ಪಡುಕೊಣಾಜೆಯಲ್ಲಿ ಸಮವಸರಣ ಸಾಹಿತ್ಯ ವೇದಿಕೆ ಉದ್ಘಾಟನೆ: ‘ಹೇ ರಾಮ್’ ಕವನ ಸಂಕಲನ ಬಿಡುಗಡೆ

Date:

ಮೂಡಬಿದಿರೆ: ಸಾಹಿತಿಗಳಾದ ಟಿಎನ್ ಖಂಡಿಗೆ-ಕವಿತಾ ಕೂಡ್ಲು ದಂಪತಿಯ ಪಡುಕೊಣಾಜೆಯಲ್ಲಿರುವ ‘ಕೇವಲ ಮನೆ’ಯಲ್ಲಿ ಸಮವಸರಣ ಸಾಹಿತ್ಯ ವೇದಿಕೆ ಉದ್ಘಾಟನೆ ಮತ್ತು ಹಿರಿಯ ಸಾಹಿತಿ ನಾ.ಮೊಗಸಾಲೆ ಅವರು ಬರೆದ ‘ಹೇ ರಾಮ್’ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಲೇಖಕ ಬಿ.ಪಿ ಸಂಪತ್ ಕುಮಾರ್ ಸಮವಸರಣ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿದರು.

ಸಾಹಿತಿ ನಾ.ಮೊಗಸಾಲೆ ಮಾತನಾಡಿ ಕನ್ನಡ ಸಾಹಿತ್ಯ ಈಗ ಎಡ ಮತ್ತು ಬಲದಲ್ಲಿ ಸಿಲುಕಿ ಉಸಿರು ಕಟ್ಟಿದ ಸ್ಥಿತಿಯಲ್ಲಿದೆ. ಈ ನಡುವೆ ಕಾವ್ಯದ ಘನತೆ ಕುಂದುತ್ತಿದೆ. ಕಾವ್ಯದ ಜೊತೆ ಸಂವಾದ ಮತ್ತು ಸಂವಹನ ಇಲ್ಲದಾಗುತ್ತಿದೆ. ಪಿಎಚ್‌ಡಿ ಪ್ರಬಂಧಕ್ಕೆ ಮತ್ತು ಸಾಹಿತ್ಯ ವಿದ್ಯಾರ್ಥಿಗಳ ಕಲಿಕೆಗೆ ಮಾತ್ರ ಕವಿತೆ ಸೀಮಿತ ಎಂಬಂತಾಗಿದೆ ಎಂದರು. ಬದುಕು ಅನೇಕ ಪಾಠಗಳನ್ನು ಕಲಿಸಿದ್ದು, ಅನುಭವದ ಆಧಾರದಲ್ಲಿ ಅದನ್ನೆಲ್ಲ ದಾಖಲಿಸುವ ಯೋಜನೆ ಹಾಕಿರುವುದಾಗಿ ತಿಳಿಸಿದರು.

ಸಂಕಲನದ 7 ಕವನಗಳನ್ನು ಸಾಹಿತಿಗಳು, ಅಧ್ಯಾಪಕರು ಮತ್ತು ಸಾಹಿತ್ಯ ವಿದ್ಯಾರ್ಥಿಗಳು ಓದಿ ಕವಿತೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಡಿ.ವಿ ಪ್ರಕಾಶ್, ಸುಧಾರಾಣಿ, ಹರೀಶ್ ಟಿ.ಜಿ, ರವಿಶಂಕರ್ ಜಿ.ಕೆ, ಅಮೃತಾ, ಅಭ್ಯುದಯ ಮತ್ತು ಕವಿತಾ ಕೂಡ್ಲು ಕವನ ವಾಚಿಸಿದರು. ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಮಾತನಾಡಿದರು. ಪ್ರಾಂಶುಪಾಲ, ಲೇಖಕ ಜನಾರ್ದನ ಭಟ್ ಉಪಸ್ಥಿತರಿದ್ದರು.

ಸಮವಸರಣ ಸಾಹಿತ್ಯ ವೇದಿಕೆಯ ಸ್ಥಾಪಕರಾದ ಟಿ.ಎನ್ ಖಂಡಿಗೆ ಸ್ವಾಗತಿಸಿದರು. ಯೋಗೀಶ್ ಕೈರೋಡಿ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೂರು ವರ್ಷಗಳ ಬಳಿಕ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮೂರು ವರ್ಷಗಳ ಬಳಿಕ ಕೆಪಿಸಿಸಿ...

ಕನಿಷ್ಠ ಎರಡು ಪರಿಷತ್ ಸ್ಥಾನ, ಒಂದು ರಾಜ್ಯಸಭಾ ಸ್ಥಾನ ಮುಸ್ಲಿಮರಿಗೆ ಕೊಡಿ: ಕಾಂಗ್ರೆಸ್‌ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 42 ರೂ. ಏರಿಕೆ

ಹೊಸದಿಲ್ಲಿ: 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಂದಿನಿಂದಲೇ ಜಾರಿಗೆ...