ಬ್ರಹ್ಮರಕೊಟ್ಲು ಟೋಲ್ ವಿರುದ್ಧ ರಮಾನಾಥ ರೈ ನೇತೃತ್ವದ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ ದ.ಕ.ಜಿಲ್ಲಾ ಟೋಲ್ ವಿರೋಧಿ ಹೋರಾಟ ಸಮಿತಿ

Date:

ಬಂಟ್ವಾಳ: ಕರ್ನಾಟಕ ಸರಕಾರದ ಮಾಜಿ ಸಚಿವರಾದ ರಾಮಾನಾಥ ರೈಯವರ ನೇತ್ರತ್ವದಲ್ಲಿ ಮಂಗಳವಾರ ಟೋಲ್ ಗೇಟ್ ಬಳಿ ನಡೆಯಲಿರುವ ಧರಣಿ ಸತ್ಯಾಗ್ರಹಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಟೋಲ್ ವಿರೋಧಿ ಹೋರಾಟ ಸಮಿತಿಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಸಮಿತಿಯ ಸಂಚಾಲಕರಾದ ಸುಹೇಲ್ ಕಂದಕ್ ತಿಳಿಸಿದ್ದಾರೆ. ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಟೋಲ್ ಗೇಟ್ ತೆರವುಗಾಗಿ ಮಾಡುವ ಜನಪರವಾದ ಹೋರಾಟದಲ್ಲಿ ನಾವು ಭಾಗಿಯಾಗುತ್ತೇವೆ ಮತ್ತು ಟೋಲ್ ತೆರವು ಮಾಡುವವರೆಗೆ ಹೋರಾಟ ಮುಂದುವರೆಸುತ್ತೇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅವೈಜ್ಞಾನಿಕ ಮತ್ತು ಕಾನೂನುಬಾಹಿರ ರೀತಿಯಲ್ಲಿ ಟೋಲ್ ನಿರ್ಮಿಸಿ ಕಳೆದ ಹದಿಮೂರು ವರ್ಷಗಳಿಂದ ಕಾರ್ಯಚರಣೆ ಮಾಡುತ್ತಿದೆ ಎಂದು ಆರೋಪ ವ್ಯಕ್ತಪಡಿಸಿದರು. ಟೋಲ್ ಗೇಟ್ ನಲ್ಲಿ ಕುಡಿಯುವ ನೀರು ಸಹಿತ ಯಾವುದೇ ಮೂಲಭೂತವಾದ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಳ್ಳದೆ ಹಣವಸೂಲಿ ಕೇಂದ್ರದ ಮಾದರಿಯಲ್ಲಿ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕರುಗಳಾದ ಅನ್ವರ್ ಸಾದತ್ ಬಜತ್ತೂರು, ನ್ಯಾಯವಾದಿ ಉಮೇಶ್ ಗೌಡ, ಧನುರಾಜ್, ಹೋರಾಟ ಸಮಿತಿ ಸದಸ್ಯರಾದ ಹನೀಫ್ ಖಾನ್ ಕೊಡಾಜೆ,ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕುಣಿತ ಭಜನೆ ವೇಳೆ ಕುಸಿದು ಬಿದ್ದು ಮಹಿಳೆ ಮೃತ್ಯು

ಸುಳ್ಯ: ದೇವಸ್ಥಾನದ ಜಾತ್ರೋತ್ಸವದ ವೇಳೆ ಕುಣಿತ ಭಜನೆ ಮಾಡುತ್ತಿದ್ದ ಮಹಿಳೆಯೊಬ್ಬರು ಕುಸಿದು...

ಮಲಾರ್ ಮಸೀದಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಉಳ್ಳಾಲ: ಹರೇಕಳ ಗ್ರಾಮದಲ್ಲಿ ಹಿಂದೆ ಮಣ್ಣಿನ ರಸ್ತೆಯಾಗಿದ್ದ ಮಾರ್ಗಗಳೆಲ್ಲವೂ ಈಗ ಕಾಂಕ್ರೀಟ್...

ಕೆ.ಎಂ.ಕೆ ಮಂಜನಾಡಿಯವರಿಗೆ ಸಂಘಟನಾ ಸ್ಪೂರ್ತಿ ಪ್ರಶಸ್ತಿ

ಉಳ್ಳಾಲ: ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರು ಸೈಯದ್...