ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ – SmartNav(SmartNavigation) ತಂತ್ರಜ್ಞಾನ ಬಳಸಿ ದ್ವಿಪಾಶ್ರ್ವೀಯ ಕಾಕ್ಲಿಯರ್ ಇಂಪ್ಲಾಂಟ್ ಯಶಸ್ವಿ ಶಸ್ತ್ರಚಿಕಿತ್ಸೆ.

Date:



ದೇರಳಕಟ್ಟೆ: ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯ ಅಧೀನದ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಇಎನ್‍ಟಿ, ಹೆಡ್ ಅಂಡ್ ನೆಕ್, ಕಾಕ್ಲಿಯರ್ ಇಂಪ್ಲಾಂಟ್ ಮತ್ತು ಸ್ಕಲ್ ಬೇಸ್ ಸರ್ಜರಿ ವಿಭಾಗವು ಏಕಕಾಲಿಕ ದ್ವಿಪಾಶ್ರ್ವೀಯ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು SmartNav (SmartNavigation) ಇಂಟ್ರಾಒಪರೇಟಿವ್ ತಂತ್ರಜ್ಞಾನ ಬಳಸಿ ಜನ್ಮಜಾತವಾಗಿ ಉಭಯ ಕಿವಿಗಳಲ್ಲೂ ಶ್ರವಣ ನಷ್ಟ ಹೊಂದಿದ್ದ ಮೂರು ವರ್ಷ ಪ್ರಾಯದ ಮಗುವಿಗೆ ಯಶಸ್ವಿಯಾಗಿ ನೆರವೇರಿಸಿದೆ.


ಈ ಸಾಧನೆಯು ಸಂಸ್ಥೆಯ ಬಾಲ್ಯವಯಸ್ಕರ ಶ್ರವಣ ಪುನಶ್ಚೇತನ ಸೇವೆಗಳನ್ನು ಬಲಪಡಿಸುವಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಸಾಂಪ್ರಾದಯಿಕ ಶ್ರವಣ ಸಾಧನಗಳಿಂದ ತೃಪ್ತಿಕರ ಪ್ರಯೋಜನ ದೊರಕದಿದ್ದ ಕಾರಣ ಮಗುವಿಗೆ ಪೂರ್ವ ಶಸ್ತ್ರಚಿಕಿತ್ಸಾ ಮೌಲ್ಯಮಾಪನಗಳಾದ ಆಡಿಯೋಲಾಜಿಕಲ್, ರೇಡಿಯಾಲಾಜಿಕಲ್ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ನಂತರ ದ್ವಿಪಾಶ್ರ್ವೀಯ(ಏಕ ಕಾಲಕ್ಕೆ ಎರಡೂ ಕಿವಿಗಳಿಗೆ)ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸಲು ಯೋಗ್ಯವೆಂದು ನಿರ್ಧರಿಸಲಾಯಿತು ಮತ್ತು ಈ ಶಸ್ತ್ರಚಿಕಿತ್ಸೆಯನ್ನು ಅರಿವಳಿಕೆ ನೀಡಿ SmartNav(SmartNavigation) ತಂತ್ರಜ್ಞಾನ ಬಳಸಿ ನೆರವೇರಿಸಲಾಯಿತು,


ಈ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರು ಅಪೋಲೊ ಆಸ್ಪತ್ರೆಯ ಮುಖ್ಯ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸಕರು ಆದ ಡಾ. ಸುನಿಲ್ ನಾರಾಯಣ ದತ್, ಹಿರಿಯ ಸಲಹೆಗಾರರಾದ ಡಾ.ಸುಮಿತ್ ಕುಮಾರ್ ಗೌರ್, ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸಕರಾದ ಡಾ. ದೀಕ್ಷಿತ್ ರಾಜಮೋಹನ್ ನೆರವೇರಿಸಿದರು. ಮತ್ತುಅರಿವಳಿಕೆ ಚಿಕಿತ್ಸೆಯನ್ನು ಡಾ. ಮುಮ್ತಾಜ್ ಅಹ್ಮದ್, ಆಡಿಯೋಲಾಜಿಕಲ್ ಮತ್ತು ಸ್ಪೀಚ್ ಪುನಶ್ಚೇತನ ಸಹಾಯವನ್ನು ಆಡಿಯಾಲಾಜಿಸ್ಟ್ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪಾಥಾಲಜಿಸ್ಟ್ ಕು.ನಿಮಲ್ಕಾ ಸಿಕ್ವೇರಾ ಒದಗಿಸಿದರು.


ಶಸ್ತ್ರಚಿಕಿತ್ಸಾ ನಂತರ ಮಗು ಉತ್ತಮವಾಗಿ ಚೇತರಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಇಂಪ್ಲಾಂಟ್ ಆಕ್ಟಿವೇಷನ್ (‘switch-on’) ಮ್ಯಾಪಿಂಗ್ ಸೆಷನ್‍ಗಳು ಹಾಗೂ ಆಡಿಟರಿ ವರ್ಬಲ್ ಥೆರಪಿ ಕಾರ್ಯಕ್ರಮದಲ್ಲಿ ಬಾಗವಹಿಸಲಿದೆ. ಇಎನ್‍ಟಿ ಕಾಕ್ಲಿಯರ್ ಇಂಪ್ಲಾಂಟ್ ಮತ್ತು ಸ್ಕಲ್ ಬೇಸ್ ಸರ್ಜರಿ ವಿಭಾಗವು ಬಾಲ್ಯವಯಸ್ಕರಿಗಾಗಿ ವಿಶೇಷವಾಗಿ ನಿರ್ಮಿಸಲಾದ ಅತ್ಯಾಧುನಿಕ ಕಾಕ್ಲಿಯರ್ ಇಂಪ್ಲಾಂಟ್ ಆಡಿಟರಿ ವರ್ಬಲ್ ಥೆರಪಿ ಕೇಂದ್ತವನ್ನು ಹೊಂದಿದ್ದು ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಿದೆ.


ಈ ಸಾಧನೆ ಕುರಿತು ಯೆನೆಪೋಯ ಪರಿಗಣಿತ ವಿಶ್ವ ವಿದ್ಯಾನಿಲಯದ ಚಾನ್ಸಲರ್ ಡಾ. ಯೆನೆಪೋಯ ಅಬ್ದುಲ್ಲಾ ಕುಂಞ, ಪ್ರೊ-ಚಾನ್ಸಲರ್ ಶ್ರೀ ಫರ್ಹಾದ್ ಯೆನೆಪೋಯ, ಪ್ರೊ-ಚಾನ್ಸಲರ್ ಡಾ. ಎಂ. ವಿಜಯಕುಮಾರ್, ವೈಸ್ ಚಾನ್ಸಲರ್ ಡಾ. ಕೆ.ಎಸ್. ಗಂಗಾಧರ ಸೋಮಯಾಜಿ ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಹಬೀಬ್ ರಹಮಾನ್ ಸಂತೋಷ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕುತ್ತಾರು: ಆದಿಸ್ಥಳ ಸ್ವಾಮಿ ಕೊರಗಜ್ಜ ದೇವಸ್ಥಾನ ಪರಿಸರದಲ್ಲಿ ಆದಿಸ್ಥಳ ಕೊರಗಜ್ಜ ಸೇವಾ ಕ್ಲಿನಿಕ್ ಆರಂಭ

ಕುತ್ತಾರು: ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಆರೋಗ್ಯ ಸೇವಾ ಕೇಂದ್ರಗಳ ಅಗತ್ಯತೆಯಿದ್ದು, ಸಮಾಜಮುಖಿ...

ಅವ್ಯವಸ್ಥೆಯ ಅಗರವಾದ ಮಂಗಳೂರು ಮೀನುಗಾರಿಕಾ ದಕ್ಕೆ, ಮೀನುಗಾರಿಕಾ ಜಂಟಿ ನಿರ್ದೇಶಕರನ್ನು ಭೇಟಿಯಾದ ಎಸ್.ಡಿ.ಟಿ.ಯು ಜಿಲ್ಲಾ ನಿಯೋಗ.

ಮಂಗಳೂರು, ಫೆ25: ಮಂಗಳೂರಿನ ದಕ್ಕೆಯಲ್ಲಿ ಕಂಬ ಬಿದ್ದ ದುರ್ಘಟನೆಯಲ್ಲಿ ಮೀನು ಕಾರ್ಮಿಕನಾದ...

ಪರ್ತಿಪ್ಪಾಡಿ ಮನೆತನದ ಧೀಮಂತ ನಾಯಕ ಅಗಲಿ ಈ ರಮಳಾನ್ ಗೆ ಹದಿನೆಂಟು ವರ್ಷ

ಮಂಜನಾಡಿ: ಪರ್ತಿಪ್ಪಾಡಿ ಮಹ್ಮೂದ್ ಹಾಜಿ ಮನೆತನ ಅಂದರೆ ಇಡೀ ಜಿಲ್ಲೆಯಲ್ಲೇ...

ಅಲೇರಿ ಮೂಲ ಕ್ಷೇತ್ರಕ್ಕೆ 10.ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸ್ಪೀಕರ್ ಮತ್ತು ಸಚಿವರಿಗೆ ಮನವಿ

ಬೆಂಗಳೂರು: ಉಳ್ಳಾಲ ತಾಲೂಕು ಅಲೇರಿ ಮೂಲ ಕ್ಷೇತ್ರದ ಅಧ್ಯಕ್ಷರಾದ ಶಿವರಾಜ್ ಪಿ.ಬಿ....