ಬೆಂಗಳೂರಿನಲ್ಲಿ ಎಐ ಶೃಂಗಸಭೆ: ಡಾ. ಯು.ಟಿ ಖಾದರ್ ಉದ್ಘಾಟನೆ

Date:

ಬೆಂಗಳೂರು: ಗ್ರಾ.ಪಂಚಾಯತ್ ಸೇರಿದಂತೆ ಸರ್ಕಾರದ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಎಐ ವ್ಯವಸ್ಥೆ ಅಳವಡಿಕೆ ಅನಿವಾರ್ಯವಾಗಿದೆ, ನಾನು ವಿಧಾನಸಭಾ ಸ್ಪೀಕರ್ ಆಗಿದ್ದಾಗ ಸದನದಲ್ಲಿ ಮಂತ್ರಿ ಹಾಗು ಶಾಸಕರ ಚಲನಾವಲನ ಪರೀಶೀಲಿಸಲು ಎಐ ಕ್ಯಾಮರ ಅಳವಡಿಸಿದ್ದೆ, ಮುಂದಿನ ದಿನಗಳಲ್ಲಿ ಪ್ರತಿ ಶಾಸಕಾಂಗ ಮಂತ್ರಿಗಳಿಗೂ ಎಐ ಕಾರ್ಯದರ್ಶಿಗಳನ್ನು ನೇಮಿಸುವ ಅಗತ್ಯತೆ ಇದೆ ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ನಗರದ ಐಟಿಸಿ ವಿಂಡ್ಸರ್ ಹೋಟೆಲ್ ನಲ್ಲಿ ರೀಜೆನೆಸಿಸ್ ಎಐ ಸಂಸ್ಥೆ ನಡೆಸಿದ “ಎಐ ಫಾರ್ ವಿಕಸಿತ ಭಾರತ್” ಸಿಎಕ್ಸ್ಒ ಶೃಂಗಸಭೆಯನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.

ಎಐ ಎಂಬುವುದು ಬರೀ ಇಂಜಿನಿಯರ್ ಗಳ ಬಳಕೆಗೆ ಮಾತ್ರ ಉಳಿದಿಲ್ಲ ಜನ ಸಾಮಾನ್ಯರಿಗೂ ಬಹಳ‌ ಪರಿಣಾಮಕಾರಿಯಾದ ಬಳಕೆಗೆ ಯೋಗ್ಯವಾಗಿದೆ‌. ಕನಿಷ್ಠ ವಿದ್ಯಾರ್ಹತೆ ಪಡೆದವರೂ ಇಂದು ಎಐ ಮೂಲಕ ಜಗತ್ತಿನ ಹಲವಾರು ಕ್ಷೇತ್ರಗಳ ಜ್ಞಾನವನ್ನು ಸುಲಭ ಹಾಗು ತ್ವರಿತವಾಗಿ‌ ಪಡೆಯುತ್ತಿದ್ದಾರೆ‌. ಎಐಯಿಂದ ಉದ್ಯೋಗ ಕುಸಿಯುವ ಭೀತಿಯಿದೆಯಾದರೂ ಇದು ಸಂಪೂರ್ಣವಾಗಿ ಒಪ್ಪುವ ವಿಷಯವಲ್ಲ, ಎಐಯಿಂದ ತಮ್ಮ ಕೆಲಸಗಳನ್ನು ಇನ್ನಷ್ಟು ಉತ್ತಮ ಹಾಗು ಆಕರ್ಷಕವಾಗಿ ಮಾಡಿ ಮುಗಿಸಬಹುದಾಗಿದೆ‌.

1956ರಲ್ಲೇ ಅಮೇರಿಕಾದಂತಹ ದೇಶಗಳಲ್ಲಿ ಎಐ ಬಗ್ಗೆ ಚಿಂತನೆ ನಡೆದಿರುವ ಬಗ್ಗೆ ಉಲ್ಲೇಖಗಳಿವೆ, ನಮ್ಮ ದೇಶದ ಬಹುದೊಡ್ಡ ಶಕ್ತಿ ನಮ್ಮಲ್ಲಿರುವ ಅಧಿಕ ಪ್ರಾದೇಶಿಕ ಭಾಷೆಗಳು. ಇವುಗಳನ್ನು ಎಐ ಮೂಲಕ ಜಗತ್ತಿಗೆ ಪರಿಚಯಿಸುವ ಕಾರ್ಯ ಮಾಡಬೇಕಾಗಿದೆ‌. ಭವಿಷ್ಯದಲ್ಲಿ ದೇಶದ ಜನರ ಎಲ್ಲಾ ಸಮ್ಯಸ್ಯೆಗಳಿಗೂ ಎಐ ಪರಿಹಾರ ಒದಗಿಸುತ್ತೆ ಎಂಬ ನಂಬಿಕೆ ಇದೆ.

ರಾಷ್ಟ್ರದ ಸಂವೀಧಾನದ ಕಲಿಕೆಯನ್ನು ಎಐ ಕಾರ್ಯತಂತ್ರದ ಮೂಲಕ ಪಸರಿಸುವ ಅಗತ್ಯವಿದೆ, ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ಸರ್ಕಾರದಿಂದ ಲಭಿಸುವಂತೆ ಪ್ರಯತ್ನ ಮಾಡ್ತೀವಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೀಜೆನೆಸಿಸ್ ಸಂಸ್ಥೆಯ ರೀಜನ್ ಹೆಲ್ತ್ ಎಟಿಎಂ ಯಂತ್ರವನ್ನು ಉದ್ಘಾಟಿಸಿ ಸಚಿವರು ತನ್ನ ಆರೋಗ್ಯ ತಪಾಸಣೆ ಮಾಡಿಕೊಂಡರು. ಈ ಯಂತ್ರ ರಾಜ್ಯಸ ಪ್ರತಿಯೊಬ್ಬ ತಳಸ್ಥರದ ವ್ಯಕ್ತಿಗೂ ತಲುಪುವಂತೆ ಮಾಡಿ ಎಂದು ವಿನಂತಿಸಿದರು‌

ಕಾರ್ಯಕ್ರಮದಲ್ಲಿ ಸಂಸ್ಥೆಯ ರೀಜೆನೆಸಿಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ. ಮಾರ್ಕ್ ಸರವಂಜ, ಎಜುಟೆಕ್ ಮತ್ತು ಇಂಡಸ್ಟ್ರಿಯಲ್ ಐಜಿಯ ಸೀತಾರಾಮನ್, ಭಾರತ್ ಜಿಪಿಟಿಯ ಹಿರಿಯ ಉಪಾಧ್ಯಕ್ಷ ಶಶಾಂಕ್ ಠಾಕೂರ್, ವಿಪ್ರೊ infrastructure engineering ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಸುಂದರರಾಮನ್ ಗಣಪತಿರಾಮನ್, ಚಾರಾ‌ ಟೆಕ್ನಾಲಜಿ ಸಂಸ್ಥೆಯ ಸ್ಥಾಪಕ‌ ಹಾಗು ಸಿಇಒ ಭಕ್ತ ಕೇಶವಾಚಾರ್, ಯೊತ್ತ ಸಂಸ್ಥೆಯ ಮುಖ್ಯಸ್ಥ ಅಮಿತ್ ಮಿಶ್ರಾ, ಕೆಪಿಎಂಜಿ ಸಂಸ್ಥೆಯ ರಘು ನಂದನ್, ಗ್ರಾಂಟ್ ಥ್ರೋಂಟನ್ ತೆರಿಗೆ ಪಾಲುದಾರ ಕಲ್ಯಾಣ್ ಕುಮಾರ್, ಸಿಜಿಐ ಸಂಸ್ಥೆಯ ಹಿರಿಯ ಪಾಲುದಾರ ವೈಭವ್ ಮೋಹನ್, ರಾಕ್ ವೆಲ್ ಆಟೋಮೇಶನ್ ಸಂಸ್ಥೆಯ ಅಭಿಷೇಕ್ ಮಿಶ್ರಾ, ರೀಜೆನೆಸಸ್ ಸಂಸ್ಥೆಯ ಮುಖ್ಯ ತಾಂತ್ರಿಕಾಧಿಕಾರಿ ಕಪಿಲ್ ಸೂರಿ, ನಿರ್ದೇಶಕ ಹರ್ಷ ರಾವ್, ಸಚಿನ್ ತ್ರಿಪಾಠಿ, ಮನೋಜ್ ನಾಗರಾಜ್, ದೀರ್ ಸಿಂಗ್, ಸೈಫ್ ಲೋಕಂಡ್ ವಾಲಾ, ಕಿಮ್ಸ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ‌‌. ರೋಹಿಣಿ ಪ್ರಿಯಾ ಲಕ್ಷ್ಮಿ, ಸ್ಮೈಲ್ಸ್ ಫೌಂಡೇಶನ್ ಆಂಡ್ ವರ್ಲ್ಡ್ ಆಂಟಿಸಮ್ ಸೊಸೈಟಿಯ ಸ್ಥಾಪಕ ಡಾ. ಮಲ್ಲಿಕಾರ್ಜುನ್, ಕಾಗ್ನಿಜಂಟ್ ನಿರ್ದೇಶಕ ರಾಜೇಶ್ ಟಿ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಬೆಂಗಳೂರು ಅಧ್ಯಕ್ಷ ಭರತ್ ರಾಜು, ಕೆಪಿಎಂಜಿ ನಿರ್ದೇಶಕ ಅಮಿತ್ ಚೌಧರಿ, ಜೈನ್ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಜಿತೇಂದ್ರ ಮಿಶ್ರಾ, ರಾಮಯ್ಯ ವಿಶ್ವವಿದ್ಯಾಲಯದ ಉಪಕುಲಪತಿ ಕುಲದೀಪ್ ರೈನಾ, ಇನ್ಪೋಸಿಸ್ ಸಂಸ್ಥೆಯ ವಿಪಿ ಆಂಡ್ ಎಲ್ ಅಂಡ್ ಡಿ ವಿಕ್ಟರ್ ಸುಂದರ್, ಡಿಜಿಟೈಡ್ ಉಪಾಧ್ಯಕ್ಷ ರೋಹನ್ ನಬಾರ್, ಡಬ್ಲುಎನ್ ಎಸ್ ಸಂಸ್ಥೆಯ ನಿರ್ದೇಶಕ ಜೋಯ್ ದಾಸ್, ಸಿಜಿಐ ಸಂಸ್ಥೆಯ ವೈಭವ್ ಮೋಹನ್, ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಉಪಾಧ್ಯಕ್ಷ ಭುವನೇಶ್ವರ್ ನಾಯ್ಕ್ ಹಾಗು ಮತ್ತಿತರರು ಉಪಸ್ಥಿತರಿದ್ದರು.

 ರೀಜೆನೆಸಸ್ ಎಜುಕೇಶನ್ ಸಂಸ್ಥೆಯ ಸಿಒಒ ರಜತ್ ಶರ್ಮಾ ಸ್ವಾಗತಿಸಿ, ಸಿಇಒ ವಿಜು ಜೋಯ್ ಪ್ರಾಸ್ತಾವಿಕ ನುಡಿಗಳೊಂದಿಗೆ ವಂದಿಸಿ, ಟೋನಿ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆ

ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ...

ಆಗಸ್ಟ್ 26 ರಂದು ಅಬುದಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ಧತೆ

ಅಬುದಾಬಿ: ಪ್ರವಾದಿ ಮುಹಮ್ಮದ್ ﷺ ರವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಕಲ್ಚರಲ್...

ಗ್ರೀನ್ ವೀವ್ ಶಾಲೆಯಲ್ಲಿ ನವೋದ್ಯಮ ಮತ್ತು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಕೊಣಾಜೆ, ಆ.18: ಗ್ರೀನ್ ವೀವ್ ಪ್ರೌಢಶಾಲೆ,ಅಡ್ಕರೆಪಡ್ಪು, ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್...

ಈದ್ ಮಿಲಾದ್ ಸಾರ್ವತ್ರಿಕ ರಜೆ ಆಗಸ್ಟ್ 25ಕ್ಕೆ ಬದಲಾವಣೆ: ಉಸ್ತುವಾರಿ ಸಚಿವ, ಡಿಸಿ ಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಮೀಲಾದ್ ಸರಕಾರಿ...