ಬೀದಿ ನಾಯಿಗಳ ಉಪಟಳ ನಿಯಂತ್ರಣಕ್ಕೆ ತುರ್ತು ಕ್ರಮ ಅಗತ್ಯ : ಎಸ್‌ಡಿಪಿಐ

Date:

ಬಂಟ್ವಾಳ: ಸಜಿಪಮೂಡ ಗ್ರಾಮದ ಕಾರಜೆ, ಪಣೊಲಿಬೈಲ್, ಬೊಳ್ಳಾಯಿ, ಕಂಚಿಲ, ನಗ್ರಿ, ಜಾಡಕೊಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೀದಿ ನಾಯಿಗಳ ಉಪಟಳ ದಿನೇ ದಿನೇ ಮಿತಿ ಮೀರಿದೆ. ವಿಶೇಷವಾಗಿ ಬೊಳ್ಳಾಯಿ ಪೇಟೆ ಪ್ರದೇಶದಲ್ಲಿ ಶಾಲಾ-ಕಾಲೇಜು, ಮದ್ರಸ, ದೇವಾಲಯ, ಮಸೀದಿಗಳಿಗೆ ಬರುವ ಯಾತ್ರಾರ್ಥಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ನಾಯಿಗಳಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ.

ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರನ್ನು ಬೆನ್ನಟ್ಟಿ ಬೀದಿ ನಾಯಿಗಳು ಅಟ್ಟಾಡಿಸುವ ಘಟನೆಗಳು ಸಂಭವಿಸುತ್ತಿದ್ದು, ಯಾವುದೇ ಕ್ಷಣದಲ್ಲೂ ಗಂಭೀರ ಅಪಘಾತಗಳು ಸಂಭವಿಸುವ ಭೀತಿ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡು ಬೀದಿ ನಾಯಿಗಳ ನಿಗ್ರಹಕ್ಕಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಎಸ್‌ಡಿಪಿಐ ಬಂಟ್ವಾಳ ವಿಧಾನಸಭ ಕ್ಷೇತ್ರ ಸಮಿತಿ ಸದಸ್ಯರಾದ ಬಶೀರ್ ಬೊಳ್ಳಾಯಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜುಲೈ 20: ಕಲ್ಲಡ್ಕ ಮಸೀದಿಯ ನೂತನ ಖಾಝಿಯಾಗಿ ಜಿಫ್ರಿ ಮುತ್ತುಕೋಯಾ ತಂಙಳ್ ಅಧಿಕಾರ ಸ್ವೀಕಾರ

ಬಂಟ್ವಾಳ: ಇತ್ತೀಚೆಗೆ ನಿಧನರಾದ ಶೈಖುನಾ ತ್ವಾಖಾ ಉಸ್ತಾದ್ ಅವರ ಉತ್ತರಾಧಿಕಾರಿಯಾಗಿ ಕಲ್ಲಡ್ಕ...

ಉಚ್ಚಿಲ: ಸೋಮೇಶ್ವರ ಪೆಟ್ರೋಲ್ ಪಂಪ್‌ನಲ್ಲಿ ಸ್ಪೀಡ್-೧೦೦ ಮಾರುಕಟ್ಟೆಗೆ ಬಿಡುಗಡೆ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಪರಿಚಯಿಸಿರುವ ಅತಿ ಉನ್ನತ ಮಟ್ಟದ...

ಟಿಪ್ಪುನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ ವಾರ್ಷಿಕೋತ್ಸವದ ಸ್ವಾಗತ ಸಮಿತಿ ರಚನೆ

ವಿಟ್ಲ: ವಿಟ್ಲದ ಟಿಪ್ಪು ನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ...