ವೆಕೇಶನ್ ಕ್ಯಾಂಪ್ ಮಾನಸಿಕವಾಗಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದೆ ಎಸ್.ಎಂ.ಎ ರಾಜ್ಯ ಉಪಾಧ್ಯಕ್ಷರು

Date:

ವಿಟ್ಲ: ದಾರುನ್ನ ಜಾತ್ ಟಿಪ್ಪು ನಗರ ಸಂಸ್ಥೆಯ ಆಧೀನದಲ್ಲಿರುವ ಅಲ್ ಮದರಸತ್ತುನ್ನವವಿಯ್ಯ ಟಿಪ್ಪು ನಗರ ಮದರಸ ವಿದ್ಯಾರ್ಥಿಗಳ ವೆಕೇಷನ್ ಕ್ಯಾಂಪ್ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಎಸ್ಎಂಎ ರಾಜ್ಯ ಉಪಾಧ್ಯಕ್ಷರು ದಾರುನ್ನಜಾತ್ ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಮಾತನಾಡಿ ಎಸ್.ಜೆ.ಎಂ ರಾಜ್ಯಾದ್ಯಂತ ಮದರಸಗಳಲ್ಲಿ ವೆಕೇಷನ್ ಕ್ಯಾಂಪ್ ನಡೆಸಲು ನಿರ್ದೇಶನ ನೀಡಿರುವುದು ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬುವುದರ ಮೂಲಕ ಇವತ್ತಿನ ಕಾಲದಲ್ಲಿ ಪೂರ್ವಿಕರನ್ನು ಸ್ಮರಿಸುವುದು ಇಸ್ಲಾಮಿನ ಆಚಾರ ವಿಚಾರಗಳನ್ನು ಅಳವಡಿಸುವುದರ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದಕ್ಕಾಗಿ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳ ಮೂಲಕ ಪ್ರಜ್ಞೆ ಮೂಡಿಸುವ ಕಾರ್ಯಕ್ರಮ ಶ್ಲಾಘನೀಯ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದರ್ ಉಸ್ತಾದ್ ಅಬ್ದುಲ್ ರಹಮಾನ್ ಉಮೈದಿ ವಹಿಸಿದ್ದರು. ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಮಕ್ಬರ ಪ್ರಾರ್ಥನೆಗೆ ದಾರುನ್ನಜಾತ್ ಮುದರಿಸ್ ಅಸಯ್ಯದ್ ಶಮೀಮ್ ತಂಙಳ್ ನೇತೃತ್ವ ನೀಡಿದರು. ಅಧ್ಯಾಪಕರಾದ ಅಬ್ದುಲ್ ರಝಾಕ್ ಅಮ್ಜದಿ ಹಾಗೂ ಉಸ್ಮಾನ್ ಲತೀಪಿ ವಿಷಯ ಮಂಡಿಸಿದರು. ವಿವಿಧ ಧಾರ್ಮಿಕ ಸಾಮಾಜಿಕ ಸಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಯಶಸ್ವಿಯಾಗಿ ಮದರಸ ವಿದ್ಯಾರ್ಥಿಗಳ ವೆಕೇಶನ್ ಕ್ಯಾಂಪ್ ನಡೆಯಿತು. ಕೊನೆಯಲ್ಲಿ ಪ್ರಾರ್ಥನೆ ನಡೆಸಿ, ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೂರು ವರ್ಷಗಳ ಬಳಿಕ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮೂರು ವರ್ಷಗಳ ಬಳಿಕ ಕೆಪಿಸಿಸಿ...

ಕನಿಷ್ಠ ಎರಡು ಪರಿಷತ್ ಸ್ಥಾನ, ಒಂದು ರಾಜ್ಯಸಭಾ ಸ್ಥಾನ ಮುಸ್ಲಿಮರಿಗೆ ಕೊಡಿ: ಕಾಂಗ್ರೆಸ್‌ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 42 ರೂ. ಏರಿಕೆ

ಹೊಸದಿಲ್ಲಿ: 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಂದಿನಿಂದಲೇ ಜಾರಿಗೆ...