ಪನೀರ್ ನಲ್ಲಿ ಕಥೋಲಿಕ್ ಸಭಾದಿಂದ ಶಿಕ್ಷಕರಿಗೆ ಗೌರವಾರ್ಪಣೆ

Date:

ಉಳ್ಳಾಲ‌: ಹಿಂದೆ ಯಾವುದೇ ಶುಲ್ಕ ಪಡೆಯದೆ ಜನರನ್ನು ಸುಶಿಕ್ಷಿತಗೊಳಿಸಲು ಶಿಕ್ಷಕರು ಜೀವನ‌ ಮುಡಿಪಾಗಿಟ್ಟಿದ್ದರು. ಪನೀರ್ ಚರ್ಚ್ ವ್ಯಾಪ್ತಿಯಲ್ಲಿ ಅತ್ಯಧಿಕ ಶಿಕ್ಷಕರು ಇರುವುದು ಹೆಮ್ಮೆಯ ವಿಚಾರ ಎಂದು ಚರ್ಚ್ ಧರ್ಮಗುರು ಫಾದರ್ ವಿಕ್ಟರ್ ಡಿಮೆಲ್ಲೋ ಅಭಿಪ್ರಾಯಪಟ್ಟರು.
ಪಾನೀರ್ ದಯಾಮಾತೆ ದೇವಾಲಯ ಮತ್ತು ಮಂಗಳೂರು ಪ್ರದೇಶ ಕಥೋಲಿಕ್ ಸಭಾ ಪಾನೀರ್ ಘಟಕದ ಆಶ್ರಯದಲ್ಲಿ ಭಾನುವಾರ ಪನೀರ್ ಚರ್ಚ್ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ಶಿಕ್ಷಕ ಎನ್ನುವುದು ವೃತ್ತಿಯಲ್ಲ, ಇದೊಂದು ಸೇವೆ.
ಓರ್ವ ವ್ಯಕ್ತಿಯ ಭವಿಷ್ಯ ರೂಪಿಸುವ ಶಿಕ್ಷಕರು ಯಾವ ರೀತಿಯಲ್ಲಿ ನೋಡಿದರೂ ಅತ್ಯಂತ ಶ್ರೇಷ್ಠರು ಎಂದು ತಿಳಿಸಿದರು.
ಈ ಸಂದರ್ಭ 65 ಶಿಕ್ಷಕರನ್ನು ಗೌರವಿಸಲಾಯಿತು.
ಮಂಗಳೂರು ಪ್ರದೇಶ ಕಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, 21 ಆಯೋಗದ ಸಂಯೋಜಕ ರೋನಾಲ್ದ್ ಡಿಸೋಜ, ಆಸಿಸಿ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲೆ ಶಾಂತಿ ವಿಲ್ಮಾ ಅಲ್ಮೇಡ, ಪ್ರದೇಶ ಕಥೋಲಿಕ್ ಸಭಾ ಮಾಜಿ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಡಿಸೋಜ, ಕಾರ್ಯಕ್ರಮ ಪ್ರಯೋಜಕರು ರೆಮ್ಮಿ ಲೋಬೋ, ಅಶ್ವಿನ್ ಮೊಂತೆರೋ, ಕಾರ್ಯಕ್ರಮ ಸಂಚಾಲಕರಾ ಫೆಲಿಕ್ಸ್‌ ಡಿಸೋಜ ಉಪಸ್ಥಿತರಿದ್ದರು.
ಕಥೊಲಿಕ್ ಸಭಾ ಘಟಕಧ್ಯಕ್ಷ ಐವನ್ ಮೊಂತೆರೋ ಸ್ವಾಗತಿಸಿದರು. ವೈಲೆಟ್ ಡಿಸೋಜ ವಂದಿಸಿದರು. ರೇಷ್ಮಾ ಸಂತನೆಸ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...