ಉಳ್ಳಾಲ ಹೋಬಳಿ ಪ್ರೌಢಶಾಲಾ ವಿಭಾಗದ ಥ್ರೋಬಾಲ್ ಪಂದ್ಯಾಟ

Date:

ಥ್ರೋಬಾಲ್ ಪಂದ್ಯಾಟ ರಾಜ್ಯಮಟ್ಟಕ್ಕೆ ಸೀಮಿತ ಆಗಿರುವ ಕಾರಣ ಕೊನೆಯದಾಗಿ ಪಂದ್ಯಾಟ ನಡೆಸಲಾಗುತ್ತದೆ, ಆದರೆ ಪರೀಕ್ಷೆಗಳು ಇರುವುದರಿಂದ ಒಂದಷ್ಟು ಬೇಗ ಅಯೋಜಿಸಲಾಗಿದೆ, ಯಾವುದೇ ಕಾರ್ಯಕ್ರಮದ ಜವಾಬ್ದಾರಿ ನೀಡಿದಾಗ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಗಳು ನೀಡುವ ಆತಿಥ್ಯ ಇತರ ಶಾಲೆಗಳಿಗೆ ಮಾದರಿ ಎಂದು ದೈಹಿಕ ಶಿಕ್ಷಣ ತಾಲೂಕು ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯ್ಸ್ ಶ್ಲಾಘಿಸಿದರು.
ದ.ಕ.ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಇಲಾಖೆ, ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿರಿಗಳ ಕಚೇರಿ, ಅನುದಾನಿತ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ
ಕೋಟೆಪುರ ಟಿಪ್ಪು ಸುಲ್ತಾನ್ ಶಾಲಾ ವಠಾರದಲ್ಲಿ ಸೋಮವಾರ ನಡೆದ ಉಳ್ಳಾಲ‌ ಹೋಬಳಿ ಮಟ್ಟದ ಪ್ರೌಢಶಾಲಾ ಬಾಲಕ- ಬಾಲಕಿಯರ ಥ್ರೋಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಮಳೆಯಿಂದಾಗಿ ನಿರಂತರ ರಜೆಯ ಕಾರಣ ಕಾರ್ಯಕ್ರಮ ನಡೆಸಲು ತೊಂದರೆಯಾದರೂ ಥ್ರೋಬಾಲ್ ಪಂದ್ಯಾಟ ಅಚ್ಚುಕಟ್ಟಾಗಿ ಅಯೋಜಿಸಲಾಗಿದೆ ಎಂದು ತಿಳಿಸಿದರು.
ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಸಂಯೋಜಕ ಎಂ.ಎಚ್.‌ಮಲಾರ್ ಅಧ್ಯಕ್ಷತೆ ವಹಿಸಿ, ಈಗಾಗಲೇ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಯಲ್ಲಿ ವಾಲಿಬಾಲ್ ಪಂದ್ಯಾಟ ನಡೆದಿದ್ದು ಈಗ ಎರಡನೆಯದಾಗಿ ಥ್ರೋಬಾಲ್ ಪಂದ್ಯಾಟ ಅಯೋಜಿಸಲಾಗಿದೆ, ಕ್ರೀಡಾಕೂಟಗಳು ಶಿಕ್ಷಣಕ್ಕೆ ಪೂರಕವಾಗಿದ್ದು ಕೇವಲ ದೈಹಿಕ ಶಿಕ್ಷಣ ಶಿಕ್ಷಕರಿಗೆ ಮಾತ್ರ ಸೀಮಿತಗೊಳಿಸದೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಈ ಸಂದರ್ಭ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಜತೆಕಾರ್ಯದರ್ಶಿ ಅಬ್ದುಲ್ ಅಝೀಝ್,
ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷೆ ಜಯವಂತಿ ಸೋನ್ಸ್, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆಎಂಕೆ ಮಂಜನಾಡಿ, ಸಿಆರ್ ಪಿ ಮೋಹನ್ ಶಿರ್ಲಾಲ್, ರಾಜ್ಯ ಕಾರ್ಯದರ್ಶಿ ತ್ಯಾಗಂ ಹರೇಕಳ, ತಾಲೂಕು ಕಾರ್ಯದರ್ಶಿ ಮೋಹನ್ ಶಿರ್ಲಾಲ್, ನೋಡೆಲ್ ಅಧಿಕಾರಿ ರಾಜೀವ ನಾಯಕ್, ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಗಳ ಮುಖ್ಯ ಶಿಕ್ಷಕರಾದ ನಸೀಮಾ, ರಮ್ಲತ್ ಬಾನು ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಗೀತಾ ಡಿ.ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಅಖಿಲ್ ವಂದಿಸಿದರು. ಚಿತ್ರಕಲಾ ಶಿಕ್ಷಕ ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...