ಉಳ್ಳಾಲ: ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿಯ ಅಂಗ ಸಂಸ್ಥೆಯಾದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ದೇರಳಕಟ್ಟೆ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದೇರಳಕಟ್ಟೆ ಬದ್ರಿಯಾ ಜುಮಾಮಸೀದಿ ಸಭಾಂಗಣದಲ್ಲಿ ನಡೆಯಿತು.

ಬದ್ರಿಯಾ ಜುಮಾ ಮಸೀದಿಯ ಖತೀಬ್ ತಾಜುದ್ದೀನ್ ರಹ್ಮಾನಿ ಉಸ್ತಾದ್ ದುಆ ನೆರವೇರಿಸಿದರು. ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ .ಆರ್ ಅಹ್ಮದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಲತೀಫ್ ಯಾಸೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಉಪಾಧ್ಯಕ್ಷರಾದ ರಶೀದ್ ಡಿ ಎಂ ಪ್ರಾಸ್ತಾವಿಕಮಾತುಗನ್ನಾಡಿದರು. ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಖತೀಜಾ ಸಲ್ವಾ ರವರನ್ನು ಸನ್ಮಾನಿಸಲಾಯಿತು.

ದೇರಳಕಟ್ಟೆ ಪಬ್ಲಿಕ್ ಸ್ಕೂಲ್ 2025- 26 ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಶ್ರೇಣಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿದ 20 ವಿದ್ಯಾರ್ಥಿಗಳಿಗೆಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಒಂದು ವರ್ಷದ ಕಾರ್ಯವೈಖರಿಯನ್ನು ಮನಗಂಡು ನೀಡುವ 2026ರ ಸ್ಟಾರ್ ಆಫ್ ಅನ್ಸಾರ್ ಪ್ರಶಸ್ತಿಯನ್ನು ಸಂಸ್ಥೆಯ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಹನೀಫ್ ಜೆ ಅವರಿಗೆ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಡಾ. ಅಬ್ದುಲ್ ಶಕೀಲ್, ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಅಬೂಬಕ್ಕರ್ ನಾಟೆಕಲ್ ,ದೇರಳಕಟ್ಟೆ ಪಬ್ಲಿಕ್ ಸ್ಕೂಲ್ ಇದರ ಪ್ರಾಂಶುಪಾಲ್ ಜಬ್ಬಾರ್, ಬೆಳ್ಮ ಗ್ರಾ.ಪಂ ಮಾಜಿ ಅಧ್ಯಕ್ಷ ಸಿ ಎಂ ಅಬ್ದುಲ್ ಸತ್ತಾರ್,

ಮಾಜಿ ಸದಸ್ಯರಾದ ಇಕ್ಬಾಲ್ ಹೆಚ್ ಆರ್, ಹನೀಫ್ ಬದ್ಯಾರ್ ,ಇಬ್ರಾಹಿಂ ಬದ್ಯಾರ್ , ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಉಪಾಧ್ಯಕ್ಷ ಅಬೂಬಕ್ಕರ್ ಪೋಯಿದೇಲ್, ಕೋಶಾಧಿಕಾರಿ ಬಶೀರ್ ಹೆಚ್, ಅಸೋಸಿಯೇಷನ್ ಲೆಕ್ಕಪರಿಶೋಧಕ ಉಸ್ಮಾನ್ ಎಂ ಹೆಚ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಅಬೂಬಕ್ಕರ್ ಎಂ.ಹೆಚ್ ,ಮಾಜಿ ಉಪಾಧ್ಯಕ್ಷ ಇಸ್ಮಾಯಿಲ್ ರಹಮತುಲ್ಲಾ ಸದಸ್ಯರಾದ ಮುನೀರ್ ಯಾಸೀನ್,ಹನೀಫ್ 2588, ಅಬೂಬಕ್ಕರ್ ಪಿ ಕೆ, ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಸದಸ್ಯ ನೌಫಲ್ ಬಿ, ಬದ್ರಿಯಾ ಜುಮಾ ಮಸೀದಿ ಮುಹಝಿನ್ ಉಬೈದುಲ್ಲಾ ,ದೇರಳಕಟ್ಟೆ ಪಬ್ಲಿಕ್ ಸ್ಕೂಲ್ ಇದರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬದ್ರಿಯಾ ಜುಮಾ ಮಸೀದಿಯ ಜಮಾತ್ ಸದಸ್ಯರು ಉಪಸ್ಥಿತರಿದ್ದರು .ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮುತ್ತಲಿಬ್ ಸ್ವಾಗತಿಸಿದರು . ಜೊತೆ ಕಾರ್ಯದರ್ಶಿ ಶಿಹಾಬುದ್ದೀನ್ ದೇರಳಕಟ್ಟೆ ರವರು ಕಾರ್ಯಕ್ರಮ ನಿರೂಪಿಸಿದರು.


