟ್ರಿಕ್...

ಮೂಡಬಿದಿರೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಉದ್ಘಾಟನೆ

ಮೂಡಬಿದಿರೆ: ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಮತ್ತು ನೆರವು ನೀಡುವುದು ಕಾನೂನು...